ಲಾರ್ಡ್ಸ್ ಟೆಸ್ಟ್: ಟಾಸ್ ಗೆದ್ದ ಇಂಗ್ಲೆಂಡ್ ಫೀಲ್ಡಿಂಗ್ ಆಯ್ಕೆ

https://static.asianetnews.com/images/authors/56bf5dcb-7868-50e0-b2d0-38391a34809d.jpg
First Published 10, Aug 2018, 3:14 PM IST
India vs england test joe root opted to field first
Highlights

ಭಾರತ ಹಾಗೂ ಇಂಗ್ಲೆಂಡ್ ನಡುವಿನ ಲಾರ್ಡ್ಸ್ ಟೆಸ್ಟ್ ಪಂದ್ಯ ಮಳೆಯಿಂದಾಗಿ 2ನೇ ದಿನದಿಂದ ಆರಂಭಗೊಂಡಿದೆ. 4 ದಿನದ ಪಂದ್ಯಕ್ಕಾಗಿ ಇದೀಗ ಉಭಯ ತಂಡಗಳು ಎರಡೆರಡು ಬದಲಾವಣೆ ಮಾಡಿದೆ. ಇಲ್ಲಿದೆ ಉಭಯ ತಂಡದ ಆಡೋ ಹನ್ನೊಂದರ ಬಳಗ.
 

ಲಾರ್ಡ್ಸ್(ಆ.10): ಭಾರತ ವಿರುದ್ಧದ ದ್ವಿತೀಯ ಟೆಸ್ಟ್ ಪಂದ್ಯದಲ್ಲಿ ಟಾಸ್ ಗೆದ್ದ ಇಂಗ್ಲೆಂಡ್ ಫೀಲ್ಡಿಂಗ್ ಆಯ್ಕೆ ಮಾಡಿಕೊಂಡಿದೆ. ಮೊದಲ ದಿನ ಮಳೆಯಿಂದಾಗಿ ರದ್ದಾದ ಕಾರಣ, ಪಂದ್ಯ ಎರಡನೇ ದಿನದಿಂದ ಆರಂಭಗೊಂಡಿದೆ.

ಟೀಂ ಇಂಡಿಯಾದಲ್ಲಿ ಎರಡು ಬದಲಾವಣೆ ಮಾಡಲಾಗಿದೆ. ಶಿಖರ್ ಧವನ್ ಬದಲು, ಚೇತೇಶ್ವರ್ ಪೂಜಾರಗೆ ಅವಕಾಶ ನೀಡಲಾಗಿದೆ. ಇನ್ನು ವೇಗಿ ಉಮೇಶ್ ಯಾದವ್ ಬದಲು ಕುಲ್ದೀಪ್ ಯಾದವ್‌ಗೆ ಸ್ಥಾನ ನೀಡಲಾಗಿದೆ. ಈ ಮೂಲಕ ಇಬ್ಪರು ಸ್ಪಿನ್ನರ್‌ಗೆ ಅವಕಾಶ ನೀಡಲಾಗಿದೆ. 

 

 

ಇಂಗ್ಲೆಂಡ್ ತಂಡದಲ್ಲೂ ಎರಡು ಬದಲಾವಣೆ ಮಾಡಲಾಗಿದೆ. ಬ್ಯಾಟ್ಸ್‌ಮನ್ ಡೇವಿಡ್ ಮಲನ್ ಬದಲು ಯುವ ಬ್ಯಾಟ್ಸ್‌ಮನ್ ಓಲ್ಲಿ ಪೋಪ್ ಸ್ಥಾನ ಪಡೆದಿದ್ದಾರೆ. ಇನ್ನು ಆಲ್‌ರೌಂಡರ್ ಬೆನ್ ಸ್ಟೋಕ್ಸ್ ಬದಲು ಕ್ರಿಸ್ ವೋಕ್ಸ್‌ಗೆ ಅವಕಾಶ ನೀಡಲಾಗಿದೆ.

 

 

loader