ರಿಷಬ್ ಪಂತ್ ಮತ್ತೆ ಭರವಸೆ ಮೂಡಿಸಿದ್ದಾರೆ. ಆದರೆ ಈ ಭಾರಿಯೂ ಪಂತ್ 92 ರನ್‌ಗೆ ಔಟಾಗೋ ಮೂಲಕ ಶತಕ ವಂಚಿತರಾದರು. ಸತತ 2ನೇ ಬಾರಿಗೆ ಪಂತ್ 92 ರನ್‌ಗೆ ಔಟಾಗಿದ್ದಾರೆ. ಪಂತ್ ನರ್ವಸ್ 90 ಕುರಿತು ಟ್ವಿಟರಿಗರು ಹೇಳಿದ್ದೇನು?
ಹೈದರಾಬಾದ್(ಅ.14): ವೆಸ್ಟ್ಇಂಡೀಸ್ ವಿರುದ್ಧದ 2ನೇ ಟೆಸ್ಟ್ ಪಂದ್ಯದಲ್ಲೂ ಟೀಂ ಇಂಡಿಯಾ ವಿಕೆಟ್ ಕೀಪರ್ ಬ್ಯಾಟ್ಸ್‌ಮನ್ ರಿಷಬ್ ಪಂತ್ ಮತ್ತೆ 92 ರನ್‌ಗೆ ಔಟಾಗಿದ್ದಾರೆ. ರಾಜ್‌ಕೋಟ್ ಟೆಸ್ಟ್ ಪಂದ್ಯದಲ್ಲೂ ಪಂತ್ 92 ರನ್‍ಗೆ ವಿಕೆಟ್ ಒಪ್ಪಿಸಿದರು.
ಎರಡೂ ಪಂದ್ಯದಲ್ಲಿ ರಿಷಬ್ ಪಂತ್ ಕೇವಲ 8 ರನ್‌ಗಳಿಂದ ಶತಕ ವಂಚಿತರಾದರು. ಇದೀಗ ಪಂತ್, ಮಾಸ್ಟರ್ ಬ್ಲಾಸ್ಟರ್ ಸಚಿನ್ ತೆಂಡೂಲ್ಕರ್ ರೀತಿಯಲ್ಲೇ ನರ್ವಸ್ 90 ಕಾಡುತ್ತಿದೆ ಅನ್ನೋ ಮಾತುಗಳು ಕೇಳಿ ಬಂದಿದೆ.
ಸಚಿನ್ ತೆಂಡೂಲ್ಕರ್ ಹಲವು ಬಾರಿ 90+ ರನ್ ಸಿಡಿಸಿ ಔಟಾಗಿದ್ದಾರೆ. ಇಷ್ಟೇ ಅಲ್ಲ ಶತಕವನ್ನೂ ಮಿಸ್ ಮಾಡಿಕೊಂಡಿದ್ದಾರೆ. ಇದೀಗ ಇದೇ ಸಮಸ್ಯೆ ಪಂತ್‌ಗೆ ಕಾಡುತ್ತಿದೆ ಎಂದು ಟ್ವಿಟರಿಗರು ಹೇಳಿದ್ದಾರೆ. ಪಂತ್ ನರ್ವಸ್ 90 ಕುರಿತು ಟ್ವಿಟರಿಗರ ಪ್ರತಿಕ್ರಿಯೆ ಇಲ್ಲಿದೆ.
