MalayalamNewsableKannadaKannadaPrabhaTeluguTamilBanglaHindiMarathiMyNation
Add Preferred SourceGoogle-icon
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಗ್ಯಾಲರಿ
  • ಮನರಂಜನೆ
  • ಜ್ಯೋತಿಷ್ಯ
  • ವೆಬ್‌ಸ್ಟೋರೀಸ್
  • ಜಿಲ್ಲಾ ಸುದ್ದಿ
  • ಕ್ರೀಡೆ
  • ಜೀವನಶೈಲಿ
  • ವಾಣಿಜ್ಯ
TRENDING :
Gowri Ganesha Habba Wishes
Engineer's Day Special
Ind vs Afg T20 Series
Bengaluru Metro Stations
Karnataka Power Crisis
Belagavi Cantonment Board
Today's Horoscope in Kannada
Satish Jarkiholi ED Complaint
BRICS Summit 2026
Agumbe Ghat Road Development
SSLC Toppers Reward
Bengaluru Tunnel Road Project
India-Russia Relations
Vijay Mallya
ED Investigation Satish Jarkiholi
Mangaluru Railway Zone
Devanahalli Land Dispute
Ganesh Festival Restrictions
  • Home
  • Sports
  • Cricket
  • T20 ವಿಶ್ವಕಪ್ ಗೆಲುವಿನ ಹಾದಿಯಲ್ಲಿ ಭಾರತೀಯರು ಎಂದಿಗೂ ಮರೆಯಲಾಗದ ಆರು ಸೂಪರ್ ಕ್ಷಣಗಳು

T20 ವಿಶ್ವಕಪ್ ಗೆಲುವಿನ ಹಾದಿಯಲ್ಲಿ ಭಾರತೀಯರು ಎಂದಿಗೂ ಮರೆಯಲಾಗದ ಆರು ಸೂಪರ್ ಕ್ಷಣಗಳು

ಭಾರತದ ಟಿ20 ವಿಶ್ವಕಪ್ ಗೆಲುವು ಸುಲಭವಾಗಿರಲಿಲ್ಲ, ಬದಲಿಗೆ ಹಲವು ಪಂದ್ಯಗಳಲ್ಲಿ ಸೋಲಿನ ಭೀತಿಯಿಂದ ಪಾರಾಗಿ ಬಂದಿತ್ತು. ಸೂರ್ಯಕುಮಾರ್, ಸಂಜು ಸ್ಯಾಮ್ಸನ್, ಬುಮ್ರಾ ಮತ್ತು ಅಕ್ಷರ್ ಪಟೇಲ್ ಅವರಂತಹ ಆಟಗಾರರ ನಿರ್ಣಾಯಕ, ಪವಾಡ ಸದೃಶ ಪ್ರದರ್ಶನಗಳು ತಂಡವನ್ನು ಚಾಂಪಿಯನ್‌ ಪಟ್ಟಕ್ಕೇರಿಸಿದವು.

2 Min read
Author : Kannadaprabha News
Published : Mar 09 2026, 08:43 AM IST
Share this Photo Gallery
  • FB
  • TW
  • Linkdin
  • Whatsapp
17
 ಸೂಪರ್‌ ಕ್ಷಣಗಳು
Image Credit : Chat GPT

ಸೂಪರ್‌ ಕ್ಷಣಗಳು

ಭಾರತ ಈ ಬಾರಿ ಟಿ20 ವಿಶ್ವಕಪ್‌ ಟ್ರೋಫಿಯನ್ನು ಏಕಪಕ್ಷೀಯವಾಗಿ ಗೆದ್ದಿದ್ದಲ್ಲ. ತಂಡ ಕೆಲ ಪಂದ್ಯಗಳಲ್ಲಿ ಸೋಲಿನ ಭೀತಿಯಲ್ಲಿದ್ದರೆ, ಇನ್ನೂ ಕೆಲ ಪಂದ್ಯಗಳಲ್ಲಿ ಒದ್ದಾಡಿ ಗೆಲುವು ಸಾಧಿಸಿದೆ. ಇನ್ನೇನು ತಂಡ ಸೋಲಲಿದೆ ಎನ್ನುವಷ್ಟರಲ್ಲಿ ಪವಾಡ ರೀತಿಯಲ್ಲಿ ಗೆಲುವು ಒಲಿದಿದೆ. ಅಂಥ ಸೂಪರ್‌ ಕ್ಷಣಗಳನ್ನು ಒಮ್ಮೆ ಮೆಲುಕು ಹಾಕೋಣ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred
27
ಅಮೆರಿಕ ವಿರುದ್ಧ ಭಾರತಕ್ಕೆ ಬೆಳಕಾದ ನಾಯಕ ಸೂರ್ಯ
Image Credit : Getty

ಅಮೆರಿಕ ವಿರುದ್ಧ ಭಾರತಕ್ಕೆ ಬೆಳಕಾದ ನಾಯಕ ಸೂರ್ಯ

ಭಾರತ ತನ್ನ ಆರಂಭಿಕ ಪಂದ್ಯದಲ್ಲಿ, ಅದು ಕೂಡಾ ಅಮೆರಿಕ ವಿರುದ್ಧ ಸೋಲುವ ಭೀತಿಯಲ್ಲಿತ್ತು. ಆ ಪಂದ್ಯದಲ್ಲಿ ಭಾರತ 13 ಓವರ್‌ವರೆಗೂ 80ರ ಗಡಿ ದಾಟಿರಲಿಲ್ಲ. ಈ ವೇಳೆ ತಂಡಕ್ಕೆ ಆಪತ್ಬಾಂಧವರಾಗಿ ಬಂದಿದ್ದು ನಾಯಕ ಸೂರ್ಯ. 49 ಎಸೆತದಲ್ಲಿ ಅವರು ಗಳಿಸಿದ 84 ರನ್‌ ಪಂದ್ಯದ ಚಿತ್ರಣ ಬದಲಿಸಿತು. ಭಾರತ 9 ವಿಕೆಟ್‌ಗೆ 161 ರನ್ ಸಿಡಿಸಿ, 29 ರನ್‌ಗಳಿಂದ ಪಂದ್ಯ ಗೆದ್ದಿತು.

Related Articles

Related image1
ಟಿ20 ವಿಶ್ವಕಪ್ ಫೈನಲ್‌ನಲ್ಲಿ ಐತಿಹಾಸಿಕ ದಾಖಲೆಗಳನ್ನು ನಿರ್ಮಿಸಿದ ಟೀಂ ಇಂಡಿಯಾ; ರೆಕಾರ್ಡ್ ಪಟ್ಟಿ
Related image2
ಭಾರತದ ಪರಾಕ್ರಮಕ್ಕೆ ನ್ಯೂಜಿಲೆಂಡ್‌ ಪತನ! ನಿನ್ನೆ ಮ್ಯಾಚ್‌ನಲ್ಲಿ ಟೀಂ ಇಂಡಿಯಾ ಅಬ್ಬರ ಹೇಗಿತ್ತು?
37
ಪಾಕ್‌ ವಿರುದ್ಧ ಗೆಲುವಿನ ರೂವಾರಿ ಇಶಾನ್‌ ಕಿಶನ್
Image Credit : Getty

ಪಾಕ್‌ ವಿರುದ್ಧ ಗೆಲುವಿನ ರೂವಾರಿ ಇಶಾನ್‌ ಕಿಶನ್

ಸ್ಪಿನ್ನರ್‌ಗಳಿಂದಲೇ ಭಾರತವನ್ನು ಕಟ್ಟಿಹಾಕುವ ಯೋಜನೆಯಲ್ಲಿದ್ದ ಪಾಕ್‌, ತನ್ನ ಬೌಲಿಂಗ್‌ನಲ್ಲಿ ಹೆಚ್ಚೂಕಡಿಮೆ ಮೇಲುಗೈ ಸಾಧಿಸಿತ್ತು. ಆದರೆ ಬಹುತೇಕ ಎಲ್ಲಾ ಬ್ಯಾಟರ್ಸ್‌ ಎಸೆತಕ್ಕೆ ಒಂದರಂತೆ ರನ್‌ ಗಳಿಸುತ್ತಿದ್ದರೆ, ಇಶಾನ್‌ ಮಾತ್ರ ಸ್ಫೋಟಕ ಆಟವಾಡಿದರು. ಕೇವಲ 40 ಎಸೆತದಲ್ಲಿ 77 ರನ್‌ ಚಚ್ಚಿದರು. ತಂಡ 175 ರನ್‌ ಕಲೆಹಾಕಿತು. ಇದರಿಂದ ಒತ್ತಡಕ್ಕೊಳಗಾಗಿ ಆಡಿದ ಪಾಕ್‌, ಕೇವಲ 114ಕ್ಕೆ ಆಲೌಟಾಯಿತು.

47
ಡಚ್ಚರಿಗೆ ಶಿವಂ ದುಬೆ ಡಿಚ್ಚಿ
Image Credit : Getty

ಡಚ್ಚರಿಗೆ ಶಿವಂ ದುಬೆ ಡಿಚ್ಚಿ

ಗುಂಪು ಹಂತದಲ್ಲಿ ನೆದರ್‌ಲೆಂಡ್ಸ್‌ ವಿರುದ್ಧ ಶಿವಂ ದುಬೆ ಆಟ ಅಮೋಘ. ನಿಧಾನಗತಿಯಲ್ಲಿದ್ದ ತಂಡದ ಸ್ಕೋರಿಂಗ್‌ ವೇಗವನ್ನು ಹೆಚ್ಚಿಸಿ ಕೇವಲ 31 ಎಸೆತದಲ್ಲಿ 212.90ರ ಸ್ಟ್ರೈಕ್‌ರೇಟ್‌ನಲ್ಲಿ 66 ರನ್‌ ಗಳಿಸಿದ ದುಬೆ, ಬೌಲಿಂಗ್‌ನಲ್ಲೂ ತಂಡವನ್ನು ಕಾಪಾಡಿದರು. 2 ವಿಕೆಟ್‌ ಕಿತ್ತು ತಂಡಕ್ಕೆ ಮೇಲುಗೈ ಒದಗಿಸಿದರು.

57
ದೀರ್ಘಕಾಲ ನೆನಪಿನಲ್ಲಿರಲಿದೆ ಸಂಜು ಸ್ಯಾಮ್ಸನ್‌ರ 2 ಇನ್ನಿಂಗ್ಸ್‌
Image Credit : Asianet News

ದೀರ್ಘಕಾಲ ನೆನಪಿನಲ್ಲಿರಲಿದೆ ಸಂಜು ಸ್ಯಾಮ್ಸನ್‌ರ 2 ಇನ್ನಿಂಗ್ಸ್‌

ಭಾರತ ಈಗ ವಿಶ್ವ ಚಾಂಪಿಯನ್‌ ಆಗಿದ್ದರೆ ಅದರ ಹಿಂದೆ ಸಂಜು ಸ್ಯಾಮ್ಸನ್‌ರ 2 ಅಮೋಘ, ನಿರ್ಣಾಯಕ ಇನ್ನಿಂಗ್ಸ್‌ನ ಪಾತ್ರ ಬಲುದೊಡ್ಡದು. ಸೂಪರ್‌-8ನ ವಿಂಡೀಸ್‌ ವಿರುದ್ಧ ನಿರ್ಣಾಯಕ ಪಂದ್ಯದಲ್ಲಿ ಆಡುವ ಅವಕಾಶ ಪಡೆದ ಸಂಜು, ಆ ಪಂದ್ಯವನ್ನು ಏಕಾಂಗಿಯಾಗಿಯೇ ಗೆಲ್ಲಿಸಿಕೊಟ್ಟರು. ಇತರರು ಕೈಕೊಟ್ಟ ಪಂದ್ಯದಲ್ಲಿ 50 ಎಸೆತದಲ್ಲಿ ಔಟಾಗದೆ 97 ರನ್‌ ಗಳಿಸಿದರು. ಸೆಮೀಸ್‌ನಲ್ಲೂ ಸಂಜು ಭಾರತದ ಪಾಲಿನ ಹೀರೋ. ಇಂಗ್ಲೆಂಡ್ ವಿರುದ್ಧ 42 ಎಸೆತಕ್ಕೆ 89 ರನ್‌ ಗಳಿಸಿ ತಂಡವನ್ನು ಫೈನಲ್‌ಗೇರಿಸಿದರು.

67
ಡೆತ್‌ ಓವರಲ್ಲಿ ಬೂಮ್ರಾ 2 ಓವರ್‌ ಡೆಡ್ಲಿ ಬೌಲಿಂಗ್‌
Image Credit : X@bcci

ಡೆತ್‌ ಓವರಲ್ಲಿ ಬೂಮ್ರಾ 2 ಓವರ್‌ ಡೆಡ್ಲಿ ಬೌಲಿಂಗ್‌

ಸೆಮೀಸ್‌ನಲ್ಲಿ 254 ರನ್‌ ಗುರಿ ಬೆನ್ನತ್ತಿ, ಗೆಲುವಿನ ಸನಿಹದಲಿದ್ದ ಇಂಗ್ಲೆಂಡ್‌ಗೆ ಬೂಮ್ರಾ ನೀಡಿದ ಆಘಾತವನ್ನು ಭಾರತೀಯ ಅಭಿಮಾನಿಗಳು, ಇಂಗ್ಲೆಂಡ್‌ ಕ್ರಿಕೆಟಿಗರು ಇನ್ನೊಂದಿಷ್ಟು ವರ್ಷ ಮರೆಯಲು ಸಾಧ್ಯವಿಲ್ಲ. ಇಂಗ್ಲೆಂಡ್‌ ಕೊನೆ 30 ಎಸೆತದಲ್ಲಿ 69 ರನ್‌ ಗಳಿಸಬೇಕಿತ್ತು. ಬೂಮ್ರಾ 16ನೇ ಓವರ್‌ನಲ್ಲಿ 8 ಹಾಗೂ 18ನೇ ಓವರ್‌ನಲ್ಲಿ ಕೇವಲ 6 ರನ್‌ ನೀಡಿದರು. ಅಲ್ಲಿಗೆ ಪಂದ್ಯದ ಚಿತ್ರಣ ಬದಲಾಯಿತು. ಬಾಕಿ 3 ಓವರ್‌ನಲ್ಲಿ ಇಂಗ್ಲೆಂಡ್ 47 ರನ್ ಬಾರಿಸಿದರೂ ಗೆಲ್ಲಲಾಗಲಿಲ್ಲ.

ಇದನ್ನೂ ಓದಿ: ನಾಯಕ ಸೂರ್ಯಗೆ 100ಕ್ಕೆ 100 ಅಂಕ ನೀಡಿದ ಕ್ರಿಕೆಟ್ ಅಭಿಮಾನಿಗಳು; ಸರಣಿ ಸಾಧನೆಗಳು ಇಲ್ಲಿವೆ

77
ಅಕ್ಷರ್‌ ಪಟೇಲ್‌ರ 2 ಮ್ಯಾಜಿಕಲ್‌ ಕ್ಯಾಚ್‌
Image Credit : X@BCCI

ಅಕ್ಷರ್‌ ಪಟೇಲ್‌ರ 2 ಮ್ಯಾಜಿಕಲ್‌ ಕ್ಯಾಚ್‌

ಸೆಮೀಸ್‌ನಲ್ಲಿ ಅಕ್ಷರ್‌ ಪಟೇಲ್‌ 2 ಅತ್ಯದ್ಭುತ ಕ್ಯಾಚ್‌ ಪಡೆಯದೇ ಇದ್ದಿದ್ದರೆ ಭಾರತ ಫೈನಲ್‌ಗೇರುತ್ತಿರಲಿಲ್ಲ, ಕಪ್‌ ಕೂಡಾ ಸಿಗುತ್ತಿರಲಿಲ್ಲ. 5ನೇ ಓವರ್‌ನಲ್ಲಿ ಬ್ರೂಕ್‌ ಬಾರಿಸಿದ ಚೆಂಡನ್ನು ಡೀಪ್‌ ಪಾಯಿಂಟ್‌ವರೆಗೆ ಹಿಂದಕ್ಕೆ ಓಡಿ ಅಕ್ಷರ್‌ ಪಡೆದ ಕ್ಯಾಚ್‌ ಅಮೋಘ. ಬಳಿಕ 14ನೇ ಓವರ್‌ನಲ್ಲಿ ಅಪಾಯಕಾರಿ ಜ್ಯಾಕ್ಸ್‌ ಬಾರಿಸಿದ ಚೆಂಡು ಇನ್ನೇನು ಬೌಂಡರಿ ಲೈನ್‌ ದಾಟಿತು ಎನ್ನುವಷ್ಟರಲ್ಲಿ ಅಕ್ಷರ್‌ ಪಟೇಲ್‌ ಸಾಹಸಿಕವಾಗಿ ಹಿಡಿದು, ಶಿವಂ ದುಬೆ ಅವರತ್ತ ಎಸೆದರು. ದುಬೆ ಕ್ಯಾಚ್‌ ಪಡೆದು, ಜ್ಯಾಕ್ಸ್‌ ಔಟಾದರು. ಭಾರತ ಗೆಲುವಿನ ಹಾದಿ ಸುಗಮಗೊಂಡಿತು.

ಇದನ್ನೂ ಓದಿ: T20ಯಲ್ಲಿ ಭಾರತ ಪವರ್ ಹೌಸ್ ಆಗಿದ್ದೇಗೆ? ಟೀಂ ಇಂಡಿಯಾ ಗೆಲುವಿಗೆ ಕಾರಣವಾದ ಸೂತ್ರಗಳು

ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

About the Author

KN
Kannadaprabha News
1967ರ ನವೆಂಬರ್ 4ರಂದು ಆರಂಭವಾದ ಕನ್ನಡಪ್ರಭ ಕನ್ನಡ ಪತ್ರಿಕೋದ್ಯಮದಲ್ಲಿಯೇ ವಿಶೇಷ ಛಾಪು ಮೂಡಿಸಿದ ಕನ್ನಡ ದಿನ ಪತ್ರಿಕೆ. ದೇಶ, ವಿದೇಶ, ವಾಣಿಜ್ಯ, ಕ್ರೀಡೆ, ಮನೋರಂಜನೆ ಸೇರಿ ವೈವಿಧ್ಯಮಯ ಸುದ್ದಿಗಳ ಹೂರಣ ಹೊತ್ತು ತರುವ ಕನ್ನಡಪ್ರಭ, ಕನ್ನಡಿಗರ ಅಸ್ಮಿತೆಯ ಸಂಕೇತ. ಸದಾ ಕರುನಾಡು, ನುಡಿ, ಸಂಸ್ಕೃತಿ ಪರ ಧ್ವನಿ ಎತ್ತುವ ಕನ್ನಡಪ್ರಭ ದಿನ ಪತ್ರಿಕೆಯಲ್ಲಿ ಪ್ರಕಟಗೊಳ್ಳುವ ಸುದ್ದಿಗಳು ಸುವರ್ಣ ನ್ಯೂಸ್ ವೆಬ್‌ಸೈಟಲ್ಲೂ ಲಭ್ಯ.
ಸೂರ್ಯಕುಮಾರ್ ಯಾದವ್
ಐಸಿಸಿ ಟಿ20 ವಿಶ್ವಕಪ್
ಟೀಮ್ ಇಂಡಿಯಾ
ಕ್ರಿಕೆಟ್
ಬಾಡಿಗೆ ತಾಯಿ
ಜಸ್ಪ್ರೀತ್ ಬುಮ್ರಾ
ವಿಶ್ವಕಪ್

Latest Videos
Recommended Stories
Recommended image1
Cricket: 'ಇಮ್ರಾನ್ ಖಾನ್‌ರನ್ನು ಜೈಲಿನಿಂದ ಬಿಡುಗಡೆ ಮಾಡಿ ಎಂದು ಪ್ರಚಾರ ನಡೆಸಿದ್ದ ಮಾಜಿ ಪತ್ನಿ ಎರಡನೇ ಮದುವೆ, ಪತಿ ಯಾರು ಗೊತ್ತಾ?
Recommended image2
1 ಪಂದ್ಯ, 55 ರನ್, ಔಟಾಗದೇ ಉಳಿದರೂ ಮತ್ತೆಂದೂ ಭಾರತ ತಂಡದಲ್ಲಿ ಜಾಗ ಸಿಗಲಿಲ್ಲ, ಧೋನಿ ಚಾನ್ಸ್‌ ಕೊಡಲಿಲ್ವಾ?
Recommended image3
15ನೇ ವಯಸ್ಸಿಗೆ rs 1.5 ಕೋಟಿ! ಸೂರ್ಯವಂಶಿ ಹಿಂದೆ ದೊಡ್ಡ ಬಿಸಿನೆಸ್ ಜಾಲ? ಶಾಕಿಂಗ್ ನ್ಯೂಸ್
Related Stories
Recommended image1
ಟಿ20 ವಿಶ್ವಕಪ್ ಫೈನಲ್‌ನಲ್ಲಿ ಐತಿಹಾಸಿಕ ದಾಖಲೆಗಳನ್ನು ನಿರ್ಮಿಸಿದ ಟೀಂ ಇಂಡಿಯಾ; ರೆಕಾರ್ಡ್ ಪಟ್ಟಿ
Recommended image2
ಭಾರತದ ಪರಾಕ್ರಮಕ್ಕೆ ನ್ಯೂಜಿಲೆಂಡ್‌ ಪತನ! ನಿನ್ನೆ ಮ್ಯಾಚ್‌ನಲ್ಲಿ ಟೀಂ ಇಂಡಿಯಾ ಅಬ್ಬರ ಹೇಗಿತ್ತು?
News
kannada newslatest kannada newskarnataka newsbengaluru newsMysore newsindia news in kannadainternational news in kannada
Entertainment News
Kannada Cinema Newskannada movies reviewsandalwood newskannada tv shows
Sports News
sports news in kannadacricket news in kannadaOther Sports News in Kannada
Business News
Business news in kannadashare market news in kannadabusiness ideas in kannada
Science & Technology
technology news in kannadamobile tech newsscience and tech news
Astrology
rashi bhavishya in kannadadina bhavishyavara bhavishyavastu shastra in kannadakarnataka festivals
Lifestyle
Lifestyle news in kannadafood recipes in kannadahealth tips in kannadakitchen tips in kannada
Education & Career
job news in kannadaPrivate Jobsbank jobs in karnatakaGovernment jobs in karnatakaCentral Govt Jobs in KannadaIT Jobs
Asianet
Follow us on
  • Facebook
  • Twitter
  • whatsapp
  • YT video
  • insta
  • Download on Android
  • Download on IOS
  • About Website
  • About Tv
  • Terms of Use
  • Privacy Policy
  • CSAM Policy
  • Complaint Redressal - Website
  • Complaint Redressal - TV
  • Compliance Report Digital
  • Investors
© Copyright 2026 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved