ಅಡಿಲೇಡ್[ಡಿ.03]: ಆಸ್ಟ್ರೇಲಿಯಾ ವಿರುದ್ಧದ ಬಹುನಿರೀಕ್ಷಿತ 4 ಪಂದ್ಯಗಳ ಟೆಸ್ಟ ಸರಣಿ ಮೇಲೆ ಕಣ್ಣಿಟ್ಟಿರುವ ಭಾರತ ಕ್ರಿಕೆಟ್ ತಂಡದ ಆಟಗಾರರು, ಆರಂಭಿಕ ಟೆಸ್ಟ್ ಪಂದ್ಯಕ್ಕಾಗಿ ಭಾನುವಾರ ಅಡಿಲೇಡ್ ತಲುಪಿದೆ.

ಅಡಿಲೇಡ್’ನ ವಿಮಾನ ನಿಲ್ದಾಣಕ್ಕೆ ಬಂದಿಳಿದ ಭಾರತ ಕ್ರಿಕೆಟ್ ತಂಡಕ್ಕೆ ಅಭಿಮಾನಿಗಳು ಅದ್ಧೂರಿ ಸ್ವಾಗತ ನೀಡಿದರು. ಮೊದಲ ಟೆಸ್ಟ್ ಪಂದ್ಯ ಡಿ.6ರಿಂದ ಆರಂಭವಾಗಲಿದ್ದು, ಕ್ರಿಕೆಟ್ ಪ್ರಿಯರಲ್ಲಿ ಕುತೂಹಲ ಮೂಡಿಸಿದೆ. ಆಸೀಸ್ ಮಾಜಿ ನಾಯಕ ಸ್ಮಿತ್ ಮತ್ತು ಉಪನಾಯಕ ಡೇವಿಡ್ ವಾರ್ನರ್ ಅನುಪಸ್ಥಿತಿಯಲ್ಲಿ ಭಾರತ, ಆಸ್ಟ್ರೇಲಿಯಾ ನೆಲದಲ್ಲಿ ಮೊದಲ ಸರಣಿ ಗೆಲ್ಲುವ ವಿಶ್ವಾಸದಲ್ಲಿದೆ. 

ಸರಣಿ ಆರಂಭಕ್ಕೂ ಮೊದಲು ನಡೆದ ಅಭ್ಯಾಸ ಪಂದ್ಯದಲ್ಲಿ ಭಾರತದ ಬ್ಯಾಟ್ಸಮನ್’ಗಳು ಬಿರುಸಿನ ಬ್ಯಾಟಿಂಗ್’ನಿಂದ ಗಮನಸೆಳೆದಿದ್ದರು. ನಾಯಕ ಕೊಹ್ಲಿ ಸೇರಿ ಒಟ್ಟು ಐವರು ಬ್ಯಾಟ್ಸ್’ಮನ್’ಗಳು ಅರ್ಧಶತಕ ದಾಖಲಿಸಿದ್ದರು. ಮೊದಲ ಇನ್ನಿಂಗ್ಸ್’ನಲ್ಲಿ ಉತ್ತಮ ಪ್ರದರ್ಶನ ತೋರಲು ವಿಫಲರಾಗಿದ್ದ ಕೆ.ಎಲ್.ರಾಹುಲ್ ಕೂಡ 2ನೇ ಇನ್ನಿಂಗ್ಸ್’ನಲ್ಲಿ ಅರ್ಧ ಶತಕ ದಾಖಲಿಸಿದ್ದರು. ಪಂದ್ಯ ಡ್ರಾದಲ್ಲಿ ಅಂತ್ಯವಾಗಿತ್ತು.