ಸಂಜೆ 7 ಗಂಟೆಯಿಂದ ಪಂದ್ಯ ಶುರುವಾಗುತ್ತೆ ಅಂತ ಕಾದು ಕುಳಿತಿದ್ದ ಕೋಟ್ಯಂತರ ಕ್ರಿಕೆಟ್ ಪ್ರೇಮಿಗಳು ಪರದೆಯಲ್ಲಿ ಪಂದ್ಯ ರದ್ದಾಗಿದೆ ಎಂದು ಘೋಷಿಸುತ್ತಿದ್ದಂತೆ ಮಂಕಾಗಿ ಮನೆ ಕಡೆ ತೆರಳಿದರು
ಹೈದರಾಬಾದ್(ಅ.13): ಫೈನಲ್ ಪಂದ್ಯ ಎಂದು ಬಿಂಬಿತವಾಗಿದ್ದ ಭಾರತ ಹಾಗೂ ಆಸ್ಟ್ರೇಲಿಯಾ ತಂಡಗಳ 3ನೇ ಹಾಗೂ ಅಂತಿಮ ಟಿ20 ಪಂದ್ಯ ಮಳೆಯಿಂದಾಗಿ ರದ್ದಾಗಿದೆ. ಸರಣಿ 1-1 ರಿಂದ ಸಮಬಲಗೊಂಡು ಟ್ರೋಫಿಯನ್ನು ಇಬ್ಬರು ನಾಯಕರು ಹಂಚಿಕೊಂಡರು.
ಸಂಜೆ 7 ಗಂಟೆಯಿಂದ ಪಂದ್ಯ ಶುರುವಾಗುತ್ತೆ ಅಂತ ಕಾದು ಕುಳಿತಿದ್ದ ಕೋಟ್ಯಂತರ ಕ್ರಿಕೆಟ್ ಪ್ರೇಮಿಗಳು ಪರದೆಯಲ್ಲಿ ಪಂದ್ಯ ರದ್ದಾಗಿದೆ ಎಂದು ಘೋಷಿಸುತ್ತಿದ್ದಂತೆ ಮಂಕಾಗಿ ಮನೆ ಕಡೆ ತೆರಳಿದರು. ನಿಗದಿತ ಸಮಯದಲ್ಲಿ ಮಳೆ ಬಾರದಿದ್ದರೂ ಕೆಲವು ಗಂಟೆಗಳ ಹಿಂದೆ ಸುರಿದ ಮಳೆಯಿಂದಾಗಿ ಮೈದಾನ ಒದ್ದೆಯಾಗಿದ್ದು. ಅಂತಿಮವಾಗಿ ಪಂದ್ಯ ರದ್ದುಗೊಳಿಸಲಾಗಿದೆ ಎಂದು ಪ್ರಕಟಿಸಲಾಯಿತು. ಮೊದಲ ಟಿ20ಯನ್ನು ಭಾರತ ಗೆದ್ದಿದ್ದರೆ 2ನೇ ಪಂದ್ಯವನ್ನು ಆಸ್ಟ್ರೇಲಿಯಾ ಜಯಿಸಿತ್ತು.
