ಮೆಲ್ಬರ್ನ್(ಡಿ.28): ಆಸ್ಟ್ರೇಲಿಯಾ ವಿರುದ್ಧದ 3ನೇ ಟೆಸ್ಟ್ ಪಂದ್ಯದ ಮೊದಲ ಇನ್ನಿಂಗ್ಸ್‌ನಲ್ಲಿ ಭರ್ಜರಿ ಮೇಲುಗೈ ಸಾಧಿಸಿದ ಟೀಂ ಇಂಡಿಯಾ ನಿರ್ಧಾರದಲ್ಲಿ ತಪ್ಪು ಮಾಡಿತಾ ಅನ್ನೋ ಪ್ರಶ್ನೆ ಎದ್ದಿದೆ. ಆಸಿಸ್ ತಂಡವನ್ನ 151 ರನ್‌ಗಳಿಗೆ ಆಲೌಟ್ ಮಾಡಿದ 292 ರನ್ ಮುನ್ನಡೆ ಪಡೆದ ಟೀಂ ಇಂಡಿಯಾ ಫಾಲೋ-ಆನ್ ಹೇರದ ದ್ವಿತೀಯ ಇನ್ನಿಂಗ್ಸ್ ಆರಂಭಿಸಿತು. ಇಷ್ಟೇ ಅಲ್ಲ 54 ರನ್‌ಗಳಿಗೆ 5 ವಿಕೆಟ್ ಕೂಡ ಕಳೆದುಕೊಂಡಿದೆ.

ಇದನ್ನೂ ಓದಿ: ಬುಮ್ರಾ ದಾಖಲೆ ಪ್ರದರ್ಶನಕ್ಕೆ-ಸೆಹ್ವಾಗ್ ಸೇರಿದಂತೆ ದಿಗ್ಗಜರ ಟ್ವೀಟ್ ಅದ್ಬುತ!

4 ಮತ್ತು 5 ದಿನೇ ಮೆಲ್ಬರ್ನ್‌ನಲ್ಲಿ ಮಳೆಯಾಗೋ ಸಾಧ್ಯತೆ ಇದೆ. ಹೀಗಿರುವಾಗಿ ವಿರಾಟ್ ಕೊಹ್ಲಿ ಪಾಲೋ-ಆನ್ ಹೇರದ ಮತ್ತೆ ಬ್ಯಾಟಿಂಗ್ ಮಾಡೋ ನಿರ್ಧಾರ ಎಷ್ಟು ಸರಿ ಅನ್ನೋ ಚರ್ಚೆ ಶುರುವಾಗಿದೆ.  ಆಸ್ಟ್ರೇಲಿಯಾ ದಿಗ್ಗಜ ಕ್ರಿಕೆಟಿಗ ಅಲನ್ ಬಾರ್ಡರ್ ಕೊಹ್ಲಿ ನಿರ್ಧಾರಕ್ಕೆ ಅಚ್ಚರಿ ವ್ಯಕ್ತಪಡಿಸಿದ್ದಾರೆ. 

ಇದನ್ನೂ ಓದಿ: 2008ರ ಐಪಿಎಲ್‌ನಲ್ಲಿ ಗರಿಷ್ಠ ಸಿಕ್ಸರ್ ಸಿಡಿಸಿದ 5 ಕ್ರಿಕೆಟಿಗರು ಯಾರು?

ಭಾರತ 292 ರನ್ ಮುನ್ನಡೆಯಲ್ಲಿತ್ತು. ಜೊತೆಗೆ ಆಸಿಸ್ ತಂಡ  ಟೀಂ ಇಂಡಿಯಾ ದಾಳಿಗೆ ಸಂಪೂರ್ಣ ತತ್ತರಿಸಿತ್ತು. ಈ ವೇಳೆ ಫಾಲೋ-ಆನ್ ಸೂಕ್ತ ನಿರ್ಧಾರವಾಗಿತ್ತು. ಆದರೆ ಕೊಹ್ಲಿ ದ್ವಿತೀಯ ಇನ್ನಿಂಗ್ಸ್ ಆರಂಭಿಸೋ ನಿರ್ಧಾರ ಮಾಡಿದರು. ಆದರೆ ಆಸ್ಟ್ರೇಲಿಯಾ 5 ವಿಕೆಟ್ ಕಬಳಿಸೋ ಮೂಲಕ ಮೆಲ್ಬರ್ನ್ ಟೆಸ್ಟ್ ಪಂದ್ಯವನ್ನ ಉಳಿಸೋ ಪ್ರಯತ್ನದಲ್ಲಿದ್ದಾರೆ ಎಂದು ಅಲನ್ ಬಾರ್ಡರ್ ಹೇಳಿದ್ದಾರೆ.