ಸೌತಾಂಪ್ಟನ್(ಆ.30): ಭಾರತ ವಿರುದ್ದದ 4ನೇ ಟೆಸ್ಟ್ ಪಂದ್ಯದಲ್ಲಿ ಟಾಸ್ ಗೆದ್ದು ಬ್ಯಾಟಿಂಗ್ ಇಳಿದ ಇಂಗ್ಲೆಂಡ್ ಆರಂಭದಲ್ಲೇ ವಿಕೆಟ್ ಕಳೆದುಕೊಂಡಿದೆ. ರನ್ ಖಾತೆ ತೆರೆದ ಬೆನ್ನಲ್ಲೇ ಕೆಟನ್ ಜೆನ್ನಿಂಗ್ಸ್ ಪೆಲಿಯನ್ ಸೇರಿದರು.

 

 

ಜಸ್‌ಪ್ರೀತ್ ಬುಮ್ರಾ ದಾಳಿಗೆ ತತ್ತರಿಸಿದ ಕೆಟನ್ ಜೆನ್ನಿಂಗ್ಸ್ ಶೂನ್ಯಕ್ಕೆ ಔಟಾದರು. ಈ ಮೂಲಕ ಇಂಗ್ಲೆಂಡ್ 1 ರನ್ ಗಳಿಸುವಷ್ಟರಲ್ಲೇ 1 ವಿಕೆಟ್ ಕಳೆದುಕೊಂಡಿದೆ. ಈ ಮೂಲಕ ಸರಣಿಯಲ್ಲಿ ಮತ್ತೆ ಇಂಗ್ಲೆಂಡ್ ಆರಂಭಿಕರು ಜೊತೆಯಾಟ ನೀಡುವಲ್ಲಿ ವಿಫಲವಾಗಿದೆ.

4ನೇ ಟೆಸ್ಟ್ ಪಂದ್ಯಕ್ಕಾಗಿ ಭಾರತ ತಂಡದಲ್ಲಿ ಯಾವುದೇ ಬದಲಾವಣೆ ಮಾಡಿಲ್ಲ. ಇಂಗ್ಲೆಂಡ್ ಕ್ರಿಸ್ ವೋಕ್ಸ್ ಬದಲು ಸ್ಯಾಮ್ ಕುರ್ರನ್ ಹಾಗೂ ಒಲ್ಲಿ ಪೋಪ್ ಬದಲು ಮೊಯಿನ್ ಆಲಿಗೆ ಅವಕಾಶ ನೀಡಿದೆ.