ಭಾರತ ವಿರುದ್ಧದ 4ನೇ ಟೆಸ್ಟ್ ಪಂದ್ಯಕ್ಕೆ ಇಂಗ್ಲೆಂಡ್ ತಂಡ ಪ್ರಕಟಿಸಲಾಗಿದೆ. ಮಹತ್ವದ ಪಂದ್ಯದ ಆರಂಭಕ್ಕೂ ಮುನ್ನ ಇಂಗ್ಲೆಂಡ್ ತಂಡಕ್ಕೆ ಬಿಗ್ ಶಾಕ್ ಎದುರಾಗಿದೆ. ಇಲ್ಲಿದೆ ಇಂಗ್ಲೆಂಡ್ ಆಡೋ ಹನ್ನೊಂದರ ಬಳಗ.
ಸೌಥಾಂಪ್ಟನ್(ಆ.29): ಭಾರತ ಹಾಗೂ ಇಂಗ್ಲೆಂಡ್ ನಡುವಿನ ನಾಲ್ಕನೇ ಟೆಸ್ಟ್ ಪಂದ್ಯಕ್ಕೆ ಇನ್ನೊಂದು ದಿನ ಬಾಕಿ. ನಾಳೆ(ಆ.30 )ಯಿಂದ ಮಹತ್ವದ 4ನೇ ಟೆಸ್ಟ್ ಪಂದ್ಯ ಆರಂಭಗೊಳ್ಳಲಿದೆ. ಇಂಗ್ಲೆಂಡ್ ತನ್ನ ಸಂಪ್ರದಾಯದಂತೆ ಆಡೋ ಹನ್ನೊಂದರ ಬಳಗವನ್ನ ಪ್ರಕಟಿಸಿದೆ.
ನಾಯಕ ಜೋ ರೂಟ್ ಸುದ್ದಿಗೋಷ್ಠಿಯಲ್ಲಿ ಇಂಗ್ಲೆಂಡ್ ತಂಡ ಪ್ರಕಟಿಸಿದ್ದಾರೆ. ಇಂಜುರಿಯಾಗಿರುವ ಜಾನಿ ಬೈರ್‌ಸ್ಟೋ ತಂಡದಲ್ಲಿ ಸ್ಥಾನ ಪಡೆಯುವಲ್ಲಿ ಯಶಸ್ವಿಯಾಗಿದ್ದಾರೆ.
ಗಾಯಗೊಂಡಿರುವ ಕ್ರಿಸ್ ವೋಕ್ಸ್ 4ನೇ ಟೆಸ್ಟ್ ಪಂದ್ಯದಿಂದ ಹೊರಬಿದ್ದಿದ್ದಾರೆ. ಹೀಗಾಗಿ ಸ್ಯಾಮ್ ಕುರ್ರನ್ ಸ್ಥಾನ ಪಡೆದಿದ್ದಾರೆ. 4ನೇ ಟೆಸ್ಟ್ ಪಂದ್ಯಕ್ಕೆ ಇಂಗ್ಲೆಂಡ್ ಇಬ್ಬರು ಸ್ಪಿನ್ನರ್‌ಗಳನ್ನ ಕಣಕ್ಕಿಳಿಸಿದೆ. ಆದಿಲ್ ರಶೀದ್ ಜೊತೆಗೆ ಮೊಯಿನ್ ಆಲಿಗೂ ಸ್ಥಾನ ನೀಡಿದೆ.
ಇಂಗ್ಲೆಂಡ್ ತಂಡ:
ಜೋ ರೂಟ್(ನಾಯಕ), ಆಲಿಸ್ಟೈರ್ ಕುಕ್, ಕೆಟನ್ ಜೆನ್ನಿಂಗ್ಸ್, ಜಾನಿ ಬೈರ್‌ಸ್ಟೋ, ಬೆನ್ ಸ್ಟೋಕ್ಸ್, ಜೋಸ್ ಬಟ್ಲರ್, ಮೊಯಿನ್ ಅಲಿ, ಸ್ಯಾಮ್ ಕುರ್ರನ್, ಆದಿಲ್ ರಶೀದ್, ಸ್ಟುವರ್ಟ್ ಬ್ರಾಡ್, ಜೇಮ್ಸ್ ಆಂಡರ್ಸನ್
