Asianet Suvarna News Asianet Suvarna News

ಕ್ರೀಸ್‌ಗೆ ನುಗ್ಗಿ ಕೊಹ್ಲಿ ಜೊತೆ ಸೆಲ್ಫಿ- ಸೆಕ್ಯೂರಿಟಿ ವಶಕ್ಕೆ ಫ್ಯಾನ್ಸ್!

ಭಾರತ ಹಾಗೂ ವೆಸ್ಟ್ಇಂಡೀಸ್ ನಡುವಿನ ಟೆಸ್ಟ್ ಪಂದ್ಯ ನಡೆಯುತ್ತಿದ್ದ ವೇNz ಅಭಿಮಾನಿಗಳಿಬ್ಬರು ಕ್ರೀಸ್‌ಗೆ ನುಗ್ಗಿ ವಿರಾಟ್ ಕೊಹ್ಲಿ ಜೊತೆ ಸೆಲ್ಫಿ ತೆಗೆಸಿಕೊಂಡಿದ್ದಾರೆ. ಈ ಅಭಿಮಾನಿಗಳ ವೀಡಿಯೋ ಇಲ್ಲಿದೆ.

Fans enter crease to clicks selfie with Virat Kohli during India vs West Indies match
Author
Bengaluru, First Published Oct 4, 2018, 10:24 PM IST
  • Facebook
  • Twitter
  • Whatsapp

ರಾಜ್‌ಕೋಟ್(ಅ.04): ವೆಸ್ಟ್ಇಂಡೀಸ್ ವಿರುದ್ಧದ ಮೊದಲ ಟೆಸ್ಟ್ ಪಂದ್ಯದ ಮೊದಲ ದಿನ ಸೆಕ್ಯೂರಿಟಿ ಗಾರ್ಡ್ ಕಣ್ತಪ್ಪಿಸಿ ಅಭಿಮಾನಿಗಳು ಕ್ರೀಸ್‌ಗೆ ನುಗ್ಗಿದ ಘಟನೆ ನಡೆದಿದೆ. ನಾಯಕ ವಿರಾಟ್ ಕೊಹ್ಲಿ ಬ್ಯಾಟಿಂಗ್ ಮಾಡುತ್ತಿದ್ದ ವೇಳೆ ಅಭಿಮಾನಿಗಳು ಕೊಹ್ಲಿ ಜೊತೆ ಸೆಲ್ಫಿ ಕ್ಲಿಕ್ಕಿಸಲು ಈ ರೀತಿ ಮಾಡಿದ್ದಾರೆ.

ವಿರಾಟ್ ಕೊಹ್ಲಿ ಬ್ಯಾಟಿಂಗ್ ಪ್ರದರ್ಶನದ ನಡುವೆ ಇಬ್ಬರು ಅಭಿಮಾನಿಗಳು ನೇರವಾಗಿ ಕ್ರೀಸ್‌ಗೆ ನುಗ್ಗಿದ್ದಾರೆ. ಇಷ್ಟೇ ಅಲ್ಲ ನಾಯಕ ಕೊಹ್ಲಿ ಜೊತೆ ಸೆಲ್ಫಿ ಕ್ಲಿಕ್ಕಿಸಲು ಮನವಿ ಮಾಡಿದ್ದಾರೆ. ವಿಶೇಷ ಅಂದರೆ ಕೊಹ್ಲಿ ಇವರ ಬೇಡಿಕೆಯನ್ನ ನಿರಾಕರಿಸಲಿಲ್ಲ. ಪಂದ್ಯದ ನಡುವೆಯೇ ಅಭಿಮಾನಿಗಳ ಜೊತೆ ಸೆಲ್ಫಿ ಕ್ಲಿಕ್ಕಿಸಿಕೊಂಡರು.

 

 
 
 
 
 
 
 
 
 
 
 
 
 

Two fanboys step into ground to take selfie with @virat.kohli ❤️😍

A post shared by 🔥V I R A T K O H L I 🇮🇳 (@viratkohliplanet) on Oct 4, 2018 at 3:50am PDT

 

ಅಭಿಮಾನಿಗಳು ಒಂದೆಡೆರು ಸೆಲ್ಫಿ ಕ್ಲಿಕ್ಕಿಸಿಕೊಳ್ಳುತ್ತಿದ್ದಂತೆ ಸೆಕ್ಯೂರಿಟಿ ಗಾರ್ಡ್ ತಕ್ಷಣವೇ ಮೈದಾನಕ್ಕೆ ಧಾವಿಸಿದರು. ಇಷ್ಟೇ ಅಲ್ಲ ಇಬ್ಬರು ಅಭಿಮಾನಿಗಳನ್ನ ವಶಕ್ಕೆ ಪಡೆದರು. ಭಾರತೀಯ ಕ್ರಿಕೆಟ್ ಅಭಿಮಾನಿಗಳು ಈ ರೀತಿ ಮೈದಾನಕ್ಕೆ ನುಗ್ಗುತ್ತಿರುವುದು ಇದೇ ಮೊದಲಲ್ಲ. ಸಚಿನ್ ತೆಂಡೂಲ್ಕರ್, ಎಂ.ಎಸ್ ಧೋನಿ, ವೀರೇಂದ್ರ ಸೆಹ್ವಾಗ್, ಗೌತಮ್ ಗಂಭೀರ್ ಸೇರಿದಂತೆ ಹಲವು ಕ್ರಿಕೆಟಿಗರು ಇದೇ ರೀತಿ ಅನುಭವ ಪಡೆದಿದ್ದಾರೆ.

Follow Us:
Download App:
  • android
  • ios