ಭಾರತ ಹಾಗೂ ವೆಸ್ಟ್ಇಂಡೀಸ್ ನಡುವಿನ 2ನೇ ಹಾಗೂ ಅಂತಿಮ ಟೆಸ್ಟ್ ಪಂದ್ಯ 3ನೇ ದಿನದಲ್ಲಿ ರೋಚಕ ತಿರುವು ಪಡೆದುಕೊಂಡಿದೆ. ಕಳೆದೆರಡು ದಿನ ದಿಟ್ಟ ಹೋರಾಟ ನೀಡಿದ ವಿಂಡೀಸ್ 3ನೇ ದಿನ ಹಠಾತ್ ಕುಸಿತ ಕಂಡಿದೆ. ಇಲ್ಲಿದೆ ಪಂದ್ಯದ ಅಪ್‌ಡೇಟ್ಸ್
ಹೈದರಾಬಾದ್(ಅ.14): ಭಾರತ ವಿರುದ್ಧದ 2ನೇ ಟೆಸ್ಟ್ ಪಂದ್ಯದಲ್ಲೂ ವೆಸ್ಟ್ಇಂಡೀಸ್ ಸೋಲಿನತ್ತ ವಾಲಿದೆ. ಮೊದಲ ಇನ್ನಿಂಗ್ಸ್‌ನಲ್ಲಿ ಉತ್ತಮ ಹೋರಾಟ ನೀಡಿದ ವಿಂಡೀಸ್, 2ನೇ ಇನ್ನಿಂಗ್ಸ್‌ನಲ್ಲಿ ಕುಸಿತ ಕಂಡಿದೆ.
ಮೊದಲ ಇನ್ನಿಂಗ್ಸ್‌ನಲ್ಲಿ ಭಾರತ ತಂಡವನ್ನ 367 ರನ್‌ಗೆ ಆಲೌಟ್ ಮಾಡಿದ ವೆಸ್ಟ್ಇಂಡೀಸ್ ದ್ವಿತೀಯ ಇನ್ನಿಂಗ್ಸ್ ಆರಂಭಿಸಿತು. 56 ರನ್ ಹಿನ್ನಡೆಯೊಂದಿಗೆ 2ನೇ ಇನ್ನಿಂಗ್ಸ್ ಆರಂಭಿಸಿದ ವಿಂಡೀಸ್ ಮತ್ತೆ ಉಮೇಶ್ ಯಾದವ್ ದಾಳಿಗೆ ಕುಸಿತ ಕಂಡಿತು.
ಕ್ರೈಗ್ ಬ್ರಾಥ್ವೈಟ್ ಹಾಗೂ ಕೀರನ್ ಪೊವೆಲ್ ಶೂನ್ಯ ಸುತ್ತಿದರು. ಶೈ ಹೋಪ್ 28 ರನ್ ಕಾಣಿಕೆ ನೀಡಿದರು. ಇನ್ನುಳಿದ ಬ್ಯಾಟ್ಸ್‌ಮನ್‌ಗಳು 20 ರನ್ ಗಡಿ ದಾಟಲಿಲ್ಲ. ಚಹಾ ವಿರಾಮದ ವೇಳೆ ವೆಸ್ಟ್ಇಂಡೀಸ್ 6 ವಿಕೆಟ್ ನಷ್ಟಕ್ಕೆ 76 ರನ್ ಸಿಡಿಸಿದೆ. ಈ ಮೂಲಕ 20 ರನ್ ಮುನ್ನಡೆ ಸಾಧಿಸಿದೆ.
ವಿಂಡೀಸ್ ತಂಡವನ್ನ ಬಹುಬೇಗನೆ ಆಲೌಟ್ ಮಾಡಿ ಅಲ್ಪಮೊತ್ತದ ಟಾರ್ಗೆಟ್ ನಿರೀಕ್ಷೆಯಲ್ಲಿರುವ ಟೀಂ ಇಂಡಿಯಾ, ಈ ಪಂದ್ಯವನ್ನೂ ಮೂರೇ ದಿನಕ್ಕೆ ಮುಗಿಸೋ ಲೆಕ್ಕಾಚಾರದಲ್ಲಿದೆ.
