ಭಾರತ-ಇಂಗ್ಲೆಂಡ್ ಟೆಸ್ಟ್: ಟೀಂ ಇಂಡಿಯಾವನ್ನು ಕೊಹ್ಲಿಯೇ ಕಾಪಾಡಬೇಕು!

First Published 2, Aug 2018, 7:30 PM IST
India vs england test team india trouble start in day2
Highlights

ಇಂಗ್ಲೆಂಡ್ ತಂಡವನ್ನಆಲೌಟ್ ಮಾಡಿ ಮೊದಲ ಇನ್ನಿಂಗ್ಸ್ ಆರಂಭಿಸಿರುವ ಟೀಂ ಇಂಡಿಯಾ ಅಭಿಮಾನಿಗಳ ಒತ್ತಡವನ್ನ ಹೆಚ್ಚಿಸಿದೆ.  ಎಡ್ಜ್‌ಬಾಸ್ಟನ್ ಟೆಸ್ಟ್ ಪಂದ್ಯದ ಮೊದಲ ದಿನ ಮಿಂಚಿದ್ದ ಟೀಂ ಇಂಡಿಯಾ ದ್ವಿತೀಯ ದಿನದಲ್ಲಿ ಯಾಕೆ ಹೀಗಾಯ್ತು? ಇಲ್ಲಿದೆ ಅಪ್‌ಡೇಟ್ಸ್

ಎಡ್ಜ್‌ಬಾಸ್ಟನ್(ಆ.02): ಮೊದಲ ಟೆಸ್ಟ್ ಪಂದ್ಯ ಮೊದಲ ದಿನ ಅಬ್ಬರಿಸಿದ್ದ ಟೀಂ ಇಂಡಿಯಾ ದ್ವಿತೀಯ ಮಕಾಡೆ ಮಲಗಿದೆ. ಇಂಗ್ಲೆಂಡ್ ತಂಡವನ್ನ 287 ರನ್‌ಗೆ ಆಲೌಟ್ ಮಾಡಿ ಭರ್ಜರಿ ಮೇಲುಗೈ ಸಾಧಿಸಿದ್ದ ವಿರಾಟ್ ಕೊಹ್ಲಿ ಸೈನ್ಯ ಬ್ಯಾಟಿಂಗ್‌ನಲ್ಲಿ ಹಳೇ ಚಾಳಿ ಮುಂದುವರಿಸಿದಿದೆ.

ಶಿಖರ್ ಧವನ್ ಹಾಗೂ ಮುರಳಿ ವಿಜಯ್ ಡಿಸೆಂಟ್ ಒಪನಿಂಗ್ ನೀಡಿದರು. ಇವರಿಬ್ಬರ ಜೊತೆಯಾಟ 50 ರನ್‌ಗೆ ಅಂತ್ಯವಾಯಿತು. ವಿಜಯ್ 20, ಧವನ್ 26 ರನ್ ಸಿಡಿಸಿ ಪೆವಿಲಿಯನ್ ಸೇರಿದರು. ಕೆಎಲ್ ರಾಹುಲ್, ಅಜಿಂಕ್ಯ ರಹಾನೆ ಹಾಗೂ ದಿನೇಶ್ ಕಾರ್ತಿಕ್ ಹೋರಾಟ ನೀಡಲೇ ಇಲ್ಲ.

ಸದ್ಯ ವಿರಾಟ್ ಕೊಹ್ಲಿ ಕ್ರೀಸ್‌ನಲ್ಲಿರೋದೇ  ಟೀಂ ಇಂಡಿಯಾದ ಸಮಾಧಾನ. ಈ ಪಂದ್ಯದ ಫಲಿತಾಂಶ ಇದೀಗ ಕೊಹ್ಲಿ ಕೈಯಲ್ಲಿದೆ. ನೆಚ್ಚಿಕೊಂಡ ಬ್ಯಾಟ್ಸ್‌ಮನ್‌ಗಳೆಲ್ಲಾ ಕೈಕೊಟ್ಟಿದ್ದಾರೆ. 100 ರನ್‌ಗಳಿಸುವಷ್ಟರಲ್ಲಿ ಭಾರತ 5 ವಿಕೆಟ್ ಕಳೆದುಕೊಂಡಿತು. ಆದರೆ ವಿರಾಟ್ ಕೊಹ್ಲಿ ಏಕಾಂಗಿ ಹೋರಾಟ ನೀಡೋ ಮೂಲಕ ಅರ್ಧಶತಕ ಸಿಡಿಸಿದ್ದಾರೆ. 

ಒಂದೆಡೆ ಕೊಹ್ಲಿ ಹೋರಾಟ ನೀಡುತ್ತಿದ್ದರೆ, ಇತ್ತ ಯಾರಿಂದಲೂ ಉತ್ತಮ ಸಾಥ್ ಸಿಗುತ್ತಿಲ್ಲ. ಹಾರ್ದಿಕ್ ಪಾಂಡ್ಯ 22 ರನ್ ಸಿಡಿಸಿ ಔಟಾದರು. ಇನ್ನು ರವಿಚಂದ್ರನ್ ಅಶ್ವಿನ್ 10 ರನ್‌ಗೆ ಸುಸ್ತಾದರು. ಹೀಗಾಗಿ 7 ವಿಕೆಟ್ ಕಳೆದುಕೊಂಡಿರುವ ಭಾರತವನ್ನ ವಿರಾಟ್ ಕೊಹ್ಲಿಯೇ ಕಾಪಾಡಬೇಕು.

loader