2020ರ ಟೋಕಿಯೋ ಒಲಿಂಪಿಕ್ಸ್'ನಲ್ಲಿ ಶೂಟಿಂಗ್ ಮಿಕ್ಸೆಡ್ ಟೀಮ್ ಆಟಕ್ಕೆ ಇದೇ ಮೊದಲ ಬಾರಿಗೆ ಅವಕಾಶ ನೀಡಲಾಗಿದೆ. ಈ ಹಿನ್ನೆಲೆಯಲ್ಲಿ ಹೀನಾ ಸಿಧು ಮತ್ತು ಜಿತು ರಾಯ್ ಜೋಡಿಯು 10ಮೀಟರ್ ಏರ್ ಪಿಸ್ತೂಲ್ ಸ್ಪರ್ಧೆಯಲ್ಲಿ ಚಿನ್ನ ಗೆದ್ದಿರುವುದು ಭಾರತದ ಮಟ್ಟಿಗೆ ಆಶಾದಾಯಕ ಬೆಳವಣಿಗೆಯಾಗಿದೆ.
ನವದೆಹಲಿ(ಜೂನ್ 12): ಅಜೆರ್'ಬೈಜಾನ್ ದೇಶದ ಗಬಾಲಾ ನಗರದಲ್ಲಿ ನಡೆಯುತ್ತಿರುವ ಶೂಟಿಂಗ್ ವಿಶ್ವಕಪ್'ನಲ್ಲಿ ಭಾರತೀಯ ತಂಡವೊಂದು ಚಿನ್ನದ ಪದಕ ಗೆದ್ದುಕೊಂಡಿದೆ. 10ಮೀಟರ್ ಏರ್ ಪಿಸ್ತೂಲ್ ಮಿಕ್ಸೆಟ್ ಟೀಮ್ ವಿಭಾಗದ ಸ್ಪರ್ಧೆಯಲ್ಲಿ ಜೀತು ರಾಯ್ ಮತ್ತು ಹೀನಾ ಸಿಧು ಜೋಡಿಯು ಅಗ್ರಸ್ಥಾನ ಪಡೆಯಿತು. ಇಂದು ನಡೆದ ಫೈನಲ್'ನಲ್ಲಿ ಭಾರತದ ಜೋಡಿಯು ರಷ್ಯಾದ ತಂಡವನ್ನ 7-6ರಿಂದ ರೋಚಕ ಜಯ ಸಾಧಿಸಿದೆ. ಇನ್ನು, ಫ್ರಾನ್ಸ್ ದೇಶವೂ ಕೂಡ 7-6 ಅಂತರದಿಂದ ಇರಾನ್ ದೇಶವನ್ನ ಸೋಲಿಸಿ ಕಂಚಿನ ಪದಕ ಜಯಿಸಿದೆ.
ಆದರೆ, 10ಮೀ ಏರ್ ಪಿಸ್ತೂಲ್ ಸ್ಪರ್ಧೆಯ ವೈಯಕ್ತಿಕ ವಿಭಾಗದಲ್ಲಿ ಭಾರತದ ಈ ಇಬ್ಬರು ಆಟಗಾರರು ಫೈನಲ್'ಗೆ ಅರ್ಹತೆ ಗಿಟ್ಟಿಸಲಿ ವಿಫಲರಾಗಿದ್ದಾರೆ. 50 ಮೀಟರ್ ಪ್ರೋನ್ ರೈಫಲ್ ಇವೆಂಟ್'ನಲ್ಲಿ ಗಗನ್ ನಾರಂಗ್ ಮತ್ತು ಸಂಜೀವ್ ರಜಪೂತ್ ಕೂಡ ನಿರಾಶೆ ಅನುಭವಿಸಿದ್ದಾರೆ.
ವಿಶ್ವಕಪ್'ನಲ್ಲಿ ಮಿಕ್ಸೆಡ್ ಟೀಮ್ ಸ್ಪರ್ಧೆ ಒಂದು ರೀತಿಯಲ್ಲಿ ಆಟಕ್ಕುಂಟು ಲೆಕ್ಕಕ್ಕಿಲ್ಲ. ಇದರಲ್ಲಿ ಗಳಿಸುವ ಪದಕವು ಮೆಡಲ್ ಪಟ್ಟಿಗೆ ಸೇರುವುದಿಲ್ಲ.
ಒಲಿಂಪಿಕ್ಸ್'ನಲ್ಲುಂಟು ಮಿಕ್ಸೆಡ್ ಈವೆಂಟ್ ಭಾಗ್ಯ: