ಟೀಂ ಇಂಡಿಯಾದಲ್ಲಿ ಪ್ರಭುತ್ವ ಸಾಧಿಸಿರುವ ನಾಯಕ ವಿರಾಟ್ ಕೊಹ್ಲಿ ಇದೀಗ ಕೋಚ್ ರವಿ ಶಾಸ್ತ್ರಿ ಹಾಗೂ ಸಂಜಯ್ ಬಂಗಾರ್ ಕೆಲಸವನ್ನು ಕೊಹ್ಲಿ ಮಾಡಿದ್ದಾರೆ. ಲಾರ್ಡ್ಸ್ ಟೆಸ್ಟ್ ಪಂದ್ಯಕ್ಕೂ ಮುನ್ನ ನಡೆದ ಅಭ್ಯಾಸದಲ್ಲಿ ಟೀಂ ಇಂಡಿಯಾಗೆ ಕೊಹ್ಲಿ ಕೋಚ್ ಆಗಿದ್ದರು. 

ಲಾರ್ಡ್ಸ್(ಆ.09): ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಲಾರ್ಡ್ಸ್ ಟೆಸ್ಟ್ ಪಂದ್ಯಕ್ಕೂ ಮುನ್ನ ಕೋಚ್ ಜವಾಬ್ದಾರಿಯನ್ನು ನಿರ್ವಹಿಸಿದ್ದಾರೆ. ಟೀಂ ಇಂಡಿಯಾ ಅಭ್ಯಾಸದ ವೇಳೆ ಕೊಹ್ಲಿ, ತಂಡದ ಸಹ ಆಟಗಾರರಿಗೆ ಮಾರ್ಗದರ್ಶನ ನೀಡಿದರು.

ಪ್ರಮುಖವಾಗಿ ಬೌಲರ್‌ಗಳಿಗೆ ವಿರಾಟ್ ಯಾವ ಲೈನ್ ಅಂಡ್ ಲೆಂಗ್ತ್‌ನಲ್ಲಿ ಬೌಲ್ ಮಾಡಬೇಕು, ಪಿಚ್ ಸಮರ್ಪಕವಾಗಿ ಬಳಸಿಕೊಳ್ಳುವುದು ಹೇಗೆ ಎಂದು ಸಲಹೆ ನೀಡುತ್ತಿದ್ದಿದ್ದು ಕಂಡುಬಂತು. ಸಂಪೂರ್ಣ ಅಭ್ಯಾಸದಲ್ಲಿ ಕೊಹ್ಲಿ ತಾವು ಬ್ಯಾಟಿಂಗ್ ಪ್ರಾಕ್ಟೀಸ್ ಜೊತೆಗೆ, ಕೋಚಿಂಗ್ ಕೂಡ ನೀಡಿದರು. 

Scroll to load tweet…

ಸ್ಪಿನ್ನರ್‌ಗಳು ಸಹ ಕೊಹ್ಲಿಯ ಸಲಹೆಯಂತೆಯೇ ಬೌಲ್ ಮಾಡಿದರು. ಕೋಚ್‌ಗಳಾದ ರವಿಶಾಸ್ತ್ರಿ, ಭರತ್ ಅರುಣ್, ಸಂಜಯ್ ಬಾಂಗರ್ ಪ್ರೇಕ್ಷಕರಾಗಿದ್ದರು. ಇದೇ ವೇಳೆ ಬ್ಯಾಟ್ಸ್‌ಮನ್‌ಗಳು ಸಹ ಕೊಹ್ಲಿಯ ಬ್ಯಾಟಿಂಗ್ ಶೈಲಿಯನ್ನೇ ಅನುಸರಿಸಲು ಆರಂಭಿಸಿದ್ದಾರೆ. ಇಂಗ್ಲೆಂಡ್ ಸ್ವಿಂಗ್ ದಾಳಿಯನ್ನು ಸಮರ್ಥವಾಗಿ ಎದುರಿ ಸಲು ಕೊಹ್ಲಿಯಂತೆ ಕ್ರೀಸ್‌ನಿಂದ ಸಾಧ್ಯವಾ ದಷ್ಟು ಹೊರಗೆ ನಿಂತು ಆಡುವುದನ್ನು ನೆಟ್ಸ್‌ನಲ್ಲಿ ಅಭ್ಯಾಸ ಮಾಡಿದರು.