ಭಾರತ-ಇಂಗ್ಲೆಂಡ್ ಏಕದಿನ: ಆಂಗ್ಲರ 2ನೇ ವಿಕೆಟ್ ಪತನ

First Published 17, Jul 2018, 10:08 PM IST
India vs England England lose openers after good start
Highlights

ಭಾರತ ಹಾಗೂ ಇಂಗ್ಲೆಂಡ್ ನಡುವಿನ ಅಂತಿಮ ಏಕದಿನ ಪಂದ್ಯ ಇದೀಗ ರೋಚಕ ಘಟ್ಟ ತಲುಪಿದೆ. ಭಾರತ ನೀಡಿರುವ 257 ರನ್ ಟಾರ್ಗೆಟ್ ಚೇಸ್ ಮಾಡುತ್ತಿರುವ ಇಂಗ್ಲೆಂಡ್ ಬ್ಯಾಟಿಂಗ್ ಹೇಗಿದೆ? ಇಲ್ಲಿದೆ ಅಪ್‌ಡೇಟ್ಸ್.

ಲೀಡ್ಸ್(ಜು.17): ಅಂತಿಮ ಏಕದಿನ ಪಂದ್ಯದಲ್ಲಿ ಆಂಗ್ಲರ ಸ್ಫೋಟಕ ಆರಂಭದ ನಡುವೆಯೂ 2 ವಿಕೆಟ್ ಕಬಳಿಸುವಲ್ಲಿ ಟೀಂ ಇಂಡಿಯಾ ಯಶಸ್ವಿಯಾಗಿದೆ. ಭಾರತ ನೀಡಿದ 257 ರನ್ ಟಾರ್ಗೆಟ್ ಬೆನ್ನಟ್ಟುತ್ತಿರು ಇಂಗ್ಲೆಂಡ್ 10 ಓವರ್ ಮುಕ್ತಾಯಕ್ಕೆ 78 ರನ್ ಸಿಡಿಸಿದೆ.

ಆರಂಭಿಕ ಜಾನಿ ಬೈರಿಸ್ಟೋ 30 ರನ್ ಸಿಡಿಸಿ ಶಾರ್ದೂಲ್ ಠಾಕೂರ್‌ಗೆ ವಿಕೆಟ್ ಒಪ್ಪಿಸಿದರು. ಇನ್ನು ಜೇಮ್ಸ್ 27 ರನ್ ಸಿಡಿಸಿ ಔಟಾದರು. ಸದ್ಯ ಜೋ ರೂಟ್ ಹಾಗೂ ನಾಯಕ ಇಯಾನ್ ಮಾರ್ಗನ್ ಇಂಗ್ಲೆಂಡ್ ತಂಡಕ್ಕೆ ಆಸರೆಯಾಗಿದ್ದಾರೆ.

ಮೊದಲು ಬ್ಯಾಟಿಂಗ್ ಮಾಡಿದ ಟೀಂ ಇಂಡಿಯಾ ನಿಗಧಿತ 50 ಓವರ್‌ಗಳಲ್ಲಿ 8 ವಿಕೆಟ್ ನಷ್ಟಕ್ಕೆ 256 ರನ್ ಸಿಡಿಸಿತ್ತು. ನಾಯಕ ವಿರಾಟ್ ಕೊಹ್ಲಿ 71 ರನ್ ಸಿಡಿಸಿದರೆ, ಶಿಖರ್ ಧವನಿ 44 ಹಾಗೂ ಎಂ ಎಸ್ ಧೋನಿ 42 ರನ್ ಕಾಣಿಕೆ ನೀಡಿದರು.

loader