ಭಾರತ-ಇಂಗ್ಲೆಂಡ್ ಟೆಸ್ಟ್: ಶತಕ ಸಿಡಿಸಿ ಅಬ್ಬರಿಸಿದ ನಾಯಕ ವಿರಾಟ್ ಕೊಹ್ಲಿ!

https://static.asianetnews.com/images/authors/56bf5dcb-7868-50e0-b2d0-38391a34809d.jpg
First Published 2, Aug 2018, 10:03 PM IST
India vs england test virat kohli ton helps to fight back
Highlights

ಇಂಗ್ಲೆಂಡ್ ದಾಳಿಗೆ ಎದೆಯೊಡ್ಡಿ ಬ್ಯಾಟಿಂಗ್ ನಡೆಸಿದ ನಾಯಕ ವಿರಾಟ್ ಕೊಹ್ಲಿ ಭರ್ಜರಿ ಶತಕ ಸಿಡಿಸಿದ್ದಾರೆ. ಕೊಹ್ಲಿ ಏಕಾಂಗಿ ಹೋರಾಟದಿಂದ ಇಂಗ್ಲೆಂಡ್ ಲೆಕ್ಕಾಚಾರ ಬುಡಮೇಲಾಗಿದೆ. ಸೆಂಚುರಿ ಸಿಡಿಸಿ ಕೊಹ್ಲಿ ಬರೆದ ದಾಖಲೆ ಏನು? ಇಲ್ಲಿದೆ

ಎಡ್ಜ್‌ಬಾಸ್ಟನ್(ಆ.02):ಇಂಗ್ಲೆಂಡ್ ವಿರುದ್ಧದ ಮೊದಲ ಟೆಸ್ಟ್ ಪಂದ್ಯದಲ್ಲಿ ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಭರ್ಜರಿ ಶತಕ ಸಿಡಿಸಿ ಮಿಂಚಿದ್ದಾರೆ. ಇಂಗ್ಲೆಂಡ್ ನೆಲದಲ್ಲಿ ಕಳಪೆ ಪ್ರದರ್ಶನದ ಟೀಕೆ ಎದುರಿಸಿದ್ದ ಕೊಹ್ಲಿ, ಇದೀಗ ಸೆಂಚುರಿ ಬಾರಿಸೋ ಮೂಲಕ ತಕ್ಕ ಉತ್ತರ ನೀಡಿದ್ದಾರೆ.

ಇಂಗ್ಲೆಂಡ್ ತಂಡವನ್ನ 287ರನ್‌ಗೆ ಆಲೌಟ್ ಮಾಡಿದ ಟೀಂ ಇಂಡಿಯಾ ದ್ವಿತೀಯ ದಿನದಾಟದಲ್ಲಿ ಮೊದಲ ಇನ್ನಿಂಗ್ಸ್ ಆರಂಭಿಸಿತ್ತು. ಆದರೆ ವಿರಾಟ್ ಕೊಹ್ಲಿ ಹೊರತು ಪಡಿಸಿದರೆ ಇನ್ಯಾವ ಬ್ಯಾಟ್ಸ್‌ಮನ್‌ಗಳು ನಿರೀಕ್ಷಿತ ಬ್ಯಾಟಿಂಗ್ ಪ್ರದರ್ಶನ ನೀಡಲಿಲ್ಲ. 

ಏಕಾಂಗಿ ಹೋರಾಟ ನೀಡಿದ ಕೊಹ್ಲಿ ಟೆಸ್ಟ್ ಕ್ರಿಕೆಟ್‌ನಲ್ಲಿ 22ನೇ ಶತಕ ಸಿಡಿಸೋ ಮೂಲಕ ಭಾರತದ ಹಿನ್ನಡೆ ಅಂತರವನ್ನ ಕಡಿಮೆ ಮಾಡಿದ್ದಾರೆ. ಇಂಗ್ಲೆಂಡ್ ನೆಲದಲ್ಲಿ ಮೊದಲ ಶತಕ ಸಿಡಿಸಿದ ವಿರಾಟ್ ಕೊಹ್ಲಿ ವಿಶೇಷ ರೀತಿಯಲ್ಲಿ ಸಂಭ್ರಮಿಸಿದರು. 

ಇದನ್ನು ಓದಿ: ಭಾರತ-ಇಂಗ್ಲೆಂಡ್ ಟೆಸ್ಟ್: ಟೀಂ ಇಂಡಿಯಾವನ್ನು ಕೊಹ್ಲಿಯೇ ಕಾಪಾಡಬೇಕು!

ಭರ್ಜರಿ ಶತಕ ಸಿಡಿಸಿ ದಾಖಲೆ ಬರೆದ ವಿರಾಟ್  ಕೊಹ್ಲಿ, ಇಂಗ್ಲೆಂಡ್ ವಿರುದ್ಧ 1000 ರನ್ ಪೂರೈಸಿದ ಭಾರತದ 12ನೇ ಬ್ಯಾಟ್ಸ್‌ಮನ್ ಅನ್ನೋ ಹೆಗ್ಗಳಿಕೆಗೂ ಪಾತ್ರರಾಗಿದ್ದಾರೆ. ಇಷ್ಟೇ ಅಲ್ಲ  ನಾಯಕನಾಗಿ ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ವಿರಾಟ್ ಕೊಹ್ಲಿ 7000 ರನ್ ಸಿಡಿಸಿ ದಾಖಲೆ ಬರೆದಿದ್ದಾರೆ. 

loader