ನವದೆಹಲಿ[ಮಾ.31]: ಭಾರತದ ತಾರಾ ಬ್ಯಾಡ್ಮಿಂಟನ್‌ ಆಟಗಾರ್ತಿ ಸೈನಾ ನೆಹ್ವಾಲ್‌, 2019ರ ಮೊದಲ 3 ತಿಂಗಳಲ್ಲಿ 25.5 ಲಕ್ಷ ರುಪಾಯಿ ಬಹುಮಾನ ಮೊತ್ತ ಗಳಿಸಿದ್ದಾರೆ. 

ಇಂದಿನಿಂದ ಇಂಡಿಯಾ ಓಪನ್‌ ಬ್ಯಾಡ್ಮಿಂಟನ್‌ ಪಂದ್ಯಾವಳಿ

ಅತಿ ಹೆಚ್ಚು ಬಹುಮಾನ ಮೊತ್ತ ಗಳಿಸಿದ ಆಟಗಾರ್ತಿಯರ ಪೈಕಿ ಸೈನಾ 2ನೇ ಸ್ಥಾನ ಪಡೆದಿದ್ದಾರೆ. ಈ ವರ್ಷ ಇಂಡೋನೇಷ್ಯಾ ಮಾಸ್ಟ​ರ್ಸ್ ಟೂರ್ನಿ ಗೆದ್ದ ಸೈನಾ, ಮಲೇಷ್ಯಾ ಮಾಸ್ಟ​ರ್ಸ್’ನಲ್ಲಿ ಸೆಮಿಫೈನಲ್‌, ಆಲ್‌ ಇಂಗ್ಲೆಂಡ್‌ ಚಾಂಪಿಯನ್‌ಶಿಪ್‌ನಲ್ಲಿ ಕ್ವಾರ್ಟರ್‌ ಫೈನಲ್‌ ಪ್ರವೇಶಿಸಿದ್ದರು.

ಇನ್ನು ಚೀನಾದ ಚೆನ್‌ ಯೂಫಿ 60 ಲಕ್ಷ ಗಳಿಕೆಯೊಂದಿಗೆ ಮೊದಲ ಸ್ಥಾನದಲ್ಲಿದ್ದಾರೆ. ವಿಶ್ವ ನಂ.1 ತೂ ತ್ಸು ಯಿಂಗ್‌ 3ನೇ ಸ್ಥಾನ ಪಡೆದಿದ್ದಾರೆ.