‘ಇತ್ತೀಚೆಗೆ ನಡೆದ ಸಭೆಯಲ್ಲಿ ಬಿಸಿಸಿಐನ ಮನವಿಯನ್ನು ಸಿಒಎ ಪುರಸ್ಕರಿಸಿದೆ’ ಎಂದು ಬಿಸಿಸಿಐ ಹಂಗಾಮಿ ಅಧ್ಯಕ್ಷ ಸಿ.ಕೆ.ಖನ್ನಾ ತಿಳಿಸಿದ್ದಾರೆ.

ನವದೆಹಲಿ(ನ.14): ಭಾರತೀಯ ಕ್ರಿಕೆಟಿಗರಿಗೆ ದೇಶದೊಳಗಿನ ವಿಮಾನಯಾನದ ವೇಳೆ ಬ್ಯುಸಿನೆಸ್ ಕ್ಲಾಸ್‌'ನಲ್ಲಿ ಪ್ರಯಾಣಿಸಲು ಸುಪ್ರೀಂಕೋರ್ಟ್ ನೇಮಿತ ಬಿಸಿಸಿಐನ ಆಡಳಿತ ಮಂಡಳಿ (ಸಿಒಎ) ಸಮ್ಮತಿ ಸೂಚಿಸಿದೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಭಾರತದಲ್ಲಿ ಪಂದ್ಯಗಳು ನಡೆಯುವ ಸಂದರ್ಭದಲ್ಲಿ ಆಟಗಾರರು ಒಂದು ಸ್ಥಳದಿಂದ ಮತ್ತೊಂದು ಸ್ಥಳಕ್ಕೆ ತೆರಳಲು ಎಕಾನಮಿ ಕ್ಲಾಸ್‌'ನಲ್ಲಿ ಪ್ರಯಾಣಿಸಬೇಕಿತ್ತು. ಇದರಿಂದ ಆಟಗಾರರ ಖಾಸಗಿತನಕ್ಕೆ ಧಕ್ಕೆಯುಂಟಾಗುತ್ತಿತ್ತು, ಅಲ್ಲದೇ ಉದ್ದವಿರುವ ಆಟಗಾರರು ಕಾಲುಚಾಚಲು ಕಷ್ಟವಾಗುತ್ತಿತ್ತು. ಆದ ಕಾರಣ ಬ್ಯುಸಿನೆಸ್ ಕ್ಲಾಸ್ ಸೌಲಭ್ಯ ಒದಗಿಸುವಂತೆ ಆಟಗಾರರು ಮನವಿ ಮಾಡಿಕೊಂಡಿದ್ದರು. ಆಟಗಾರರ ಮನವಿಯನ್ನು ಬಿಸಿಸಿಐ, ಸಿಒಎ ಮುಂದೆ ಇರಿಸಿತ್ತು.

‘ಇತ್ತೀಚೆಗೆ ನಡೆದ ಸಭೆಯಲ್ಲಿ ಬಿಸಿಸಿಐನ ಮನವಿಯನ್ನು ಸಿಒಎ ಪುರಸ್ಕರಿಸಿದೆ’ ಎಂದು ಬಿಸಿಸಿಐ ಹಂಗಾಮಿ ಅಧ್ಯಕ್ಷ ಸಿ.ಕೆ.ಖನ್ನಾ ತಿಳಿಸಿದ್ದಾರೆ.