ಭಾರತ ಹಾಗೂ ಇಂಗ್ಲೆಂಡ್ ನಡುವಿನ 2 ನೇ ಏಕದಿನ ಪಂದ್ಯದ ನಡುವೆ ಸ್ಮರಣೀಯ ಘಟನೆ ನಡೆದಿದೆ. ಗೆಳೆತಿಯೊಂದಿಗೆ ಪಂದ್ಯ ವೀಕ್ಷಿಸಲು ಆಗಮಿಸಿದ ಹುಡುಗ ನೇರವಾಗಿ ಮದುವೆ ಪ್ರಪೋಸಲ್ ಮುಂದಿಟ್ಟಿದ್ದಾನೆ. ಹುಡುಗನ ಮನವಿಗೆ ಹುಡುಗಿಯ ಉತರವೇನಿತ್ತು? ಇಲ್ಲಿದೆ.
ಲಂಡನ್(ಜು.14): ಮದುವೆ ಸ್ವರ್ಗದಲ್ಲಿ ನಿಶ್ಚಯವಾಗುತ್ತೆ ಅನ್ನೋ ಮಾತಿದೆ. ಆದರೆ ಸದ್ಯ ಈ ಮಾತು ಸ್ವಲ್ಪ ಬದಲಾಗಿದೆ. ಭಾರತ ಹಾಗೂ ಇಂಗ್ಲೆಂಡ್ ನಡುವಿನ 2ನೇ ಏಕದಿನ ಪಂದ್ಯದಲ್ಲಿ ಮದುವೆ ನಿಶ್ಚಯವಾದ ಘಟನೆ ನಡೆದಿದೆ.
ಕ್ರಿಕೆಟ್ ಕಾಶಿ ಎಂದೇ ಗುರುತಿಸಿಕೊಂಡಿರುವ ಇಂಗ್ಲೆಂಡ್‌ನ ಲಾರ್ಡ್ಸ್ ಮೈದಾನದಲ್ಲಿ ಮದುವೆ ಪ್ರಪೋಸಲ್ ಮಾಡೋ ಮೂಲಕ ಯುವ ಜೋಡಿಗಳು ತಮ್ಮ ವಿಶೇಷ ಘಳಿಗೆಯನ್ನ ಸ್ಮರಣೀಯವಾಗಿಸಿದ್ದಾರೆ.
ಇಂಗ್ಲೆಂಡ್ ತಂಡದ ಬ್ಯಾಟಿಂಗ್ ವೇಳೆ ಗ್ಯಾಲರಿಯಲ್ಲಿದ್ದ ಹುಡುಗ ತನ್ನ ಗೆಳತಿಗೆ ರಿಂಗ್ ಹಿಡಿದು ಮದುವೆ ಮನವಿ ಮಾಡಿದರು. ಅದೃಷ್ಟವಶಾತ್ ಹುಡುಗಿ ಆತನ ಪ್ರಪೋಸಲ್ ಒಪ್ಪಿಕೊಂಡಿದ್ದಾಳೆ. ಈ ಮೂಲಕ ಲಾರ್ಡ್ಸ್ ಮೈದಾನದಲ್ಲಿ ನಡೆದ ಮದುವೆ ಪ್ರಸ್ತಾಪ ಯಶಸ್ವಿಯಾಗಿದೆ.
ಇವರಿಬ್ಬರ ಮದುವೆ ಪ್ರಪೋಸಲ್ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಮದುವೆ ಪ್ರಪೋಸಲ್‌ಗೆ ಇದಕ್ಕಿಂತ ಉತ್ತಮ ಜಾಗ ಮತ್ತೊಂದಿಲ್ಲ ಎಂದು ಹಲವು ಟ್ವೀಟ್ ಮಾಡಿದ್ದಾರೆ.
