ಸಾಕಷ್ಟು ಜಾಹೀರಾತುಗಳಿಗೆ ಬಣ್ಣ ಹಚ್ಚಿರುವ ಟೀಂ ಇಂಡಿಯಾದ ಕ್ಯಾಪ್ಟನ್ ವಿರಾಟ್ ಕೊಹ್ಲಿ, ಬಾಲಿವುಡ್‌ಗೆ ಎಂಟ್ರಿ ಕೊಡ್ತಾರಾ?  ಸದ್ದಿಲ್ಲದೆ ಕೊಹ್ಲಿ ಏನಾದ್ರು ಸಿನಿಮಾ ಮಾಡುತ್ತಿದ್ದಾರಾ? ಎನ್ನುವ ಸುದ್ದಿ ಹಬ್ಬಿದೆ.

ನವದೆಹಲಿ, (ಸೆ.21): ಈಗಾಗಲೇ ಸಾಕಷ್ಟು ಜಾಹೀರಾತುಗಳಿಗೆ ಬಣ್ಣ ಹಚ್ಚಿರುವ ಟೀಂ ಇಂಡಿಯಾದ ಕ್ಯಾಪ್ಟನ್ ವಿರಾಟ್ ಕೊಹ್ಲಿ, ಬಾಲಿವುಡ್‌ಗೆ ಎಂಟ್ರಿ ಕೊಡ್ತಾರಾ ಎನ್ನುವ ಸುದ್ದಿ ಹಬ್ಬಿದೆ. ಇಂತಹದೊಂದು ಸುದ್ದಿಗೆ ಕಾರಣವಾಗಿದ್ದು ವಿರಾಟ್ ಮಾಡಿರುವ ಟ್ವೀಟ್.

ಹೌದು.. ಏಷ್ಯಾಕಪ್‌ನಿಂದ ಹೊರಗುಳಿದು ಫುಲ್ ರೆಸ್ಟ್ ಮೂಡ್‌ನಲ್ಲಿರುವ ವಿರಾಟ್, ಸಿನಿಮಾ ಪೋಸ್ಟರ್‌ವೊಂದರಲ್ಲಿ ಆ್ಯಕ್ಷನ್ ಹೀರೋ ತರ ಫೋಸ್ ಕೊಟ್ಟು ಟ್ವೀಟ್ ಮಾಡಿದ್ದಾರೆ. 10 ವರ್ಷಗಳ ಬಳಿಕ ಎಂಟ್ರಿ ಅಂತ ಟ್ವೀಟ್ ಮಾಡಿದ್ದಾರೆ.

Scroll to load tweet…

ಕೊಹ್ಲಿ ಅವರ ಈ ಟ್ವೀಟ್ ಅಭಿಮಾನಿಗಳಲ್ಲಿ ಹಲವು ಗೊಂದಲಗಳು ಮೂಡಿಸಿವೆ. ಸದ್ದಿಲ್ಲದೆ ವಿರಾಟ್ ಸಿನಿಮಾ ಮಾಡುತ್ತಿದ್ದಾರಾ? ಅಥವಾ ಮಡದಿ ಅನುಷ್ಕಾ ಶರ್ಮಾ ಅವರ ಚಿತ್ರಕ್ಕೆ ಈ ರೀತಿಯಾಗಿ ಟ್ವೀಟ್ ಮಾಡಿದ್ದಾರಾ ಎನ್ನುವ ಪ್ರಶ್ನೆಗಳು ಅಭಿಮಾನಿಗಳನ್ನ ಕಾಡುತ್ತಿವೆ.