ಆಸ್ಟ್ರೇಲಿಯಾ ವಿರುದ್ಧದ ಬಾಕ್ಸಿಂಗ್ ಡೇ ಟೆಸ್ಟ್ ಪಂದ್ಯದಲ್ಲಿ ಟೀಂ ಇಂಡಿಯಾ ಗೆಲುವಿನ ನಗೆ ಬೀರಿದೆ. ಗೆಲುವಿನ ಬಳಿಕ ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಭಾರತೀಯ ಅಭಿಮಾನಿಗೆ ಭರ್ಜರಿ ಉಡುಗೊರೆ ನೀಡಿದ್ದಾರೆ.
ಮೆಲ್ಬರ್ನ್(ಡಿ.30): ಆಸ್ಟ್ರೇಲಿಯಾ ವಿರುದ್ದದ 3ನೇ ಟೆಸ್ಟ್ ಪಂದ್ಯದಲ್ಲಿ ಟೀಂ ಇಂಡಿಯಾ 137 ರನ್ ಗೆಲುವು ಸಾಧಿಸಿದೆ. ಈ ಮೂಲಕ ಸರಣಿಯಲ್ಲಿ 2-1 ಅಂತರದಿಂದ ಮುನ್ನಡೆ ಪಡೆದುಕೊಂಡಿದೆ. ಗೆಲುವಿನ ಬಳಿಕ ವಿರಾಟ್ ಕೊಹ್ಲಿ ಕ್ರೀಡಾಂಗಣದಲ್ಲಿದ್ದ ಭಾರತೀಯ ಅಭಿಮಾನಿಗೆ ಭರ್ಜರಿ ಗಿಫ್ಟ್ ನೀಡಿದ್ದಾರೆ.
ಇದನ್ನೂ ಓದಿ:ಬಾಕ್ಸಿಂಗ್ ಡೇ ಟೆಸ್ಟ್: ಆಸಿಸ್ ವಿರುದ್ಧ 137 ರನ್‌ಗಳ ಐತಿಹಾಸಿಕ ಗೆಲುವು ಸಾಧಿಸಿದ ಭಾರತ
ಮೆಲ್ಬರ್ನ್ ಟೆಸ್ಟ್ ಪಂದ್ಯ ಗೆಲುವಿನ ಬಳಿಕ ವಿರಾಟ್ ಕೊಹ್ಲಿ ತಮ್ಮ ಕ್ರಿಕೆಟ್ ಪ್ಯಾಡನ್ನ ಪುಟ್ಟ ಬಾಲಕನಿಗೆ ಉಡುಗೊರೆಯಾಗಿ ನೀಡಿದ್ದಾರೆ. ಗ್ಯಾಲರಿ ಬಳಿ ತೆರಳಿದ ಕೊಹ್ಲಿ, ಪ್ಯಾಡ್ ನೀಡಿದರು. ಬಳಿಕ ನೇರವಾಗಿ ಪೆವಿಲಿಯನ್ ಕಡೆ ಹೆಜ್ಜೆ ಹಾಕಿದರು. ದಿಢೀರ್ ವಿರಾಟ್ ಕೊಹ್ಲಿಯಿಂದ ಪ್ಯಾಡ್ ಪಡೆದ ಬಾಲಕ ಖುಷಿಯಿಂದ ತೇಲಾಡಿದ.
ಇದನ್ನೂ ಓದಿ: ನಿಷೇಧ ಅಂತ್ಯ: ಮೊದಲ ಪಂದ್ಯದಲ್ಲಿ ಬೆನ್’ಕ್ರಾಫ್ಟ್ ಫ್ಲಾಫ್ ಶೋ
ಹಲವು ಭಾರಿ ವಿರಾಟ್ ಕೊಹ್ಲಿ ಅಭಿಮಾನಿಗಳಿಗೆ ಸರ್ಪ್ರೈಸ್ ನೀಡಿದ್ದಾರೆ. ತಮ್ಮ ಜರ್ಸಿ, ಆಟೋಗ್ರಾಫ್, ಸೆಲ್ಫಿಗೆ ಅವಕಾಶ ನೀಡೋ ಮೂಲಕ ಅಭಿಮಾನಿಗಳನ್ನ ಖುಷಿಪಡಿಸಿದ್ದಾರೆ. ಇದೀಗ ತಮ್ಮ ಪ್ಯಾಡನ್ನೇ ಬಾಲಕನಿಗೆ ನೀಡಿ ಎಲ್ಲರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ.
