Asianet Suvarna News Asianet Suvarna News

ಮೊಹಾಲಿ ಸೋಲು- DRS ವಿರುದ್ಧ ಕಿಡಿ ಕಾರಿದ ವಿರಾಟ್ ಕೊಹ್ಲಿ!

ಭಾರತ- ಆಸ್ಟ್ರೇಲಿಯಾ ನಡುವಿನ ಮೊಹಾಲಿ ಪಂದ್ಯ ಹಲವು ವಿವಾದಕ್ಕೆ ಕಾರಣವಾಗಿದೆ. DRS ತೀರ್ಪುಗೆ ಟೀಕೆ ವ್ಯಕ್ತವಾಗುತ್ತಿದೆ. ಇದರ ಬೆನ್ನಲ್ಲೇ ನಾಯಕ ವಿರಾಟ್ ಕೊಹ್ಲಿ ಕೂಡ DRS ತೀರ್ಪು ವಿರುದ್ಧ ಕಿಡಿ ಕಾರಿದ್ದಾರೆ.

India vs Australia odi cricket Virat kohli slams DRS after mohali defeat
Author
Bengaluru, First Published Mar 11, 2019, 3:25 PM IST

ಮೊಹಾಲಿ(ಮಾ.11): ಮೊಹಾಲಿ ಏಕದಿನ ಪಂದ್ಯ ಟೀಂ ಇಂಡಿಯಾ ತೀವ್ರ ನಿರಾಸೆ ತಂದಿದೆ. ಶಿಖರ್ ಧವನ್ ಶತಕ, ರೋಹಿತ್ ಶರ್ಮಾ 95 ರನ್ ನೆರವಿನಿಂದ ಟೀಂ ಇಂಡಿಯಾ 358 ರನ್ ಸಿಡಿಸಿತ್ತು. ಆದರೆ ಈ ಬೃಹತ್ ಮೊತ್ತವನ್ನ ಚೇಸ್ ಮಾಡಿದ ಆಸ್ಟ್ರೇಲಿಯಾ ಸರಣಿ ಸಮಬಲ ಮಾಡಿಕೊಂಡಿದೆ. ಭಾರತದ ಸೋಲಿಗೆ ಕಳಪೆ ಫೀಲ್ಡಿಂಗ್ ಜೊತೆಗೆ DRS(Decision Review System) ಕೂಡ  ಕಾರಣವಾಗಿದೆ ಎಂದು ಕೊಹ್ಲಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಇದನ್ನೂ ಓದಿ: ರಿಷಭ್ ಪಂತ್ ಮಾಡಿದ ಎಡವಟ್ಟುಗಳು ಒಂದಾ.. ಎರಡಾ..?

44ನೇ ಓವರ್‌ನಲ್ಲಿ ಬ್ಯಾಟಿಂಗ್ ಮಾಡುತ್ತಿದ್ದ ಆಶ್ಟನ್ ಟರ್ನರ್ ಕ್ಲೀಯರ್ ಎಡ್ಜ್ ಆಗಿ ರಿಷಬ್ ಪಂತ್‌ಗೆ ಕ್ಯಾಚ್ ನೀಡಿದ್ದರು. ಆದರೆ ಅಂಪೈರ್ ನಾಟೌಟ್ ತೀರ್ಪು ನೀಡಿದ್ದರು. ಹೀಗಾಗಿ DRS ಮೊರೆ ಹೋದ ಭಾರತಕ್ಕೆ ಮತ್ತೆ ನಿರಾಸೆಯಾಗಿತ್ತು.  ಸ್ನಿಕೋಮೀಟರ್‌ನಲ್ಲಿ ಎಡ್ಜ್ ಆಗಿರುವುದು ಸ್ಪಷ್ಟವಾದರೂ ನಾಟೌಟ್ ತೀರ್ಪು ನೀಡಿದ್ದಾರೆ. ಈ ವೇಳೆ ಟರ್ನರ್ 41 ರನ್ ಸಿಡಿಸಿ ಕ್ರೀಸ್‌ನಲ್ಲಿದ್ದರು.

 

 

ಇದನ್ನೂ ಓದಿ: ಆರ್ಮಿ ಕ್ಯಾಪ್: ಪಾಕ್ ಕ್ಯಾತೆಗೆ ಐಸಿಸಿ ಛೀಮಾರಿ

ಬಳಿಕ ಟರ್ನರ್ ಅಜೇಯ 84ರನ್ ಸಿಡಿಸಿ ಆಸಿಸ್‌ಗೆ ಗೆಲುವು ತಂದುಕೊಟ್ಟಿದ್ದರು. ಈ ತೀರ್ಪು ಪಂದ್ಯದ ಸೋಲಿಗೆ ಕಾರಣವಾಯಿತು. DRS ತೀರ್ಪು ನೀಡಿದಾಗ ನಮಗೆಲ್ಲಾ ಅಚ್ಚರಿಯಾಗಿತ್ತು. ಹಲವು ಬಾರಿ DRS ತೀರ್ಪು ತಪ್ಪಾಗಿ ನೀಡಲಾಗಿದೆ. ಈ ಸರಣಿಯಲ್ಲಿ ಕೂಡ DRS ತಪ್ಪುಗಳಾಗಿದೆ ಎಂದು ಕೊಹ್ಲಿ ಆಕ್ರೋಶ ವ್ಯಕ್ತಪಡಿಸಿದರು.

Follow Us:
Download App:
  • android
  • ios