Asianet Suvarna News Asianet Suvarna News

ಭಾರತ-ಆಸ್ಟ್ರೇಲಿಯಾ ಮೊದಲ ಟಿ20 ಪಂದ್ಯಕ್ಕೆ ಮಳೆ ಅಡ್ಡಿ!

ಭಾರತ ಹಾಗೂ ಆಸ್ಟ್ರೇಲಿಯಾ ನಡುವಿನ ಮೊದಲ ಟಿ20 ಪಂದ್ಯಕ್ಕೆ ವರುಣ ಅಡ್ಡಿಯಾಗಿದ್ದಾನೆ. ಆಸ್ಟ್ರೇಲಿಯಾ ಅಬ್ಬರ ಬ್ಯಾಟಿಂಗ್ ನಡೆಸುತ್ತಿದ್ದಂತೆ ಸುರಿದ ಮಳೆಯಿಂದಾಗಿ ಪಂದ್ಯ ತಾತ್ಕಾಲಿಕವಾಗಿ ಸ್ಥಗಿತಗೊಂಡಿದೆ.
 

India vs Australia t20 Cricket Rain stops play n Brisbane
Author
Bengaluru, First Published Nov 21, 2018, 3:03 PM IST

ಬ್ರಿಸ್ಬೇನ್(ನ.21): ಭಾರತ ಹಾಗೂ ಆಸ್ಟ್ರೇಲಿಯಾ ನಡುವಿನ ಮೊದಲ ಟಿ20 ಪಂದ್ಯಕ್ಕೆ ಮಳೆ ಅಡ್ಡಿಯಾಗಿದೆ. ಹೀಗಾಗಿ ಪಂದ್ಯವನ್ನ ತಾತ್ಕಾಲಿಕ ಸ್ಥಗಿತ ಮಾಡಲಾಗಿದೆ. ಟಾಸ್ ಸೋತು ಬ್ಯಾಟಿಂಗ್ ಇಳಿದ ಆಸ್ಟ್ರೇಲಿಯಾ 16.1 ಓವರ್‌ಗೆ 3 ವಿಕೆಟ್ ಕಳೆದುಕೊಂಡು 153 ರನ್ ಸಿಡಿಸಿತ್ತು. ಈ ವೇಳೆ ಸುರಿದ ಮಳೆಯಿಂದಾಗಿ ಪಂದ್ಯ ಸ್ಥಗಿತಗೊಂಡಿದೆ.

 

 

ಆರಂಭಿಕ ಹಂತದಲ್ಲಿ ಟೀಂ ಇಂಡಿಯಾ ಮೇಲುಗೈ ಸಾಧಿಸಿತ್ತು. ಡಾರ್ಕಿ ಶಾರ್ಟ್ 7 ರನ್ ಸಿಡಿಸಿ ಔಟಾದರೆ, ನಾಯಕ ಆ್ಯರೋನ್ ಫಿಂಚ್ 27 ರನ್ ಸಿಡಿಸಿ ಔಟಾದರು. ಇನ್ನು ಕ್ರಿಸ್ ಲಿನ್ 37 ರನ್ ಸಿಡಿಸಿದರು.

3 ವಿಕೆಟ್ ಕಳೆದುಕೊಂಡ ಆಸ್ಟ್ರೇಲಿಯಾಗೆ ಗ್ಲೆನ್ ಮ್ಯಾಕ್ಸ್‌ವೆಲ್ ಹಾಗೂ ಮಾರ್ಕಸ್ ಸ್ಟೊಯಿನಿಸ್ ಆಸರೆಯಾದರು. ಸ್ಫೋಟಕ ಬ್ಯಾಟಿಂಗ್ ಪ್ರದರ್ಶನ ನೀಡಿದ ಈ ಜೋಡಿ ಆಸಿಸ್ ತಂಡವನ್ನ 150ರ ಗಡಿ ದಾಟಿಸಿದರು. ಮ್ಯಾಕ್ಸ್‌ವೆಲ್ ಅಜೇಯ 46, ಸ್ಟೊಯಿನಿಸ್ ಅಜೇಯ 31 ರನ್ ಸಿಡಿಸಿದ್ದಾರೆ. ಸದ್ಯ ಆಸಿಸ್ 16.1 ಓವರ್‌ಗೆ 153 ರನ್ ಸಿಡಿಸಿದೆ. ಮಳೆಯಿಂದ ಸ್ಥಗಿತಗೊಂಡಿರುವ ಪಂದ್ಯ ಶೀಘ್ರದಲ್ಲೇ ಆರಂಭಗೊಳ್ಳಲಿದೆ.

Follow Us:
Download App:
  • android
  • ios