ಹ್ಯಾಮಿಲ್ಟನ್(ಜ.31): ನ್ಯೂಜಿಲೆಂಡ್ ವಿರುದ್ದದ ಆರಂಭಿಕ 3 ಪಂದ್ಯದಲ್ಲಿ ಅಬ್ಬರಿಸಿದ ಟೀಂ ಇಂಡಿಯಾ ಇದೀಗ 4ನೇ ಪಂದ್ಯದಲ್ಲಿ ತತ್ತರಿಸಿದೆ. ಟ್ರೆಂಟ್ ಬೋಲ್ಟ್ ದಾಳಿಗೆ ನಲುಗಿದ ಟೀಂ ಇಂಡಿಯಾ 35 ರನ್‌ಗಳಿಗೆ 6 ವಿಕೆಟ್ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿದೆ. 

ಇದನ್ನೂ ಓದಿ: ರಾಷ್ಟ್ರೀಯ ಕಬಡ್ಡಿ ಚಾಂಪಿಯನ್‌ಶಿಪ್ : ಕರ್ನಾಟಕಕ್ಕೆ ಆಘಾತ

ಟಾಸ್ ಸೋತು ಬ್ಯಾಟಿಂಗ್ ಇಳಿದ ನ್ಯೂಜಿಲೆಂಡ್ ಆರಂಭದಲ್ಲೇ ಶಿಖರ್ ಧವನ್ ವಿಕೆಟ್ ಕಳೆದುಕೊಂಡಿತು. ಧವನ್ 13 ರನ್ ಸಿಡಿಸಿ ಔಟಾದರು. 6ನೇ ಓವರ್‌ನಿಂದ ಆರಂಭವಾದ ಭಾರತದ ವಿಕೆಟ್ ಪತನ 14ನೇ ಓವರ್ ಆರಂಭಕ್ಕೆ 6 ವಿಕೆಟ್ ಕಳೆದುಕೊಂಡು ಹೀನಾಯ ಸ್ಥಿತಿಯಗೆ ತಲುಪಿದೆ.

ಇದನ್ನೂ ಓದಿ: ಶಸ್ತ್ರ ಚಿಕಿತ್ಸೆಗೆ ಒಳಗಾದ ಟೆನಿಸ್ ಪಟು ಆ್ಯಂಡಿ ಮರ್ರೆ

ನಾಯಕ ರೋಹಿತ್ ಶರ್ಮಾ 7, ತಂಡಕ್ಕೆ ಪಾದಾರ್ಪಣೆ ಮಾಡಿದ ಶುಭ್‌ಮಾನ್ ಗಿಲ್ 9, ಅಂಬಾಟಿ ರಾಯುಡು, ದಿನೇಶ್ ಕಾರ್ತಿಕ್ ಶೂನ್ಯ ಸುತ್ತಿದರೆ, ಕೇದಾರ್ ಜಾಧವ್ 1 ರನ್ ಸಿಡಿಸಿ ಔಟಾದರು. 35 ರನ್‌ಗೆ 6 ವಿಕೆಟ್ ಕಳೆದುಕೊಂಡಿರುವ ಭಾರತ ಇದೀಗ ಮುಖಭಂಗ ತಪ್ಪಿಸಲು ಹೆಣಗಾಡುತ್ತಿದೆ. ಟ್ರೆಂಟ್ ಬೋಲ್ಟ್ 4 ವಿಕೆಟ್ ಕಬಳಿಸಿದರೆ, ಕೊಲಿನ್ ಡೆ ಗ್ರ್ಯಾಂಡ್‌ಹೊಮ್ಮೆ 2 ವಿಕೆಟ್ ಕಬಳಿಸಿ ತಂಡಕ್ಕೆ ಶಾಕ್ ನೀಡಿದರು.