ಭಾರತ ಹಾಗೂ ವೆಸ್ಟ್ ಇಂಡೀಸ್ ನಡುವಿನ ಮೊದಲ ಟಿ20 ಪಂದ್ಯ ಆರಂಭಗೊಂಡಿದೆ. ಮೊದಲು ಬ್ಯಾಟಿಂಗ್ ಆರಂಭಿಸಿರುವ ವಿಂಡೀಸ್‌ಗೆ ಟೀಂ ಇಂಡಿಯಾ ಶಾಕ್ ನೀಡಿದೆ. ಇಲ್ಲಿದೆ ಪಂದ್ಯದ ಅಪ್‌ಡೇಟ್ಸ್.

ಕೋಲ್ಕತ್ತಾ(ನ.04): ಭಾರತ ವಿರುದ್ಧದ ಮೊದಲ ಟಿ20 ಪಂದ್ಯದಲ್ಲಿ ಟಾಸ್ ಸೋತು ಬ್ಯಾಟಿಂಗ್ ಇಳಿದ ವೆಸ್ಟ್ ಇಂಡೀಸ್ ಹಿನ್ನಡೆ ಅನುಭವಿಸಿದೆ. ಈ ಮೂಲಕ ಟಿ20 ಮಾದರಿಯಲ್ಲೂ ವೆಸ್ಟ್ ಇಂಡೀಸ್ ಸ್ಫೋಟಕ ಬ್ಯಾಟಿಂಗ್ ಪ್ರದರ್ಶಿಸುವಲ್ಲಿ ವಿಫಲಾವಾಗಿದೆ.

Add Asianetnews Kannada as a Preferred SourcegooglePreferred

ಆರಂಭಿಕನಾಗಿ ಕಣಕ್ಕಿಳಿದ ದಿನೇಶ್ ರಾಮ್ದಿನ್ ಕೇವಲ 2 ರನ್ ಸಿಡಿಸಿ ಔಟಾದರು. ಶೈ ಹೋಪ್ 14 ರನ್ ಕಾಣಿಕೆ ನೀಡಿದರು. ಶಿಮ್ರೊನ್ ಹೆಟ್ಮೆಯರ್ 10 ರನ್ ಸಿಡಿಸಿ ನಿರ್ಗಮಿಸಿದರೆ, ಹಿರಿಯ ಕ್ರಿಕೆಟಿಗ ಕೀರನ್ ಪೊಲಾರ್ಡ್ 14 ರನ್ ಸಿಡಿಸಿ ಔಟಾದರು.

ಡರೆನ್ ಬ್ರಾವೋ, ರೋವ್ಮಾನ್ ಪೊವೆಲ್ ಹಾಗೂ ಕಾರ್ಲೋಸ್ ಬ್ರಾಥ್ವೈಟ್ ಕೂಡ ಆಸರೆಯಾಗಲಿಲ್ಲ. 63 ರನ್‌ಗಳಿಗೆ ವೆಸ್ಟ್ ಇಂಡೀಸ್ 7 ವಿಕೆಟ್ ಕಳೆದುಕೊಂಡಿದೆ. ಚೊಚ್ಚಲ ಪಂದ್ಯದಲ್ಲಿ ಕ್ರುನಾಲ್ ಪಾಂಡ್ಯ ಮೊದಲ ವಿಕೆಟ್ ಸಂಭ್ರಮ ಆಚರಿಸಿದ್ದಾರೆ. ಕುಲ್ದೀಪ್ ಯಾದವ್ 3 ವಿಕೆಟ್ ಕಬಳಿಸಿದ್ದಾರೆ.