ಜಪಾನ್ ಓಪನ್: ಸೆಮೀಸ್‌ಗೆ ಪ್ರಣೀತ್!
ಜಪಾನ್ ಓಪನ್ ಟೂರ್ನಿಯಲ್ಲಿ ಈ ಋತುವಿನ ಚೊಚ್ಚಲ ಪ್ರಶಸ್ತಿ ಮೇಲೆ ಕಣ್ಣಿಟ್ಟಿದ್ದ ಪಿ.ವಿ ಸಿಂಧು ಹೋರಾಟ ಅಂತ್ಯಗೊಂಡಿದೆ. ಆದರೆ ಮತ್ತೋರ್ವ ಶಟ್ಲರ್ ಸಾಯಿ ಪ್ರಣೀತ್ ಇದೇ ಮೊದಲ ಬಾರಿಗೆ ಜಪಾನ್ ಓಪನ್‌ನಲ್ಲಿ ಸೆಮೀಸ್ ತಲುಪಿದ್ದಾರೆ. ಈ ಕುರಿತಾದ ವರದಿ ಇಲ್ಲಿದೆ ನೋಡಿ...
ಟೋಕಿಯೋ[ಜು.27]: ಭಾರತದ ತಾರಾ ಶಟ್ಲರ್ ಪಿ.ವಿ.ಸಿಂಧು ಇಲ್ಲಿ ನಡೆಯುತ್ತಿರುವ ಜಪಾನ್ ಓಪನ್ ಬ್ಯಾಡ್ಮಿಂಟನ್ ಟೂರ್ನಿಯಿಂದ ಹೊರಬಿದ್ದಿದ್ದಾರೆ. ಸ್ಥಳೀಯ ಆಟಗಾರ್ತಿ, ವಿಶ್ವ ನಂ.2 ಅಕಾನೆ ಯಮಗುಚಿ ವಿರುದ್ಧ ಸಿಂಧು ಸೋಲುಂಡು ಹೊರಬಿದ್ದರು. ಆದರೆ ಪುರುಷರ ಸಿಂಗಲ್ಸ್ ಕ್ವಾರ್ಟರ್ ಫೈನಲ್‌ನಲ್ಲಿ ಜಯಗಳಿಸಿದ ಬಿ.ಸಾಯಿ ಪ್ರಣೀತ್ ಸೆಮಿಫೈನಲ್‌ಗೆ ಲಗ್ಗೆಯಿಟ್ಟಿದ್ದಾರೆ.
ಜಪಾನ್ ಓಪನ್: ಕ್ವಾರ್ಟರ್‌ಗೆ ಸಿಂಧು, ಪ್ರಣೀತ್
ಮಹಿಳಾ ಸಿಂಗಲ್ಸ್ ಕ್ವಾರ್ಟರ್ ಫೈನಲ್‌ನಲ್ಲಿ ಸಿಂಧು, ಯಮಗುಚಿ ವಿರುದ್ಧ 18-21, 15-21 ನೇರ ಗೇಮ್‌ಗಳಲ್ಲಿ ಪರಾಭವಗೊಂಡರು. ಕಳೆದ ವಾರ ಇಂಡೋನೇಷ್ಯಾ ಓಪನ್‌ನ ಫೈನಲ್‌ನಲ್ಲೂ ಯಮಗುಚಿ ವಿರುದ್ಧ ಸಿಂಧು ಪರಾಭವಗೊಂಡಿದ್ದರು.
ಪ್ರಣೀತ್‌ಗೆ ಸುಲಭ ಜಯ: ಇಂಡೋನೇಷ್ಯಾದ ಟಾಮಿ ಸುಗಿಯಾರ್ಟೊ ವಿರುದ್ಧ ಪ್ರಣೀತ್ 21-12, 21-15 ನೇರ ಗೇಮ್‌ಗಳಲ್ಲಿ ಸುಲಭ ಗೆಲುವು ಸಾಧಿಸಿದರು. ಶನಿವಾರ ಸೆಮೀಸ್‌ನಲ್ಲಿ ಅಗ್ರ ಶ್ರೇಯಾಂಕಿತ ಆಟಗಾರ ಜಪಾನ್‌ನ ಕೆಂಟೊ ಮೊಮೊಟಾ ವಿರುದ್ಧ ಸೆಣಸಲಿದ್ದಾರೆ. ಇದೇ ವೇಳೆ ಪುರುಷರ ಡಬಲ್ಸ್ ಕ್ವಾರ್ಟರ್ ಫೈನಲ್‌ನಲ್ಲಿ ಸಾತ್ವಿಕ್ ಸಾಯಿರಾಜ್-ಚಿರಾಗ್ ಶೆಟ್ಟಿಜೋಡಿ ಸೋಲುಂಡು ನಿರಾಸೆ ಅನುಭವಿಸಿತು.