ಭಾರತ ಇಂಗ್ಲೆಂಡ್ ಮೊದಲ ಟೆಸ್ಟ್ ಪಂದ್ಯದ ದ್ವಿತೀಯ ದಿನ ಇಂಗ್ಲೆಂಡ್ ಉಪನಾಯಕ ಜೋಸ್ ಬಟ್ಲರ್ ದಿಢೀರ್ ಆಸ್ಪತ್ರೆ ದಾಖಲಾಗಿದ್ದಾರೆ. ಬಟ್ಲರ್ ಸದ್ಯದ ಪರಿಸ್ಥಿತಿ ಹೇಗಿದೆ? ಇಲ್ಲಿದೆ ವಿವರ.

ಎಡ್ಜ್‌ಬಾಸ್ಟನ್(ಆ.02): ಭಾರತ ವಿರುದ್ಧದ ಮೊದಲ ಟೆಸ್ಟ್ ಪಂದ್ಯದ ದ್ವಿತೀಯ ದಿನ ಫೀಲ್ಡಿಂಗ್ ಮಾಡುತ್ತಿದ್ದ ವೇಳೆ ಗಾಯಗೊಂಡ ಇಂಗ್ಲೆಂಡ್ ಉಪನಾಯಕ ಜೋಸ್ ಬಟ್ಲರ್ ದಿಢೀರ್ ಆಸ್ಪತ್ರೆ ದಾಖಲಾಗಿದ್ದಾರೆ.

Scroll to load tweet…

ಸ್ಲಿಪ್‌ನಲ್ಲಿ ಫೀಲ್ಡಿಂಗ್ ಮಾಡುತ್ತಿದ್ದ ವೇಳೆ ಜೋಸ್ ಬಟ್ಲರ್ ಕೈಬೆರಳಿಗೆ ಗಾಯಮಾಡಿಕೊಂಡಿದ್ದರು. ತಕ್ಷಣವೇ ಜೋಸ್ ಬಟ್ಲರ್ ಅವರನ್ನ ಆಸ್ಪತ್ರೆಗೆ ದಾಖಲಿಸಿ, ಎಕ್ಸ್ ರೇ ತೆಗೆಯಲಾಗಿದೆ. ಎಕ್ಸ್ ರೇ ಬಳಿಕ ಜೋಸ್ ಬಟ್ಲರ್ ಮತ್ತೆ ಕೀಡಾಂಗಣಕ್ಕೆ ಆಗಮಿಸಿದ್ದಾರೆ. ಗಾಯ ಗಂಭೀರವಾಗಿಲ್ಲದ ಕಾರಣ, ಮತ್ತೆ ಮೈದಾನಕ್ಕೆ ಇಳಿಯಲಿದ್ದಾರೆ.

ಫೀಲ್ಡಿಂಗ್‌ನಲ್ಲಿ ಇಂಜುರಿಗೆ ತುತ್ತಾದ ಬಟ್ಲರ್, ಮೊದಲ ಇನ್ನಿಂಗ್ಸ್ ಬ್ಯಾಟಿಂಗ್‌ನಲ್ಲಿ ಶೂನ್ಯಕ್ಕೆ ಔಟಾಗಿದ್ದರು. ಆರ್ ಅಶ್ವಿನ್ ಎಸೆತದಲ್ಲಿ ಬಟ್ಲರ್ ವಿಕೆಟ್ ಕೈಚೆಲ್ಲಿದರು. ಇದೇ ಮೊದಲ ಬಾರಿಗೆ ಜೋಸ್ ಬಟ್ಲರ್‌ಗೆ ಟೆಸ್ಟ್ ಕ್ರಿಕೆಟ್‌ನಲ್ಲಿ ಉಪನಾಯಕ ಪಟ್ಟ ನೀಡಲಾಗಿದೆ.