ವೆಸ್ಟ್ಇಂಡೀಸ್ ನಡುವಿನ 2ನೇ ಟೆಸ್ಟ್ ಪಂದ್ಯದಲ್ಲಿ ಮೊದಲ ಇನ್ನಿಂಗ್ಸ್ ಆರಂಭಿಸಿರುವ ಟೀಂ ಇಂಡಿಯಾ ದಿಟ್ಟ ಹೋರಾಟ ನೀಡುತ್ತಿದೆ. ಪೃಥ್ವಿ ಶಾ ಮತ್ತೆ ಅಬ್ಬರಿಸಿದ್ದು ವಿಂಡೀಸ್ ಬೌಲರ್‌ಗಳಿಗೆ ನಡುಕ ಹುಟ್ಟಿಸಿದ್ದಾರೆ. ಇಲ್ಲಿದೆ 2ನೇ ದಿನದ ಅಪ್‌ಡೇಟ್ಸ್.

ಹೈದರಾಬಾದ್(ಅ.13): ಭಾರತ ಹಾಗೂ ವೆಸ್ಟ್ಇಂಡೀಸ್ ನಡುವಿನ 2ನೇ ಹಾಗೂ ಅಂತಿಮ ಟೆಸ್ಟ್ ಪಂದ್ಯ ಅಭಿಮಾನಿಗಳ ಕುತೂಹಲ ಇಮ್ಮಡಿಗೊಳಿಸಿದೆ. ವೆಸ್ಟ್ಇಂಡೀಸ್ ತಂಡವನ್ನ 310 ರನ್‌ಗಳಿಗೆ ಆಲೌಟ್ ಮಾಡಿ ಮೊದಲ ಇನ್ನಿಂಗ್ಸ್ ಆರಂಭಿಸಿರುವ ಟೀಂ ಇಂಡಿಯಾ ಉತ್ತಮ ಹೋರಾಟ ನೀಡುತ್ತಿದೆ. 

ಮೊದಲ ಇನ್ನಿಂಗ್ಸ್‌ನಲ್ಲಿ ರೋಸ್ಟನ್ ಚೇಸ್ ಶತಕದೊಂದಿಗೆ ವೆಸ್ಟ್ಇಂಡೀಸ್ 310 ರನ್ ಸಿಡಿಸಿ ಆಲೌಟ್ ಆಗಿತ್ತು. ಇದಕ್ಕುತ್ತರವಾಗಿ ಬ್ಯಾಟಿಂಗ್ ಇಳಿದ ಭಾರತ ಆರಂಭದಲ್ಲೇ ಕೆಎಲ್ ರಾಹುಲ್ ವಿಕೆಟ್ ಕಳೆದುಕೊಂಡಿತು. ರಾಹುಲ್ ಕೇವಲ 4 ರನ್ ಸಿಡಿಸಿ ನಿರ್ಗಮಿಸಿದರು.

ರಾಜ್‌ಕೋಟ್ ಟೆಸ್ಟ್ ಪಂದ್ಯದಲ್ಲಿ ಶತಕ ಸಿಡಿಸಿ ದಾಖಲೆ ಬರೆದ ಪೃಥ್ವಿ ಶಾ ಇದೀಗ 2ನೇ ಟೆಸ್ಟ್ ಪಂದ್ಯದಲ್ಲೂ ಅತ್ಯುತ್ತಮ ಪ್ರದರ್ಶನ ನೀಡುತ್ತಿದ್ದಾರೆ. ಕೇವಲ 39 ಎಸೆತದಲ್ಲಿ ಅರ್ಧಶತಕ ಸಿಡಿಸಿರುವ ಶಾ, ಮತ್ತೊಂದು ಶತಕದ ಸೂಚನೆ ನೀಡಿದ್ದಾರೆ.

Scroll to load tweet…

ಪೃಥ್ವಿ ಶಾಗೆ, ಚೇತೇಶ್ವರ್ ಪೂಜಾರ ಉತ್ತಮ ಸಾಥ್ ನೀಡಿದರು. 2ನೇ ದಿನದ ಮೊದಲ ಸೆಶನ್ ಅಂತ್ಯದಲ್ಲಿ ಭಾರತ 1 ವಿಕೆಟ್ ನಷ್ಟಕ್ಕೆ 80 ರನ್ ಸಿಡಿಸಿದೆ. ಪೃಥ್ವಿ ಶಾ ಅಜೇಯ 52 ಹಾಗೂ ಪೂಜಾರ ಅಜೇಯ 9 ರನ್ ಸಿಡಿಸಿದ್ದಾರೆ.