ಭಾರತ-ಇಂಗ್ಲೆಂಡ್ ಟೆಸ್ಟ್: ಟೀಂ ಇಂಡಿಯಾಗೆ ಹನುಮಾ-ಜಡೇಜಾ ಆಸರೆ

https://static.asianetnews.com/images/authors/56bf5dcb-7868-50e0-b2d0-38391a34809d.jpg
First Published 9, Sep 2018, 4:26 PM IST
India vs England Test Vihari Jadeja help India to surpass 200
Highlights

ಭಾರತ ಹಾಗೂ ಇಂಗ್ಲೆಂಡ್ ನಡುವಿನ 3ನೇ ಟೆಸ್ಟ್ ಪಂದ್ಯದ 3ನೇ ಟೀಂ ಇಂಡಿಯಾ ಪ್ರಾಬಲ್ಯ ಸಾಧಿಸೋ ಸೂಚನೆ ನೀಡಿದೆ. ಓವಲ್ ಟೆಸ್ಟ್ ಪಂದ್ಯದ 3ನೇ ದಿನದಾಟದ ಅಪ್‌ಡೇಟ್ಸ್ ಇಲ್ಲಿದೆ.

ಓವಲ್(ಸೆ.09): ಇಂಗ್ಲೆಂಡ್ ವಿರುದ್ದದ 5ನೇ ಹಾಗೂ ಅಂತಿಮ ಟೆಸ್ಟ್ ಪಂದ್ಯದ ತೃತೀಯ ದಿನ ಟೀಂ ಇಂಡಿಯಾ ದಿಟ್ಟ ಹೋರಾಟ ನೀಡೋ ಸೂಚನೆ ನೀಡಿದೆ. 6 ವಿಕೆಟ್ ನಷ್ಟಕ್ಕೆ 174 ರನ್‌ಗಳೊಂದಿಗೆ ದಿನದಾಟ ಆರಂಭಿಸಿದ ಭಾರತಕ್ಕೆ ರವೀಂದ್ರ ಜಡೇಜಾ ಹಾಗೂ ಹನುಮಾ ವಿಹಾರಿ ಆಸರೆಯಾಗಿದ್ದಾರೆ.

ದ್ವಿತೀಯ ದಿನ ಇಂಗ್ಲೆಂಡ್ ಬೌಲರ್‌ಗಳ ದಾಳಿಗೆ ಟೀಂ ಇಂಡಿಯಾ ತತ್ತರಿಸಿತು. ಆದರೆ 3ನೇ ದಿನದಾಟದಲ್ಲಿ ಹನುಮಾ ವಿಹಾರಿ ಹಾಗೂ ಜಡೇಜಾ ಅತ್ಯುತ್ತಮ ಜೊತೆಯಾಟ ನೀಡಿದ್ದಾರೆ. ಸದ್ಯ ಭಾರತ 6 ವಿಕೆಟ್ ನಷ್ಟಕ್ಕೆ 204 ರನ್ ಸಿಡಿಸಿದೆ. ಹನುಮಾ ವಿಹಾರಿ ಅಜೇಯ. 38 ಹಾಗೂ ಜಡೇಜಾ ಅಜೇಯ 24 ರನ್ ಸಿಡಿಸಿ ತಂಡಕ್ಕೆ ಆಸರೆಯಾಗಿದ್ದಾರೆ.

ಮೊದಲ ದಿನ ಭಾರತ ಮೇಲುಗೈ ಸಾಧಿಸಿದರೆ, ದ್ವಿತೀಯ ದಿನ ಇಂಗ್ಲೆಂಡ್ ಬೌಲರ್‌ಗಳು ಪರಾಕ್ರಮ ಮೆರೆದಿದ್ದರು. 2ನೇ ದಿನ ಇಂಗ್ಲೆಂಡ್ ತಂಡವನ್ನ 332ರನ್‌ಗೆ ಆಲೌಟ್ ಮಾಡಿ ಭಾರತ ಮೊದಲ ಇನ್ನಿಂಗ್ಸ್ ಆರಂಭಿಸಿತು. ಆದರೆ ದಿನದಾಟದ ಅಂತ್ಯದಲ್ಲಿ ಭಾರತ 6 ವಿಕೆಟ್ ನಷ್ಟಕ್ಕೆ 174 ರನ್ ಸಿಡಿಸಿತ್ತು.

loader