ಎಡ್ಜ್‌ಬಾಸ್ಟನ್(ಆ.05): ಇಂಗ್ಲೆಂಡ್ ವಿರುದ್ಧದ ಮೊದಲ ಟೆಸ್ಟ್ ಪಂದ್ಯಗ ಸೋಲಿನ ಬಳಿಕ ಟೀಂ ಇಂಡಿಯಾ ಮಾಜಿ ಕ್ರಿಕೆಟಿಗ ಸಂಜಯ್ ಮಂಜ್ರೇಕರ್ ಮಾಡಿರೋ ಟ್ವೀಟ್‌ಗೆ ಭಾರಿ ಆಕ್ರೋಶ ವ್ಯಕ್ತವಾಗಿದೆ. ಭಾರತ ಸೋಲಿನ ಬಳಿಕ ಮಂಜ್ರೇಕರ್ ಟ್ವಿಟ್ ಮೂಲಕ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದರು. ತಂಡ ಹಾಗೂ ವ್ಯಕ್ತಿ ನಡುವಿನ ಹೋರಾಟದಲ್ಲಿ ಯಾವಾಗಲು ತಂಡವೇ ಗೆಲ್ಲಲಿದೆ ಎಂದು ಟ್ವೀಟ್ ಮಾಡಿದ್ದರು. 

 

 

ಟ್ವೀಟ್ ಮೂಲಕ ಸಂಜಯ್ ಮಂಜ್ರೇಕರ್, ಟೀಂ ಇಂಡಿಯಾದಲ್ಲಿ ನಾಯಕ ವಿರಾಟ್ ಕೊಹ್ಲಿ, ಇಂಗ್ಲೆಂಡ್ ವಿರುದ್ಧ ಹೋರಾಟ  ಮಾಡಿದ್ದರು. ಉಳಿದ ಸದಸ್ಯರು ಯಾರೂ ಹೋರಾಟ ಮಾಡಿಲ್ಲ ಎಂದು ಸೂಚ್ಯವಾಗಿ ಹೇಳಿದ್ದರು.

ಮಂಜ್ರೇಕರ್ ಟ್ವೀಟ್‌ಗೆ ಪ್ರತಿಕ್ರಿಯಿಸಿರುವ ಅಭಿಮಾನಿಗಳು, ಆರ್ ಅಶ್ವಿನ್ ಹಾಗೂ ಇಶಾಂತ್ ಶರ್ಮಾ ಕೂಡ ಹೋರಾಟ ಮಾಡಿದ್ದಾರೆ. ಕೇವಲ ಕೊಹ್ಲಿಯನ್ನ ಹೊಗಳುವುದು ಸರಿಯಲ್ಲ ಎಂದು ಆಕ್ರೋಶ  ವ್ಯಕ್ತಪಡಿಸಿದ್ದಾರೆ. ಮಂಜ್ರೇಕರ್ ಟ್ವೀಟ್‌ಗೆ ಅಭಿಮಾನಿಗಳ ಪ್ರತಿಕ್ರಿಯೆ ಇಲ್ಲಿದೆ.

 

 

 

 

 

;