ಸಿಡ್ನಿ(ಜ.08): ಆಸ್ಟ್ರೇಲಿಯಾ ವಿರುದ್ದದ ಟೆಸ್ಟ್ ಸರಣಿ ಗೆಲುವಿನ ಸಂಭ್ರಮ ಇನ್ನೂ ಮುಗಿದಿಲ್ಲ. ಒಂದೆಡೆ ಟೀಂ ಇಂಡಿಯಾ ಕ್ರಿಕೆಟಿಗರು ಸೆಲೆಬ್ರೇಷನ್ ಮೂಡ್‌ನಲ್ಲಿದ್ದರೆ, ಇತ್ತ ಅಭಿಮಾನಿಗಳು ಕೂಡ ಐತಿಹಾಸಿಕ ಗೆಲುವನ್ನ ಆಚರಿಸುತ್ತಿದ್ದಾರೆ. ಇದೇ ವೇಳೆ ಸರಣಿಗೂ ಮುನ್ನ ಭವಿಷ್ಯ ನುಡಿದ್ದ ಆಸ್ಟ್ರೇಲಿಯಾ ಮಾಜಿ ನಾಯಕ ರಿಕಿ ಪಾಂಟಿಂಗ್ ಫುಲ್ ಟ್ರೋಲ್ ಆಗಿದ್ದಾರೆ.

ಇದನ್ನೂ ಓದಿ: ಜನವರಿ 8 ಮತ್ತು 9 ಭಾರತ್‌ ಬಂದ್‌: ಏನಿರುತ್ತೆ, ಏನಿರಲ್ಲ? ಇಲ್ಲಿದೆ ಸಂಪೂರ್ಣ ಮಾಹಿತಿ

ಟೆಸ್ಟ್ ಸರಣಿಗೂ ಮುನ್ನ ರಿಕಿ ಪಾಂಟಿಂಗ್ ಫಲಿತಾಂಶದ ಭವಿಷ್ಯ ನುಡಿದಿದ್ದರು. ಆದರೆ ರಿಕಿ ಭವಿಷ್ಯ ಉಲ್ಟಾ ಆಗಿದೆ. ಇಷ್ಟೇ ಅಲ್ಲ ರಿಕಿ ಪಾಂಟಿಂಗ್ ಹೇಳಿದ ಪ್ರತಿಯೊಂದು ಭವಿಷ್ಯವೂ ಉಲ್ಟಾ ಹೊಡೆದಿದೆ. ಪಾಂಟಿಂಗ್ 2-1 ಅಂತರದಲ್ಲಿ ಆಸ್ಟ್ರೇಲಿಯಾ ಸರಣಿ ಗೆಲ್ಲುತ್ತೆ ಎಂದಿದ್ದರು. ಆದರೆ ಭಾರತ 2-1 ಅಂತರದಲ್ಲಿ ಸರಣಿ ಗೆದ್ದುಕೊಂಡಿತು. 

ಇದನ್ನೂ ಓದಿ: 2019ರಲ್ಲಿ ಕೊಹ್ಲಿ ಪುಡಿ ಮಾಡಲಿದ್ದಾರೆ ತೆಂಡುಲ್ಕರ್ 5 ದಾಖಲೆಗಳು!

ಸರಣಿಯಲ್ಲಿ ಆಸಿಸ್ ಬ್ಯಾಟ್ಸ್‌ಮನ್ ಉಸ್ಮಾನ್ ಖವಾಜ ರನ್ ಮಳೆ ಸುರಿಸಲಿದ್ದಾರೆ. ಕೊಹ್ಲಿಯನ್ನ ಹಿಂದಿಕ್ಕಲಿದ್ದಾರೆ ಎಂದು ಪಾಂಟಿಂಗ್ ಹೇಳಿದ್ದರು. ಆದರೆ ಖವಾಜ 198 ರನ್ ಸಿಡಿಸಿದ್ದರೆ, ಕೊಹ್ಲಿ 282 ರನ್ ಸಿಡಿಸಿದ್ದಾರೆ. ಇಷ್ಟೇ ಅಲ್ಲ ಮೆಲ್ಬರ್ನ್ ಟೆಸ್ಟ್ ಪಂದ್ಯದಲ್ಲಿ ಚೇತೇಶ್ವರ್ ಪೂಜಾರ ನಿಧಾನಗತಿಯ ಆಟವೇ ಭಾರತಕ್ಕೆ ಮುಳುವಾಗಲಿದೆ ಎಂದಿದ್ದರು. ಆದರೆ ಆಸ್ಟ್ರೇಲಿಯಾ ಇಡೀ ತಂಡ ಪೂಜಾರ ಬ್ಯಾಟಿಂಗ್ ಮಾಡಿದಷ್ಟು ಸಮಯ ಬ್ಯಾಟಿಂಗ್ ಮಾಡಲೇ ಇಲ್ಲ, ಅದಕ್ಕೂ ಮೊದಲೇ ಆಲೌಟ್ ಆಗಿತ್ತು.