Asianet Suvarna News Asianet Suvarna News

ಮುಂಬೈ ಇಂಡಿಯನ್ಸ್ ಐದು ಸೋಲಿನ ಹಿಂದಿದೆ ಪಾಂಡ್ಯ ಮಾಡಿದ 5 ಬಿಗ್ ಮಿಸ್ಟೇಕ್ಸ್..!

ಈ ಸಲದ ಐಪಿಎಲ್‌ನಲ್ಲಿ ಹಾರ್ದಿಕ್ ಪಾಂಡ್ಯ ಮೇಲೆ ಎಲ್ಲರ ಕಣ್ಣು ಬಿದ್ದಿದೆ. ಇದಕ್ಕೆ ಕಾರಣ ಒಮ್ಮೆ ಚಾಂಪಿಯನ್, ಒಮ್ಮೆ ಫೈನಲ್ಗೇರಿಸಿದ್ದ ಗುಜರಾತ್ ಟೈಟನ್ಸ್ ತಂಡವನ್ನ ಬಿಟ್ಟು, ಟ್ರೇಡಿಂಗ್ ಮೂಲಕ ಮುಂಬೈ ಇಂಡಿಯನ್ಸ್ ಸೇರಿ ಕ್ಯಾಪ್ಟನ್ ಆಗಿದ್ದು. ಈ ನಡುವೆ ಈ ಬಾರಿಯ ಕಲರ್ ಫುಲ್ ಟೂರ್ನಿಯಲ್ಲಿ ಹಾರ್ದಿಕ್ ಪ್ರದರ್ಶನವೂ ಎಲ್ಲರ ಗಮನ ಸೆಳೆಯುತ್ತಿದೆ

Captain Hardik Pandya 5 blunders Cost Mumbai Indians Result all need to know kvn
Author
First Published Apr 24, 2024, 1:52 PM IST | Last Updated Apr 24, 2024, 1:52 PM IST

ಬೆಂಗಳೂರು: ಮುಂಬೈ ಇಂಡಿಯನ್ಸ್ ಬರೀ ಸೋಲುಗಳನ್ನೇ ಕಾಣ್ತಿದೆ. ಗೆಲುವಿಗಿಂತ ಸೋಲುಗಳೇ ಜಾಸ್ತಿಯಾಗಿವೆ. ಇದಕ್ಕೆ ಕ್ಯಾಪ್ಟನ್ ಹಾರ್ದಿಕ್ ಪಾಂಡ್ಯ ಕಾರಣ ಅನ್ನಲಾಗ್ತಿದೆ. ಅವರು ಮಾಡಿರೋ ಮಿಸ್ಟೇಕ್ಸ್‌ಗಳೇ ಮುಂಬೈ ತಂಡವನ್ನ ಇಂದು ಈ ಸ್ಥಿತಿಗೆ ತಲುಪಿಸಿವೆ. ಹಾಗಾದ್ರೆ ಪಾಂಡ್ಯ ಮಾಡಿರುವ ಆ ತಪ್ಪುಗಳಾದ್ರೂ ಏನು ಅನ್ನೋದನ್ನ ಹೇಳ್ತೀವಿ ನೋಡಿ.

ಹಾರ್ದಿಕ್ ಪಾಂಡ್ಯ ಮಾಡಿದ ಆ ಐದು ತಪ್ಪುಗಳು..!

ಈ ಸಲದ ಐಪಿಎಲ್‌ನಲ್ಲಿ ಹಾರ್ದಿಕ್ ಪಾಂಡ್ಯ ಮೇಲೆ ಎಲ್ಲರ ಕಣ್ಣು ಬಿದ್ದಿದೆ. ಇದಕ್ಕೆ ಕಾರಣ ಒಮ್ಮೆ ಚಾಂಪಿಯನ್, ಒಮ್ಮೆ ಫೈನಲ್ಗೇರಿಸಿದ್ದ ಗುಜರಾತ್ ಟೈಟನ್ಸ್ ತಂಡವನ್ನ ಬಿಟ್ಟು, ಟ್ರೇಡಿಂಗ್ ಮೂಲಕ ಮುಂಬೈ ಇಂಡಿಯನ್ಸ್ ಸೇರಿ ಕ್ಯಾಪ್ಟನ್ ಆಗಿದ್ದು. ಈ ನಡುವೆ ಈ ಬಾರಿಯ ಕಲರ್ ಫುಲ್ ಟೂರ್ನಿಯಲ್ಲಿ ಹಾರ್ದಿಕ್ ಪ್ರದರ್ಶನವೂ ಎಲ್ಲರ ಗಮನ ಸೆಳೆಯುತ್ತಿದೆ. 8 ಪಂದ್ಯಗಳಿಂದ 151 ರನ್ ಹೊಡೆದು, 4 ವಿಕೆಟ್ ಪಡೆದಿದ್ದಾರೆ. ಮುಂಬೈ ಇಂಡಿಯನ್ಸ್ ಐದು ಸೋತು, ಮೂರನ್ನ ಗೆದ್ದಿದೆ. ಈ ಐದು ಸೋಲುಗಳಿಗೆ ಪಾಂಡ್ಯನ ಐದು ಬಿಗ್ ಮಿಸ್ಟೇಕ್ಗಳೇ ಕಾರಣ.

ಟಿ20 ವಿಶ್ವಕಪ್ ಟೂರ್ನಿಗೆ ಭಾರತ ತಂಡ ಆಯ್ಕೆ ಮಾಡಿದ ಇರ್ಫಾನ್ ಪಠಾಣ್..! ಯಾರಿಗೆಲ್ಲಾ ಸಿಕ್ಕಿದೆ ಸ್ಥಾನ?

1. ಮೊದಲ ಪಂದ್ಯದಲ್ಲಿ ಟಿಮ್ ಡೇವಿಡ್‌ಗೆ ಬಡ್ತಿ, ಪಾಂಡ್ಯಗೆ ಹಿಂಬಡ್ತಿ..!

ಗುಜರಾತ್ ಟೈಟನ್ಸ್ ವಿರುದ್ಧದ ಮೊದಲ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ ಗೆಲುವಿಗೆ 169 ರನ್ ಟಾರ್ಗೆಟ್ ಸಿಕ್ಕಿತ್ತು. 129 ರನ್‌ಗೆ 4 ವಿಕೆಟ್ ಪತನವಾಗಿದ್ದವು. 4 ಓವರ್‌ನಲ್ಲಿ ಮುಂಬೈ 39 ರನ್ ಹೊಡೆಯಬೇಕಿತ್ತು. ರಶೀದ್ ಖಾನ್ ಬೌಲಿಂಗ್ ಮಾಡುತ್ತಿದ್ದರು. ಈ ಸಮಯದಲ್ಲಿ ಪಾಂಡ್ಯ, ಬ್ಯಾಟಿಂಗ್‌ಗೆ ಬಂದು ಸ್ಪಿನ್ನರ್ ಮೇಲೆ ಅಟ್ಯಾಕ್ ಮಾಡುವ ಬದಲು ಟಿಮ್ ಡೇವಿಡ್ ಕಳುಹಿಸಿದ್ರು. ಅವರು 10 ಬಾಲ್ನಲ್ಲಿ 11 ರನ್ ಗಳಿಸಿ ಔಟಾದ್ರು. ಕೊನೆ ಓವರ್‌ನಲ್ಲಿ ಮುಂಬೈಗೆ 19 ರನ್ ಅಗತ್ಯವಿತ್ತು. ಪಾಂಡ್ಯ ಒಂದು ಬೌಂಡ್ರಿ, ಒಂದು ಸಿಕ್ಸರ್ ಸಿಡಿಸಿ ಔಟಾಗಿ ಹೋದ್ರು. ಕೊನೆಗೆ ಮುಂಬೈ ಇಂಡಿಯನ್ಸ್ 6 ರನ್‌ಗಳಿಂದ ಸೋಲು ಅನುಭವಿಸ್ತು.

2. ಹೈದ್ರಾಬಾದ್ ವಿರುದ್ಧ ಬುಮ್ರಾಗೆ ಸರಿಯಾಗಿ ಬೌಲಿಂಗ್ ಕೊಡಲಿಲ್ಲ..!

ಸನ್ ರೈಸರ್ಸ್ ಹೈದ್ರಾಬಾದ್ ತಂಡ ಮುಂಬೈ ಇಂಡಿಯನ್ಸ್ ವಿರುದ್ಧ 277 ರನ್ ಹೊಡೆದು ದಾಖಲೆ ನಿರ್ಮಿಸಿತ್ತು. ಆ ಮ್ಯಾಚ್ನಲ್ಲಿ ಮೊದಲ ಓವರ್‌ನಲ್ಲಿ 5 ರನ್ ನೀಡಿದ್ದ ಜಸ್ಪ್ರೀತ್ ಬುಮ್ರಾಗೆ ಮತ್ತೆ ಬೌಲಿಂಗ್ ಕೊಟ್ಟಿದ್ದು 13ನೇ ಓವರ್‌ನಲ್ಲಿ. ಅಭಿಷೇಕ್ ಶರ್ಮಾ ಮತ್ತು ಟ್ರಾವಿಸ್ ಹೆಡ್ 7 ಓವರ್‌ನಲ್ಲಿ ನೂರು ರನ್ ಹೊಡೆದ್ರೂ ಬುಮ್ರಾಗೆ ಬಾಲ್ ಕೊಡಲೇ ಇಲ್ಲ. ಕೊನೆಗೆ ಬುಮ್ರಾ ಬಿಟ್ಟು ಎಲ್ಲಾ ಬೌಲರ್ಗಳು 10ಕ್ಕೂ ಅಧಿಕ ಎಕಾನಮಿಯಲ್ಲಿ ರನ್ ನೀಡಿದ್ರು. ಮುಂಬೈ ಹೀನಾಯಾಗಿ ಸೋಲು ಅನುಭವಿಸ್ತು.

T20 World Cup 2024: ಟೀಂ ಇಂಡಿಯಾದಲ್ಲಿ ಒಂದು ಸ್ಥಾನಕ್ಕಾಗಿ 6 ವಿಕೆಟ್ ಕೀಪರ್ ನಡುವೆ ಫೈಟ್..!

3. 278 ರನ್ ಟಾರ್ಗೆಟ್,  ಪಾಂಡ್ಯ ಸ್ಟ್ರೈಕ್ರೇಟ್ 120..!

ಸನ್ ರೈಸರ್ಸ್ ವಿರುದ್ಧ 278 ರನ್ ಟಾರ್ಗೆಟ್ ಬೆನ್ನಟ್ಟಿದ ಮುಂಬೈ ಇಂಡಿಯನ್ಸ್, 10 ಓವರ್ನಲ್ಲೇ 150 ರನ್ ಹೊಡೆದಿತ್ತು. ಮುಂಬೈ ಚೇಸ್ ಮಾಡಿ ಗೆಲ್ಲುತ್ತೆ ಅಂತ ಎಲ್ಲಾ ಭಾವಿಸಿದ್ದರು. ಆದ್ರೆ ನಾಯಕ ಹಾರ್ದಿಕ್ ಪಾಂಡ್ಯ 20 ಬಾಲ್ನಲ್ಲಿ 24 ರನ್ ಗಳಿಸಿ ಔಟಾದ್ರು. 120ರ ಸ್ಟ್ರೈಕ್ರೇಟ್ನಲ್ಲಿ ಬ್ಯಾಟಿಂಗ್ ಮಾಡಿ ತಂಡಕ್ಕೆ ಮಾರಕರಾದ್ರು. ಟಿಮ್ ಡೇವಿಡ್ 22 ಬಾಲ್ನಲ್ಲಿ 42 ರನ್, ಶೇಫರ್ಡ್ 6 ಬಾಲ್ನಲ್ಲಿ 15 ರನ್ ಹೊಡೆದ್ರೂ ಮುಂಬೈ 31 ರನ್ನಿಂದ ಸೋಲ್ತು. ಇದಕ್ಕೆ ಪಾಂಡ್ಯನ ನಿಧಾನಗತಿಯ ಬ್ಯಾಟಿಂಗ್ ಕಾರಣವಾಯ್ತು.

4. ರಾಜಸ್ಥಾನ ವಿರುದ್ಧ ಮಧ್ವಾಲ್ ಡ್ರಾಪ್!

ಅಕಾಶ್ ಮಧ್ವಾಲ್ ಕಳೆದ ಸೀಸನ್ನಲ್ಲಿ 8 ಪಂದ್ಯದಿಂದ 14 ವಿಕೆಟ್ ಪಡೆದಿದ್ದರು. ಲಕ್ನೋ ವಿರುದ್ಧ 5 ರನ್ ನೀಡಿ 5 ವಿಕೆಟ್ ಉರುಳಿಸಿದ್ದರು. ಆದ್ರೆ ಮೊದಲ ಎರಡು ಪಂದ್ಯದಲ್ಲಿ ಆಕಾಶ್ನನ್ನ ಆಡಿಸಲೇ ಇಲ್ಲ. 3ನೇ ಪಂದ್ಯದಲ್ಲಿ ರಾಜಸ್ಥಾನ ರಾಯಲ್ಸ್ ವಿರುದ್ಧ 3 ವಿಕೆಟ್ ಪಡೆದ್ರೂ ಇದೇ ರಾಯಲ್ಸ್ ವಿರುದ್ಧ 2ನೇ ಮುಖಾಮುಖಿಯಲ್ಲಿ ಡ್ರಾಪ್ ಮಾಡಲಾಯ್ತು. ಹಾಗಾಗಿ ಮುಂಬೈ ಮತ್ತೊಂದು ಸೋಲು ಅನುಭವಿಸಬೇಕಾಯ್ತು.

5. ನೆಹಾಲ್ ವದೇರಾಗೆ ಮೊದಲ 7 ಪಂದ್ಯದಲ್ಲಿ ಚಾನ್ಸ್ ಕೊಡಲಿಲ್ಲ

ನೆಹಾಲ್ ವದೇರಾ, ಕಳೆದ ವರ್ಷ 145ರ ಸ್ಟ್ರೈಕ್ರೇಟ್ನಲ್ಲಿ 241 ರನ್ ಹೊಡೆದಿದ್ದರು. ಆದ್ರೂ ಅವರನ್ನ ಮೊದಲ 7 ಪಂದ್ಯದಲ್ಲಿ ಆಡಿಸಲೇ ಇಲ್ಲ. ಆದ್ರೆ 8ನೇ ಪಂದ್ಯದಲ್ಲಿ ರಾಜಸ್ಥಾನ ವಿರುದ್ಧ ಆಡಿಸಲಾಯ್ತು. 24 ಬಾಲ್ನಲ್ಲಿ 49 ರನ್ ಹೊಡೆದ ನೆಹಾಲ್, ಮುಂಬೈಗೆ ಆಸರೆಯಾದ್ರು. ಮೊದಲ 7 ಪಂದ್ಯದಲ್ಲಿ ಆಡಿಸಿದ್ರೆ ಅಟ್ಲಿಸ್ಟ್ ಒಂದೆರಡು ಪಂದ್ಯ ಗೆಲ್ಲಬಹುದಾಗಿತ್ತು.

ಸ್ಪೋರ್ಟ್ಸ್ ಬ್ಯೂರೋ, ಏಷ್ಯಾನೆಟ್ ಸುವರ್ಣ ನ್ಯೂಸ್

Latest Videos
Follow Us:
Download App:
  • android
  • ios