ದೋಹಾ (ಕತಾರ್‌)ಸೆ.10: ಭಾರತ ಫುಟ್ಬಾಲ್‌ ತಂಡ ಫಿಫಾ ವಿಶ್ವಕಪ್‌ ಅರ್ಹತಾ ಸುತ್ತಿ​ನಲ್ಲಿ 2ನೇ ಹಂತ​ದಲ್ಲಿ ಮಂಗಳವಾರ ಏಷ್ಯನ್‌ ಚಾಂಪಿಯನ್‌ ಕತಾರ್‌ ತಂಡ​ವನ್ನು ಎದುರಿಸಲಿದೆ. ‘ಇ’ ಗುಂಪಿನಲ್ಲಿರುವ ಭಾರತ ತನ್ನ ಆರಂಭಿಕ ಪಂದ್ಯ​ದಲ್ಲಿ ಒಮಾನ್‌ ವಿರುದ್ಧ 1-2 ಗೋಲು​ಗ​ಳಲ್ಲಿ ಸೋಲುಂಡಿತ್ತು. 

 

ಇದನ್ನೂ ಓದಿ: ವಿಶ್ವಕಪ್‌ ಕ್ವಾಲಿಫೈಯರ್‌: ಭಾರತ ತಂಡಕ್ಕೆ ಆಘಾತ!

ವಿಶ್ವ ರಾರ‍ಯಂಕಿಂಗ್‌ನಲ್ಲಿ 62ನೇ ಸ್ಥಾನ​ದ​ಲ್ಲಿ​ರುವ ಕತಾರ್‌ ಎದು​ರಿ​ಸು​ವುದು ಭಾರ​ತಕ್ಕೆ ಭಾರೀ ದೊಡ್ಡ ಸವಾ​ಲಾಗಿ ಪರಿ​ಣ​ಮಿ​ಸ​ಲಿದೆ. 2022ರ ವಿಶ್ವ​ಕಪ್‌ಗೆ ಆತಿಥ್ಯ ವಹಿ​ಸ​ಲಿ​ರುವ ಕತಾರ್‌, ನೇರ ಪ್ರವೇಶ ಪಡೆ​ದಿ​ದ್ದರೂ ಬಲಿಷ್ಠ ತಂಡ ಕಟ್ಟಲು ಈ ಟೂರ್ನಿ​ಯನ್ನು ಬಳ​ಸಿ​ಕೊ​ಳ್ಳು​ತ್ತಿದೆ. ಗುಂಪು ಹಂತದ ಮೊದಲ ಪಂದ್ಯ​ದಲ್ಲಿ ಕತಾರ್‌, ಆಷ್ಘಾ​ನಿ​ಸ್ತಾನ ವಿರುದ್ಧ 6-0 ಗೋಲು​ಗ​ಳಿಂದ ಗೆಲುವು ಸಾಧಿ​ಸಿತ್ತು.