"

ಮುಂಬೈ[ಸೆ.11]: ದಕ್ಷಿಣ ಆಫ್ರಿಕಾ ವಿರುದ್ಧ ಸೆಪ್ಟೆಂಬರ್ 15ರಿಂದ ಆರಂಭವಾಗಲಿರುವ ಟಿ20 ಸರಣಿಗೆ ಹಾರ್ದಿಕ್ ಪಾಂಡ್ಯ ಹಾಗೂ ಕೃನಾಲ್ ಪಾಂಡ್ಯ ಭರ್ಜರಿ ತಯಾರಿ ನಡೆಸುತ್ತಿದ್ದಾರೆ. ಈ ನಡುವೆ ಹಾರ್ದಿಕ್ ಪಾಂಡ್ಯ ಬಾರಿಸಿದ ಚೆಂಡು ಕೂದಲೆಳೆಯಂತರದಲ್ಲಿ ಕೃನಾಲ್ ಪಾಂಡ್ಯ ತಪ್ಪಿಸಿಕೊಂಡಿದ್ದಾರೆ. 

ಪಾಕ್ ಪ್ರವಾಸಕ್ಕೆ ನಕಾರ; ಭಾರತದ ಜೊತೆ ಟಿ20 ಸರಣಿಗೆ ಸಹಕಾರ!

ಮೊದಲು ಹಾರ್ದಿಕ್ ಪಾಂಡ್ಯ ಸಾಮಾಜಿಕ ಜಾಲತಾಣವಾದ ಟ್ವಿಟರ್’ನಲ್ಲಿ ವಿಡಿಯೋವೊಂದನ್ನು ಹಂಚಿಕೊಂಡಿದ್ದು, ನೆಟ್ಸ್’ನಲ್ಲಿ ಅಣ್ಣ ಕೃನಾಲ್ ಪಾಂಡ್ಯ ಎಸೆತವನ್ನು ಮುನ್ನುಗ್ಗಿ ಬಾರಿಸುವ, ಧೋನಿಯಂತೆ ಹೆಲಿಕಾಪ್ಟರ್ ಶಾಟ್ ಹೊಡೆಯುವ ಕ್ಷಣದ ಜತೆಗೆ ಪಾಂಡ್ಯ ವರ್ಸಸ್ ಪಾಂಡ್ಯ ಟ್ರೈನಿಂಗ್. ನನಗನಿಸುತ್ತೆ ಆ ರೌಂಡ್’ನಲ್ಲಿ ಗೆದ್ದಿದ್ದೀನಿ ಅಲ್ವಾ ಅಣ್ಣ. ಕ್ಷಮಿಸು, ಸ್ವಲ್ಪದರಲ್ಲೇ ನಿನ್ನ ತಲೆ ಉಳಿಯಿತು ಎಂದು ಟಾಂಗ್ ಕೊಟ್ಟಿದ್ದಾರೆ.

ಸೌತ್ ಆಫ್ರಿಕಾ ವಿರುದ್ಧದ ಟಿ20 ಸರಣಿಗೆ ಟೀಂ ಇಂಡಿಯಾ ಪ್ರಕಟ!

ಇನ್ನು ಹಾರ್ದಿಕ್ ಪಾಂಡ್ಯ ಟ್ವೀಟ್ ನೋಡಿದ ತಕ್ಷಣ ಪ್ರತಿಕ್ರಿಯಿಸಿರುವ ಕೃನಾಲ್ ಪಾಂಡ್ಯ, ಕೂಲ್ ಬ್ರೋ, ಹೌದು ಈ ವಿಡಿಯೋವನ್ನೇಕೆ ಅಪ್’ಲೋಡ್ ಮಾಡಿಲ್ಲ ಎಂದು, ಹಾರ್ದಿಕ್ ಬಾಲ್ ಮಿಸ್ ಮಾಡಿಕೊಂಡಿರುವ ಕ್ಷಣವನ್ನು ಟ್ವಿಟರ್’ನಲ್ಲಿ ಹಂಚಿಕೊಳ್ಳುವ ಮೂಲಕ ತಮ್ಮನ ಕಾಲೆಳೆದಿದ್ದಾರೆ.