ಇಂಗ್ಲೆಂಡ್ ವಿರುದ್ಧದ 4ನೇ ಟೆಸ್ಟ್ ಪಂದ್ಯ ಟೀಂ ಇಂಡಿಯಾ ಪಾಲಿಗೆ ಮಹತ್ವದ್ದಾಗಿದೆ. ಪಂದ್ಯ ಆರಂಭ ಇನ್ನೆರಡು ದಿನ ಇರುವಾಗಲೇ ಟೀಂ ಇಂಡಿಯಾ ಫಿಟ್ನೆಸ್ ಸಮಸ್ಯೆ ಎದುರಿಸುತ್ತಿದೆ. ತಂಡದ ಪ್ರಮುಖ ಸ್ಪಿನ್ನರ್ ಆರ್ ಅಶ್ವಿನ್ ಸಂಪೂರ್ಣ್ ಫಿಟ್ ಆಗಿಲ್ಲ.

ಲಂಡನ್(ಆ.28): ಇಂಗ್ಲೆಂಡ್ ವಿರುದ್ದದ 3ನೇ ಟೆಸ್ಟ್ ಪಂದ್ಯ ಗೆದ್ದು ಆತ್ಮವಿಶ್ವಾಸ ಹೆಚ್ಚಿಸಿಕೊಂಡಿರುವ ಟೀಂ ಇಂಡಿಯಾ ಇದೀಗ 4ನೇ ಟೆಸ್ಟ್ ಪಂದ್ಯಕ್ಕೆ ಸಜ್ಜಾಗುತ್ತಿದೆ. ವಿರಾಟ್ ಕೊಹ್ಲಿ ನಾಯಕತ್ವದ ಟೀಂ ಇಂಡಿಯಾ ಈಗಾಗಲೇ ಅಭ್ಯಾಸ ಶುರು ಮಾಡಿದೆ.

Add Asianetnews Kannada as a Preferred SourcegooglePreferred

ಆಗಸ್ಟ್ 30 ರಂದು ಆಂಗ್ಲರ ವಿರುದ್ಧದ 4ನೇ ಟೆಸ್ಟ್ ಪಂದ್ಯ ಆರಂಭಗೊಳ್ಳಲಿದೆ. ಸರಣಿ ಉಳಿಸಿಕೊಳ್ಳಲು ಹೋರಾಡುತ್ತಿರುವ ಭಾರತ ತಂಡಕ್ಕೆ ಈ ಪಂದ್ಯ ಮುಖ್ಯವಾಗಿದೆ. ಇದಕ್ಕಾಗಿ ಕೊಹ್ಲಿ ಬಾಯ್ಸ್ ನೆಟ್ ಪ್ರಾಕ್ಟೀಸ್ ಆರಂಭಿಸಿದ್ದಾರೆ.

Scroll to load tweet…

ಅಭ್ಯಾಸದ ವೇಳೆ ಆರ್ ಅಶ್ವಿನ್ ಸಂಪೂರ್ಣ ಫಿಟ್ನೆಸ್ ಕುರಿತು ಅನುಮಾನ ಮೂಡಿದೆ. ಅಶ್ವಿನ್, ಟೀಂ ಇಂಡಿಯಾ ಫಿಸಿಯೋ ಜೊತೆ ಸಮಾಲೋಚನೆ ನಡೆಸಿದರೆ, ಮತ್ತೊರ್ವ ಸ್ಪಿನ್ನರ್ ರವೀಂದ್ರ ಜಡೇಜಾ ನೆಟ್ಸ್‌ನಲ್ಲಿ ಅಭ್ಯಾಸ ನಡೆಸಿದರು.

3ನೇ ಟೆಸ್ಟ್ ಪಂದ್ಯದ ವೇಳೆ ಆರ್ ಅಶ್ವಿನ್ ಇಂಜುರಿಗೆ ತುತ್ತಾಗಿದ್ದರು. ಆದರೆ ಚೇತರಿಸಿಕೊಂಡು ಮತ್ತೆ ಬೌಲಿಂಗ್ ಮಾಡಿದ್ದರು. ಇದೀಗ ಅಶ್ವಿನ್ ಫಿಟ್ನೆಸ್ ಸಮಸ್ಯೆ ಎದುರಿಸುತ್ತಿರುವುದು ಮೇಲ್ನೋಟಕ್ಕೆ ಕಂಡುಬಂದಿದೆ. ಹೀಗಾಗಿ ಆರ್ ಅಶ್ವಿನ್ ಬದಲು ರವೀಂದ್ರ ಜಡೇಜಾ ಕಣಕ್ಕಿಳಿಯುವ ಸಾಧ್ಯತೆ ಇದೆ.