ಭಾರತ ಈ ಸರಣಿಯಲ್ಲಿ ಒಂದು ಪಂದ್ಯ ಗೆದ್ದರೂ ಸಾಕು ತನ್ನ ಅಗ್ರ ಪಟ್ಟವನ್ನು ಉಳಿಸಿಕೊಳ್ಳುವ ಅವಕಾಶ ಹೊಂದಿದೆ.
ಬೆಂಗಳೂರು(ಫೆ. 20): ಆಸ್ಟ್ರೇಲಿಯಾ ವಿರುದ್ಧದ ನಾಲ್ಕು ಪಂದ್ಯಗಳ ಟೆಸ್ಟ್ ಸರಣಿಯ ಮೊದಲ ಪಂದ್ಯದಲ್ಲಿ ಭಾರತ ಗೆದ್ದರೆ ಅಂತಾರಾಷ್ಟ್ರೀಯ ಕ್ರಿಕೆಟ್ ಸಂಸ್ಥೆಯು 1 ಮಿಲಿಯನ್ ಡಾಲರ್ ಕ್ಯಾಷ್ ಪ್ರೈಸ್ ನೀಡಲಿದೆ. ಅಂದರೆ, ತಂಡದ ಆಟಗಾರರು ಸುಮಾರು ಆರೂವರೆ ಕೋಟಿ ರೂಪಾಯಿಯನ್ನು ಗಳಿಸಲಿದ್ದಾರೆ.
ಸರಣಿಯ ಮೊದಲ ಪಂದ್ಯ ಗೆದ್ದರೆ ಟೀಮ್ ಇಂಡಿಯಾ ವಿಶ್ವ ಟೆಸ್ಟ್ ರ್ಯಾಂಕಿಂಗ್'ನಲ್ಲಿ ಮೊದಲ ಪಟ್ಟ ಉಳಿಸಿಕೊಳ್ಳಲಿದೆ. ಈ ಹಿನ್ನೆಲೆಯಲ್ಲಿ ಐಸಿಸಿ ಬಹುಮಾನ ನೀಡುತ್ತದೆ.
ಈ ಮೊದಲು ಅಗ್ರಶ್ರೇಯಾಂಕಿತ ತಂಡಕ್ಕೆ ನೀಡಲಾಗುತ್ತಿದ್ದ 5 ಲಕ್ಷ ಡಾಲರ್ ಹಣದ ಮೊತ್ತವನ್ನು ಕಳೆದ ಮೂರು ವರ್ಷಗಳಿಂದ ದ್ವಿಗುಣಗೊಳಿಸಲಾಗಿದೆ.
ಆದರೆ, ಭಾರತಕ್ಕಿಂತ 12 ರೇಟಿಂಗ್ ಪಾಯಿಂಟ್ಸ್ ಕಡಿಮೆ ಇರುವ ಆಸ್ಟ್ರೇಲಿಯಾ ನಂಬರ್ ಒನ್ ಸ್ಥಾನಕ್ಕೇರುವ ಅವಕಾಶ ಈ ಸರಣಿಯಲ್ಲಿದೆ. ನಾಲ್ಕು ಪಂದ್ಯಗಳ ಸರಣಿಯಲ್ಲಿ ಒಮದೂ ಸೋಲದೇ ಕನಿಷ್ಠ 3 ಪಂದ್ಯಗಳನ್ನು ಗೆದ್ದರೆ ಆಸ್ಟ್ರೇಲಿಯಾ ತಂಡವು ಭಾರತವನ್ನು ಹಿಂದಿಕ್ಕಿ ನಂಬರ್ ಒನ್ ಪಟ್ಟ ಅಲಂಕರಿಸಲಿದೆ. ಭಾರತ ಈ ಸರಣಿಯಲ್ಲಿ ಒಂದು ಪಂದ್ಯ ಗೆದ್ದರೂ ಸಾಕು ತನ್ನ ಅಗ್ರ ಪಟ್ಟವನ್ನು ಉಳಿಸಿಕೊಳ್ಳುವ ಅವಕಾಶ ಹೊಂದಿದೆ.
ಇದೇ ಫೆ. 23ರಂದು ಎರಡೂ ದೇಶಗಳ ನಡುವೆ ಮೊದಲ ಟೆಸ್ಟ್ ಪಂದ್ಯ ಆರಂಭವಾಗಲಿದೆ. ಪುಣೆಯಲ್ಲಿ ಮೊದಲ ಪಂದ್ಯ ನಡೆಯಲಿದೆ.
