Asianet Suvarna News Asianet Suvarna News

ನಿಷೇಧ ಅಂತ್ಯ: ಮೊದಲ ಪಂದ್ಯದಲ್ಲಿ ಬೆನ್‌’ಕ್ರಾಫ್ಟ್‌ ಫ್ಲಾಫ್ ಶೋ

ಬಿಗ್‌ಬ್ಯಾಶ್‌ ಲೀಗ್‌ನಲ್ಲಿ ಪರ್ತ್ ಸ್ಕಾಚರ್ಸ್ ತಂಡದ ಪರ ಕಣಕ್ಕಿಳಿದಿದ್ದ ಬೆನ್’ಕ್ರಾಫ್ಟ್ ಕೇವಲ 2 ರನ್ ಗಳಿಸಿ ವಿಕೆಟ್ ಒಪ್ಪಿಸುವ ಮೂಲಕ ನಿರಾಸೆ ಅನುಭವಿಸಿದರು. 26 ವರ್ಷದ ಬೆನ್’ಕ್ರಾಫ್ಟ್ ತಂಡ 16/3 ವಿಕೆಟ್ ಕಳೆದುಕೊಂಡು ಸಂಕಷ್ಟದಲ್ಲಿದ್ದ ಸಂದರ್ಭದಲ್ಲಿ ಕಣಕ್ಕಿಳಿದಿದ್ದ ಅವರಿಂದ ನಿರೀಕ್ಷಿತ ಪ್ರದರ್ಶನ ಮೂಡಿಬರಲಿಲ್ಲ

Australian Cricketer Cameron Bancroft Out Third Ball On Return From Ball Tampering Ban
Author
Melbourne VIC, First Published Dec 30, 2018, 5:27 PM IST

ಮೆಲ್ಬರ್ನ್[ಡಿ.30]: ಬಾಲ್ ಟ್ಯಾಂಪರಿಂಗ್ ಪ್ರಕರಣದಲ್ಲಿ ಸಿಕ್ಕಿಬಿದ್ದು 9 ತಿಂಗಳು ನಿಷೇಧಕ್ಕೆ ಗುರಿಯಾಗಿದ್ದ ಆಸಿಸ್’ನ ಕ್ಯಾಮರೊನ್ ಬೆನ್’ಕ್ರಾಫ್ಟ್ ಇದೀಗ ನಿಷೇಧದ ಬಳಿಕ ಮೊದಲ ಪಂದ್ಯವನ್ನಾಡಿದ್ದು, ಕೇವಲ ಮೂರು ಎಸೆತಗಳನ್ನು ಎದುರಿಸಿ ವಿಕೆಟ್ ಒಪ್ಪಿಸಿದ್ದಾರೆ.

ಬಾಲ್ ಟ್ಯಾಂಪರಿಂಗ್ ಮಾಸ್ಟರ್ ಮೈಂಡ್ ವಾರ್ನರ್ ಅಂತೆ..!

ಬಿಗ್‌ಬ್ಯಾಶ್‌ ಲೀಗ್‌ನಲ್ಲಿ ಪರ್ತ್ ಸ್ಕಾಚರ್ಸ್ ತಂಡದ ಪರ ಕಣಕ್ಕಿಳಿದಿದ್ದ ಬೆನ್’ಕ್ರಾಫ್ಟ್ ಕೇವಲ 2 ರನ್ ಗಳಿಸಿ ವಿಕೆಟ್ ಒಪ್ಪಿಸುವ ಮೂಲಕ ನಿರಾಸೆ ಅನುಭವಿಸಿದರು. 26 ವರ್ಷದ ಬೆನ್’ಕ್ರಾಫ್ಟ್ ತಂಡ 16/3 ವಿಕೆಟ್ ಕಳೆದುಕೊಂಡು ಸಂಕಷ್ಟದಲ್ಲಿದ್ದ ಸಂದರ್ಭದಲ್ಲಿ ಕಣಕ್ಕಿಳಿದಿದ್ದ ಅವರಿಂದ ನಿರೀಕ್ಷಿತ ಪ್ರದರ್ಶನ ಮೂಡಿಬರಲಿಲ್ಲ. ಮೊದಲ ಎಸೆತದಲ್ಲೇ 2 ರನ್ ಕಲೆಹಾಕಿದರು. ಎರಡನೇ ಎಸೆತದಲ್ಲಿ ಯಾವುದೇ ರನ್ ಬರಲಿಲ್ಲ. ಇನ್ನು ಮೂರನೇ ಎಸೆತದಲ್ಲಿ ವಿಕೆಟ್’ಕೀಪರ್’ಗೆ ಕ್ಯಾಚಿತ್ತು ಪೆವಿಲಿಯನ್ ಸೇರಿದರು.

ಬಾಲ್ ಟ್ಯಾಂಪರ್ ಬಳಿಕ ಯೋಗ ಶಿಕ್ಷಕನಾಗಲು ಬಯಸಿದ್ದೆ-ಬ್ಯಾನ್‌ಕ್ರಾಫ್ಟ್ !

Cameron Bancroft's Perth Scorchers return lasted just three balls 👀 #BBL08pic.twitter.com/5cgSAPqxb8

ಇತ್ತೀಚೆಗಷ್ಟೇ ಬಾಲ್ ಟ್ಯಾಂಪರಿಂಗ್ ಕುರಿತಂತೆ ತುಟಿಬಿಚ್ಚಿದ್ದ ಬೆನ್’ಕ್ರಾಫ್ಟ್, ಈ ವಿವಾದಕ್ಕೆ ಉಪನಾಯಕ ಡೇವಿಡ್ ವಾರ್ನರ್ ಮಾಸ್ಟರ್’ಮೈಂಡ್ ಎಂದು ಹೇಳಿದ್ದರು. ಇದಷ್ಟೇ ಅಲ್ಲದೇ ಯೋಗಶಿಕ್ಷಕರಾಗುವತ್ತ ಮನಸು ಮಾಡಿರುವುದಾಗಿಯೂ ತಿಳಿಸಿದ್ದಾರೆ. 
 

Follow Us:
Download App:
  • android
  • ios