ಹೈದಾರಾಬಾದ್ ಟೆಸ್ಟ್: ಮೈದಾನಕ್ಕೆ ನುಗ್ಗಿ ವಿರಾಟ್ ಕೊಹ್ಲಿ ತಬ್ಬಿಕೊಂಡ ಅಭಿಮಾನಿ!

https://static.asianetnews.com/images/authors/56bf5dcb-7868-50e0-b2d0-38391a34809d.jpg
First Published 12, Oct 2018, 12:58 PM IST
India vs West Indies test cricket Fan breaches security to click selfie with Kohli
Highlights

ಭಾರತ ಹಾಗೂ ವೆಸ್ಟ್ಇಂಡೀಸ್ ನಡುವಿನ ಹೈದಾರಾಬಾದ್ ಟೆಸ್ಟ್ ಪಂದ್ಯದ ನಡುವೆ ಅಭಿಮಾನಿ ನಿಯಮ ಉಲ್ಲಂಘಿಸಿದ ಘಟನೆ ನಡೆದಿದೆ. ಪಂದ್ಯ ನಡೆಯುತ್ತಿದ್ದ  ವೇಳೆ ಮೈದಾನಕ್ಕೆ ನುಗ್ಗಿದ ಅಭಿಮಾನಿ ಕೊಹ್ಲಿ ಬಳಿ ತೆರಳಿದ್ದಾನೆ. ಈ ಕುರಿತ ವಿವರ ಇಲ್ಲಿದೆ.

ಹೈದಾರಾಬಾದ್(ಅ.12): ಭಾರತ ಹಾಗೂ ವೆಸ್ಟ್ಇಂಡೀಸ್ ನಡುವಿನ 2ನೇ ಟೆಸ್ಟ್ ಪಂದ್ಯದ ವೇಳೆ ಅಭಿಮಾನಿಯೊಬ್ಬ ಭದ್ರತಾ ಸಿಬ್ಬಂದಿ ಕಣ್ತಪ್ಪಿ ಮೈದಾನಕ್ಕೆ ನುಗ್ಗಿದ ಘಟನೆ ನಡೆದಿದೆ. ಪಂದ್ಯ ನಡೆಯುತ್ತಿದ್ದ ವೇಳೆ ಕ್ರೀಡಾಂಗಣ ಪ್ರವೇಶಿದದ ಅಭಿಮಾನಿ ನೇರವಾಗಿ ಕೊಹ್ಲಿಯನ್ನ ತಬ್ಬಿಕೊಂಡಿದ್ದಾನೆ.

ಮೊದಲ ಸೆಶನ್‌ನಲ್ಲಿ ಟೀಂ ಇಂಡಿಯಾ ಫೀಲ್ಡಿಂಗ್ ಮಾಡುತ್ತಿದ್ದ ವೇಳೆ ಅಭಿಮಾನಿಯೊಬ್ಬ ಸೆಕ್ಯೂರಿಟಿ ಗಾರ್ಡ್ ಕಣ್ತಪ್ಪಿಸಿ ನೇರವಾಗಿ ಮೈದಾನ ಪ್ರವೇಶಿಸಿದ್ದಾನೆ. ಇಷ್ಟೇ ಅಲ್ಲ ಕೊಹ್ಲಿ ಬಳಿ ತೆರಳಿದ್ದಾನೆ. ಕೊಹ್ಲಿಯನ್ನ ತಬ್ಬಿಕೊಂಡ ಅಭಿಮಾನಿ ಸೆಲ್ಫಿ ಕ್ಲಿಕ್ಕಿಸಿದ್ದಾನೆ.

ಇದನ್ನೂ ಓದಿ: ಕ್ರೀಸ್‌ಗೆ ನುಗ್ಗಿ ಕೊಹ್ಲಿ ಜೊತೆ ಸೆಲ್ಫಿ- ಸೆಕ್ಯೂರಿಟಿ ವಶಕ್ಕೆ ಫ್ಯಾನ್ಸ್!

ಅಷ್ಟರಲ್ಲೇ ಸೆಕ್ಯೂರಿಟ ಗಾರ್ಡ್ ಅಭಿಮಾನಿಯನ್ನ ವಶಕ್ಕೆ ಪಡೆದರು. ವೆಸ್ಟ್ಇಂಡೀಸ್ ವಿರುದ್ದದ ಮೊದಲ ಟೆಸ್ಟ್ ಪಂದ್ಯದಲ್ಲೂ ಕೊಹ್ಲಿಇದೇ ರೀತಿ ಘಟನೆ ಎದುರಿಸಿದರು. ರಾಜ್‌ಕೋಟ್ ಟೆಸ್ಟ್ ಪಂದ್ಯದಲ್ಲಿ ಅಭಿಮಾನಿಯೊರ್ವ ಕ್ರೀಸ್‌ಗೆ ನುಗ್ಗಿ ಬ್ಯಾಟಿಂಗ್ ಮಾಡುತ್ತಿದ್ದ ಕೊಹ್ಲಿ ಜೊತೆ ಸೆಲ್ಫಿ ಕ್ಲಿಕ್ಕಿಸಿದ್ದರು.

loader