ಮುಂದಿನ 5 ವರ್ಷಗಳಲ್ಲಿ ಟೀಂ ಇಂಡಿಯಾ ಆಡಲಿದೆ 203 ಪಂದ್ಯ..!

Indian cricket team to play 203 international games including 51 Tests
Highlights

ಐಸಿಸಿ ಪ್ರಕಟಿಸಿರುವ 2018-2023ರ ಭವಿಷ್ಯದ ಪಂದ್ಯಗಳ ವೇಳಾಪಟ್ಟಿ ಪ್ರಕಾರ ಭಾರತ, 51 ಟೆಸ್ಟ್, 83 ಏಕದಿನ ಮತ್ತು 69 ಟಿ20 ಪಂದ್ಯಗಳನ್ನಾಡಲಿದೆ.

ನವದೆಹಲಿ(ಜೂ.22): ವಿಶ್ವ ಕ್ರಿಕೆಟ್‌ನಲ್ಲಿ ಅತ್ಯಂತ ಹೆಚ್ಚು ಬೇಡಿಕೆ ಹೊಂದಿರುವ ಭಾರತ ತಂಡ, ಮುಂದಿನ 5 ವರ್ಷಗಳಲ್ಲಿ 3 ಮಾದರಿಯಲ್ಲಿ ಒಟ್ಟು 203 ಅಂತಾರಾಷ್ಟ್ರೀಯ ಪಂದ್ಯಗಳನ್ನು ಆಡಲಿದೆ. 

ಐಸಿಸಿ ಪ್ರಕಟಿಸಿರುವ 2018-2023ರ ಭವಿಷ್ಯದ ಪಂದ್ಯಗಳ ವೇಳಾಪಟ್ಟಿ ಪ್ರಕಾರ ಭಾರತ, 51 ಟೆಸ್ಟ್, 83 ಏಕದಿನ ಮತ್ತು 69 ಟಿ20 ಪಂದ್ಯಗಳನ್ನಾಡಲಿದೆ. ವಿಶ್ವದ ಇನ್ನುಳಿದ ಕ್ರಿಕೆಟ್ ತಂಡಗಳಿಗೆ ಹೋಲಿಸಿದರೆ, ಭಾರತ ಅತಿಹೆಚ್ಚು ಪಂದ್ಯಗಳನ್ನಾಡಲಿದೆ. ಈ ಅವಧಿಯಲ್ಲಿ ವೆಸ್ಟ್ ಇಂಡೀಸ್ ಮತ್ತು ಇಂಗ್ಲೆಂಡ್ ಕ್ರಮವಾಗಿ 186 ಮತ್ತು 175 ಪಂದ್ಯಗಳನ್ನಾಡಲಿವೆ. ಆಸ್ಟ್ರೇಲಿಯಾ 174 ಪಂದ್ಯಗಳನ್ನಾಡಲಿದೆ.

ಇದನ್ನು ಓದಿ: ಐಸಿಸಿ ಟೆಸ್ಟ್ ಚಾಂಪಿಯನ್‌ಶಿಪ್ ವೇಳಾಪಟ್ಟಿ ಪ್ರಕಟ

ಇನ್ನು ಟೆಸ್ಟ್ ಕ್ರಿಕೆಟ್ ವಿಚಾರಕ್ಕೆ ಬಂದರೆ ಇಂಗ್ಲೆಂಡ್ ಅತಿಹೆಚ್ಚು[59] ಟೆಸ್ಟ್ ಪಂದ್ಯಗಳನ್ನಾಡಲಿದ್ದು, ಭಾರತ[51] ಎರಡನೇ ಸ್ಥಾನದಲ್ಲಿದೆ. ಆಸ್ಟ್ರೇಲಿಯಾ ತಂಡವು 47 ಟೆಸ್ಟ್ ಪಂದ್ಯಗಳನ್ನಾಡಲಿದೆ.

loader