Asianet Suvarna News Asianet Suvarna News

ಐಸಿಸಿ ಟೆಸ್ಟ್ ಚಾಂಪಿಯನ್‌ಶಿಪ್ ವೇಳಾಪಟ್ಟಿ ಪ್ರಕಟ

2018-2023ರವರೆಗಿನ ಐಸಿಸಿ ವೇಳಾಪಟ್ಟಿಯನ್ನು ಕ್ರಿಕೆಟ್ ಆಡಳಿತ ಮಂಡಳಿ ಬಿಡುಗಡೆಗೊಳಿಸಿತು. ಐಸಿಸಿ ನಿಯಮದಂತೆ ಅಗ್ರ 9 ಶ್ರೇಯಾಂಕಿತ ತಂಡಗಳು ಚೊಚ್ಚಲ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಟೂರ್ನಿಯಲ್ಲಿ ಪಾಲ್ಗೊಳ್ಳಲಿವೆ. 2019ರ ಜುಲೈ 15ರಿಂದ 2021ರ ಏಪ್ರಿಲ್ 30ರ ವರೆಗೆ ಈ ಪಂದ್ಯಾವಳಿಗಳು ನಡೆಯಲಿವೆ.

ICC World Test Championship India to play West Indies in July 2019
  • Facebook
  • Twitter
  • Whatsapp

ದುಬೈ(ಜೂ.20]: ಬಹುನಿರೀಕ್ಷಿತ ಐಸಿಸಿ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ವೇಳಾಪಟ್ಟಿ ಪ್ರಕಟಗೊಂಡಿದ್ದು 2019ರ ಜುಲೈನಲ್ಲಿ ಕೆರಿಬಿಯನ್’ನಲ್ಲಿ ಭಾರತ ತಂಡವು ವೆಸ್ಟ್’ಇಂಡಿಸ್ ತಂಡವನ್ನು ಎದುರಿಸಲಿದೆ. 

2018-2023ರವರೆಗಿನ ಐಸಿಸಿ ವೇಳಾಪಟ್ಟಿಯನ್ನು ಕ್ರಿಕೆಟ್ ಆಡಳಿತ ಮಂಡಳಿ ಬಿಡುಗಡೆಗೊಳಿಸಿತು. ಐಸಿಸಿ ನಿಯಮದಂತೆ ಅಗ್ರ 9 ಶ್ರೇಯಾಂಕಿತ ತಂಡಗಳು ಚೊಚ್ಚಲ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಟೂರ್ನಿಯಲ್ಲಿ ಪಾಲ್ಗೊಳ್ಳಲಿವೆ. 2019ರ ಜುಲೈ 15ರಿಂದ 2021ರ ಏಪ್ರಿಲ್ 30ರ ವರೆಗೆ ಈ ಪಂದ್ಯಾವಳಿಗಳು ನಡೆಯಲಿವೆ.

ಪ್ರತಿ ತಂಡವು ಎರಡು ವರ್ಷಗಳ ಅವಧಿಯಲ್ಲಿ ಪ್ರತಿ ತಂಡವು 6 ತವರು ಹಾಗೂ ತವರಿನಾಚೆ ಸರಣಿಗಳನ್ನು ಆಡಲಿದೆ. ಜೂನ್ 2021ರ ವೇಳೆಗೆ ಅಗ್ರ 2 ಶ್ರೇಯಾಂಕ ಹೊಂದಿರುವ ತಂಡಗಳು ಪ್ರಶಸ್ತಿ ಸುತ್ತಿನಲ್ಲಿ ಸೆಣಸಲಿವೆ. ಇಂಗ್ಲೆಂಡ್ ನೆಲದಲ್ಲಿ ನಡೆಯುವ ಆ್ಯಷಸ್ ಸರಣಿ ಮೂಲಕ ಐತಿಹಾಸಿಕ ಟೂರ್ನಿ ಆರಂಭಗೊಳ್ಳಲಿದೆ. 

ಇನ್ನು ಭಾರತ ತಂಡವು 2023ರಲ್ಲಿ ಐಸಿಸಿ ಏಕದಿನ ವಿಶ್ವಕಪ್ ಟೂರ್ನಿಗೆ ಆತಿಥ್ಯ ವಹಿಸಲಿದೆ.

Follow Us:
Download App:
  • android
  • ios