ಪ್ಯಾರಿಸ್ ಒಲಿಂಪಿಕ್ಸ್‌ಗೆ ಅರ್ಹತೆ ಪಡೆದ ಆರ್ಚರಿ ಪಟು ಧೀರಜ್‌

ರೀಕರ್ವ್ ಪುರುಷರ ವೈಯುಕ್ತಿಕ ವಿಭಾಗದ ಕ್ವಾರ್ಟರ್, ಸೆಮಿಫೈನಲ್‌ನಲ್ಲಿ ಇರಾನ್ ಸ್ಪರ್ಧಿಗಳನ್ನು ಮಣಿಸಿದ ಧೀರಜ್, ಫೈನಲ್‌ನಲ್ಲಿ ಚೈನೀಸ್ ತೈಪೆಯ ಝಿ ಸಿಯಾಂಗ್ ವಿರುದ್ದ 5-6ರಲ್ಲಿ ಸೋತು 2ನೇ ಸ್ಥಾನಕ್ಕೆ ತೃಪ್ತಿಪಟ್ಟುಕೊಂಡರು.

Indian Archer Dheeraj Bommadevara qualified for Paris Olympics 2024 kvn

ಬ್ಯಾಂಕಾಕ್(ನ.12): ಇಲ್ಲಿ ನಡೆಯುತ್ತಿರುವ ಏಷ್ಯನ್ ಕಾಂಟಿನೆಂಟಲ್‌ ಅರ್ಹತಾ ಟೂರ್ನಿಯಲ್ಲಿ ಬೆಳ್ಳಿ ಪದಕ ಗೆದ್ದ ಭಾರತದ ತಾರಾ ಆರ್ಚರಿ ಪಟು ಧೀರಜ್ ಬಿಮ್ಮದೇವರ 2024ರ ಪ್ಯಾರಿಸ್ ಒಲಿಂಪಿಕ್ಸ್‌ಗೆ ಅರ್ಹತೆಗಿಟ್ಟಿಸಿಕೊಂಡಿದ್ದಾರೆ. ಇದು ಆರ್ಚರಿಯಲ್ಲಿ ಭಾರತಕ್ಕೆ ಸಿಕ್ಕ ಮೊದಲ ಒಲಿಂಪಿಕ್ಸ್‌ ಕೋಟಾ.

ರೀಕರ್ವ್ ಪುರುಷರ ವೈಯುಕ್ತಿಕ ವಿಭಾಗದ ಕ್ವಾರ್ಟರ್, ಸೆಮಿಫೈನಲ್‌ನಲ್ಲಿ ಇರಾನ್ ಸ್ಪರ್ಧಿಗಳನ್ನು ಮಣಿಸಿದ ಧೀರಜ್, ಫೈನಲ್‌ನಲ್ಲಿ ಚೈನೀಸ್ ತೈಪೆಯ ಝಿ ಸಿಯಾಂಗ್ ವಿರುದ್ದ 5-6ರಲ್ಲಿ ಸೋತು 2ನೇ ಸ್ಥಾನಕ್ಕೆ ತೃಪ್ತಿಪಟ್ಟುಕೊಂಡರು. ಆದರೆ ಮಹಿಳಾ ವಿಭಾಗದಲ್ಲಿ ಕ್ವಾರ್ಟರ್‌ನಲ್ಲಿ ಪರಾಭವಗೊಂಡ ಅಂಕಿತಾ ಭಕತ್ ಒಲಿಂಪಿಕ್ಸ್ ಟಿಕೆಟ್ ತಪ್ಪಿಸಿಕೊಂಡರು.

ಏಷ್ಯಾ ಹಾಫ್ ಮ್ಯಾರಥಾನ್: ಭಾರತ ಪುರುಷರಿಗೆ ಸ್ವರ್ಣ

ದುಬೈ: ಚೊಚ್ಚಲ ಆವೃತ್ತಿಯ ಏಷ್ಯನ್ ಹಾಫ್ ಮ್ಯಾರಥಾನ್ ಚಾಂಪಿಯನ್‌ಶಿಪ್‌ನಲ್ಲಿ ಭಾರತ ಚಿನ್ನ ಸೇರಿ 2 ಪದಕ ತನ್ನದಾಗಿಸಿಕೊಂಡಿದೆ. ಸಾವನ್‌ ಬರ್ವಾಲ್, ಕಾರ್ತಿಕ್ ಕುಮಾರ್, ಅಭಿಷೇಕ್ ಪಾಲ್ ಅವರನ್ನೊಳಗೊಂಡ ಪುರುಷರ ತಂಡ ಚಿನ್ನ ಪಡೆಯಿತು. ಬರ್ವಾಲ್ 1 ಗಂಟೆ 4.30 ನಿಮಿಷಗಳಲ್ಲಿ ಕ್ರಮಿಸಿ ವೈಯುಕ್ತಿಕ ಕಂಚಿನ ಪದಕವನ್ನೂ ಗೆದ್ದರೆ, ಕಾರ್ತಿಕ್(1:08:05 ಗಂಟೆ), ಅಭಿಷೇಕ್(1:08:05 ಗಂಟೆ) ಕ್ರಮವಾಗಿ 5 ಮತ್ತು 13ನೇ ಸ್ಥಾನಿಯಾದರು. ಇದೇ ವೇಳೆ ಪೂನಂ, ಕವಿತಾ ಯಾದವ್, ರಿಮಾ ಪಟೇಲ್ ಇದ್ದ ಮಹಿಳಾ ತಂಡ ಕಂಚಿನ ಪದಕ ಗೆದ್ದಿತು.

2019ರ ಸೋಲನ್ನು ಮರೆತಿಲ್ಲ ಭಾರತೀಯರು..! 4 ವರ್ಷಗಳ ಸೇಡು ತೀರಿಸಿಕೊಳ್ಳಲು ಭಾರತಕ್ಕೆ ಸಿಕ್ಕದೆ ಗೋಲ್ಡನ್ ಚಾನ್ಸ್

ರಾಜ್ಯ ಬಾಸ್ಕೆಟ್‌ಬಾಲ್‌: ಓರಿಯನ್ಸ್ ಚಾಂಪಿಯನ್

ಬೆಂಗಳೂರು: ಕರ್ನಾಟಕ ರಾಜ್ಯ ಬಾಸ್ಕೆಟ್‌ಬಾಲ್‌ ಸಂಸ್ಥೆ(ಕೆಎಸ್‌ಬಿಬಿಎ) ಆಯೋಜಿಸಿದ ಅಸೋಸಿಯೇಷನ್‌ ಕಪ್‌ ಟೂರ್ನಿಯಲ್ಲಿ ಯಂಗ್‌ ಓರಿಯನ್ಸ್‌ ಹಾಗೂ ಸೌಥ್‌ ವೆಸ್ಟರ್ನ್‌ ರೈಲ್ವೇಸ್‌ ಮೈಸೂರು ತಂಡಗಳು ಕ್ರಮವಾಗಿ ಪುರುಷ ಹಾಗೂ ಮಹಿಳೆಯರ ವಿಭಾಗದಲ್ಲಿ ಚಾಂಪಿಯನ್‌ ಆಗಿ ಹೊರಹೊಮ್ಮಿವೆ. ಪುರುಷರ ವಿಭಾಗದಲ್ಲಿ ಎಂಇಜಿ & ಸೆಂಟರ್‌ ತಂಡ ರನ್ನರ್‌-ಅಪ್‌ ಆದರೆ, ಬ್ಯಾಂಕ್‌ ಆಫ್‌ ಬರೋಡಾ 3ನೇ ಸ್ಥಾನ ಪಡೆಯಿತು. ಮಹಿಳೆಯರ ವಿಭಾಗದಲ್ಲಿ ಬೀಗಲ್ಸ್‌ ಬಿಸಿ ದ್ವಿತೀಯ, ಡಿವೈಇಎಸ್ ಮೈಸೂರು ತೃತೀಯ ಸ್ಥಾನ ಗಳಿಸಿತು. ವಿಜೇತ ತಂಡಗಳಿಗೆ ಫಿಬಾ ಏಷ್ಯಾ, ಕರ್ನಾಟಕ ಬಾಸ್ಕೆಟ್‌ಬಾಲ್‌ ಸಂಸ್ಥೆ ಅಧ್ಯಕ್ಷ ಡಾ.ಕೆ.ಗೋವಿಂದರಾಜು ಟ್ರೋಫಿ ವಿತರಿಸಿದರು.

ಹಾಟ್‌ಸ್ಟಾರ್‌ನಲ್ಲಿ ಪ್ರೊ ಕಬಡ್ಡಿ ಪ್ರಸಾರ ಉಚಿತ

ಮುಂಬೈ: ಏಷ್ಯಾಕಪ್‌, ಏಕದಿನ ವಿಶ್ವಕಪ್‌ ಬಳಿಕ ಮುಂಬರುವ 10ನೇ ಆವೃತ್ತಿಯ ಪ್ರೊ ಕಬಡ್ಡಿ ಲೀಗ್‌ ಟೂರ್ನಿಯನ್ನು ಡಿಸ್ನಿ+ ಹಾಟ್‌ಸ್ಟಾರ್‌ನಲ್ಲಿ ಉಚಿತವಾಗಿ ಪ್ರಸಾರ ಮಾಡಲು ಡಿಸ್ನಿ ಸ್ಟಾರ್‌ ಸಂಸ್ಥೆ ನಿರ್ಧರಿಸಿದೆ. ಪ್ರೇಕ್ಷಕರು ಮೊಬೈಲ್‌ ಆ್ಯಪ್‌ ಮೂಲಕ ಟೂರ್ನಿಯ ಎಲ್ಲಾ ಪಂದ್ಯಗಳನ್ನು ಉಚಿತವಾಗಿ ವೀಕ್ಷಿಸಬಹುದಾಗಿದೆ. 10ನೇ ಆವೃತ್ತಿಯು ಡಿ.10ರಿಂದ ಆರಂಭಗೊಳ್ಳಲಿದೆ.

ಈ ವಿಶ್ವಕಪ್‌ನಲ್ಲಿ ಪಾಕ್‌ಗಿಂತ ಅಫ್ಘನ್‌ ಆಟ ಚೆನ್ನಾಗಿತ್ತು: ವಾಸೀಂ ಅಕ್ರಂ

ವಿಶ್ವ ರ್‍ಯಾಂಕಿಂಗ್‌: ನಂ.1 ಸ್ಥಾನಕ್ಕೆ ಮರಳಿದ ಇಗಾ

ಕ್ಯಾಂಕನ್‌(ಮೆಕ್ಸಿಕೋ): 2 ತಿಂಗಳ ಹಿಂದೆ ಮಹಿಳಾ ಟೆನಿಸ್‌ ವಿಶ್ವ ರ್‍ಯಾಂಕಿಂಗ್ ಪಟ್ಟಿಯಲ್ಲಿ ಅಗ್ರಸ್ಥಾನ ಕಳೆದುಕೊಂಡಿದ್ದ ಪೋಲೆಂಡ್‌ನ ಇಗಾ ಸ್ವಿಯಾಟೆಕ್‌, ಇದೀಗ ಮತ್ತೆ ಅಗ್ರಸ್ಥಾನಕ್ಕೆ ಮರಳಿದ್ದಾರೆ. ಡಬ್ಲ್ಯುಟಿಎ ಫೈನಲ್ಸ್‌ ಟೂರ್ನಿಯಲ್ಲಿ ಚಾಂಪಿಯನ್‌ ಆಗಿ ಹೊರಹೊಮ್ಮಿದ ಸ್ವಿಯಾಟೆಕ್‌, ಬೆಲಾರಸ್‌ನ ಆರೈನಾ ಸಬಲೆಂಕಾ ಅವರನ್ನು ಹಿಂದಿಕ್ಕಿ ಮೊದಲ ಸ್ಥಾನಕ್ಕೇರಿದರು. ಫೈನಲ್‌ನಲ್ಲಿ ಅಮೆರಿಕದ ಜೆಸ್ಸಿಕಾ ಪೆಗುಲಾ ವಿರುದ್ಧ 6-1, 6-0 ಸೆಟ್‌ಗಳಲ್ಲಿ ಸ್ವಿಯಾಟೆಕ್‌ ಜಯಗಳಿಸಿದರು. 4 ಗ್ರ್ಯಾನ್‌ ಸ್ಲಾಂಗಳ ಒಡತಿ ಸ್ವಿಯಾಟೆಕ್‌ 2023ರನ್ನು ನಂ.1 ಆಟಗಾರ್ತಿಯಾಗಿಯೇ ಮುಕ್ತಾಯಗೊಳಿಸಲಿದ್ದಾರೆ.
 

Latest Videos
Follow Us:
Download App:
  • android
  • ios