ಬಾಕ್ಸಿಂಗ್ ಡೇ ಟೆಸ್ಟ್ ಪಂದ್ಯದಲ್ಲಿ ಟೀಂ ಇಂಡಿಯಾ ಮುನ್ನಡೆಗೆ ಪ್ರಮುಖ ಕಾರಣ ವೇಗಿ ಜಸ್ಪ್ರೀತ್ ಬುಮ್ರಾ. ಆಸ್ಟ್ರೇಲಿಯಾ ತಂಡದ 6 ವಿಕೆಟ್ ಕಬಳಿಸಿ ಅಲ್ಪಮೊತ್ತಕ್ಕೆ ಆಲೌಟ್ ಮಾಡಿದ ಬುಮ್ರಾ ಸಾಧನೆಗೆ ಕ್ರಿಕೆಟ್ ದಿಗ್ಗಜರು ಪ್ರತಿಕ್ರಿಯೆ ಇಲ್ಲಿದೆ.
ಮೆಲ್ಬರ್ನ್(ಡಿ.28): ಆಸ್ಟ್ರೇಲಿಯಾ ವಿರುದ್ಧ 3ನೇ ಟೆಸ್ಟ್ ಪಂದ್ಯದಲ್ಲಿ ಜಸ್ಪ್ರೀತ್ ಬುಮ್ರಾ ಮಾರಕ ದಾಳಿಗೆ ಆಸ್ಟ್ರೇಲಿಯಾ ತತ್ತರಿಸಿದೆ. ಮೊದಲ ಇನ್ನಿಂಗ್ಸ್‌ನಲ್ಲಿ ಮುನ್ನಡೆ ಲೆಕ್ಕಾಚಾರದಲ್ಲಿ ಆಸ್ಟ್ರೇಲಿಯಾಗೆ ಆಘಾತ ನೀಡಿದ ಬುಮ್ರಾ ಬರೋಬ್ಬರಿ 6 ವಿಕೆಟ್ ಕಬಳಿಸಿದರು. ಬುಮ್ರಾ ದಾಳಿಗೆ ನಲುಕಿದೆ ಆಸಿಸ್ ಕೇವಲ 151 ರನ್‌ಗೆ ಆಲೌಟ್ ಆಯಿತು.
ಇದನ್ನೂ ಓದಿ: ಮೆಲ್ಬರ್ನ್‌ನಲ್ಲಿ ಬುಮ್ರಾ ಮ್ಯಾಜಿಕ್- 346 ರನ್ ಮುನ್ನಡೆಯಲ್ಲಿ ಕೊಹ್ಲಿ ಬಾಯ್ಸ್!
33 ರನ್ ನೀಡಿ 6 ವಿಕೆಟ್ ಕಬಳಿಸೋ ಮೂಲಕ ಕರಿಯರ್ ಬೆಸ್ಟ್ ಪ್ರದರ್ಶನ ನೀಡಿದ ಬಮ್ರಾಗೆ ದಿಗ್ಗಜ ಕ್ರಿಕೆಟಿಗರು ಸೇರಿದಂತೆ ಅಭಿಮಾನಿಗಳು ಅಭಿನಂಧನೆ ಸಲ್ಲಿಸಿದ್ದಾರೆ. ಬುಮ್ರಾ 6 ವಿಕೆಟ್ ಸಾಧನೆಗೆ ಕ್ರಿಕೆಟಿಗರ ಪ್ರತಿಕ್ರಿಯೆ ಇಲ್ಲಿದೆ.
