ನಾಗ್ಪುರ(ಮಾ.05): ಆಸ್ಟ್ರೇಲಿಯಾ ವಿರುದ್ದದ 2ನೇ ಏಕದಿನ ಪಂದ್ಯದಲ್ಲಿ ಟೀಂ ಇಂಜಿಯಾ 8 ರನ್ ರೋಚಕ ಗೆಲುವು ಸಾಧಿಸಿದೆ. ಅಂತಿಮ ಓವರ್‌ವರೆಗೂ ಗೆಲುವು ಯಾರಿಗೆ ಅನ್ನೋ ಕುತೂಹಲ ಮನೆ ಮಾಡಿತ್ತು. ಆದರೆ ಅದ್ಬುತ ದಾಳಿ ಸಂಘಟಿಸಿದ ಟೀಂ ಇಂಡಿಯಾ ಇನ್ನೂ 3 ಎಸೆತ ಬಾಕಿ ಇರುವಂತೆ ಗೆಲುವು ಸಾಧಿಸಿತು. ಈ ಮೂಲಕ 5 ಪಂದ್ಯಗಳ ಸರಣಿಯಲ್ಲಿ 2-0 ಮುನ್ನಡೆ ಸಾಧಿಸಿತು. ಇಷ್ಟೇ ಅಲ್ಲ ಭಾರತ  500 ಏಕದಿನ ಪಂದ್ಯ ಗೆದ್ದ ಏಷ್ಯಾದ ಮೊದಲ ಹಾಗೂ ವಿಶ್ವದ 2ನೇ ತಂಡ ಅನ್ನೋ ಹೆಗ್ಗಳಿಕೆಗೆ ಪಾತ್ರವಾಗಿದೆ.

ಇದನ್ನೂ ಓದಿ: ಸೆಕ್ಯೂರಿಟಿ ಕಣ್ತಪ್ಪಿಸಿ ಒಳ ನುಗ್ಗಿದ ಅಭಿಮಾನಿ ಜೊತೆ ಧೋನಿ ಫನ್!

ಗೆಲುವಿಗೆ 251 ರನ್ ಟಾರ್ಗೆಟ್ ಪಡೆದ ಆಸ್ಟ್ರೇಲಿಯಾಗೆ ನಾಯಕ ಆ್ಯರೋನ್ ಫಿಂಚ್ ಹಾಗೂ ಉಸ್ಮಾನ್ ಖವಾಜ ಉತ್ತಮ ಆರಂಭ ನೀಡಿದರು. ಮೊದಲ ವಿಕೆಟ್‌ಗೆ ಈ ಜೋಡಿ 83 ರನ್ ಜೊತೆಯಾಟ ನೀಡಿದರು. ಈ ಮೂಲಕ ಆರಂಭದಲ್ಲೇ  ಆಸಿಸ್ ಗೆಲುವಿನತ್ತ ಹೆಜ್ಜೆ ಇಟ್ಟಿದೆ.

ಫಿಂಚ್ 37 ರನ್  ಸಿಡಿಸಿ ಔಟಾದರು, ಖವಾಜ 37 ರನ್ ಕಾಣಿಕೆ ನೀಡಿದರು. ತಂಡಕ್ಕೆ ಕಮ್‌ಬ್ಯಾಕ್ ಮಾಡಿದ ಶಾನ್ ಮಾರ್ಶ್ 18 ರನ್ ಸಿಡಿಸಿ ಔಟಾಗೋ ಮೂಲಕ ನಿರಾಸೆ ಮೂಡಿಸಿದರು. ಗ್ಲೆನ್ ಮ್ಯಾಕ್ಸ್‌ವೆಲ್ ವಿಕೆಟ್ ಪತನದ ಮೂಲಕ ಟೀಂ ಇಂಡಿಯಾ ಪಂದ್ಯದ ಮೇಲೆ ಅಲ್ಪ ಹಿಡಿತ ಸಾಧಿಸಿತು. 

ಇದನ್ನೂ ಓದಿ: 40ನೇ ಶತಕ ಸಿಡಿಸಿದ ವಿರಾಟ್ ಕೊಹ್ಲಿ..!

ಆಸರೆಯಾಗಿದ್ದ ಪೀಟರ್ ಹ್ಯಾಂಡ್ಸ್‌ಕಾಂಬ್ 48 ರನ್ ಸಿಡಿಸಿ ರನೌಟ್ ಆದರು. ಮಾರ್ಕಸ್ ಸ್ಟೊಯ್ನಿಸ್ ಜೊತೆ ಇನ್ನಿಂಗ್ಸ್ ಕಟ್ಟಿದ ಅಲೆಕ್ಸ್ ಕ್ಯಾರಿ 22 ರನ್ ಸಿಡಿಸಿ ನಿರ್ಗಮಿಸಿದರು. ಒಂದೆಡೆ ಸ್ಟೊಯ್ನಿಸ್ ಹೋರಾಟ ಮುಂದುವರಿಸಿದರು. ಇದು ಆಸಿಸ್ ಪಾಳಯದಲ್ಲಿ ನಿರಾಳ ಮೂಡಿಸಿತು. ಆದರೆ ಮತ್ತೊಂದೆಡೆ ನತನ್ ಕೌಲ್ಟರ್ ನೈಲ್, ಪ್ಯಾಟ್ ಕಮಿನ್ಸ್ ವಿಕೆಟ್ ಪತನದ ಮೂಲಕ ಭಾರತ ಮೇಲುಗೈ ಸಾಧಿಸಿತು.

ಸ್ಟೋಯಿನ್ಸ್ ಬ್ಯಾಟಿಂಗ್ ಭಾರತಕ್ಕೆ ತಲೆ ನೋವು ಹೆಚ್ಚಿಸಿತು. ಆಕರ್ಷಕ ಅರ್ಧಶತಕ ಸಿಡಿಸೋ ಮೂಲಕ ಪಂದ್ಯದ ರೋಚಕತೆ ಮತ್ತಷ್ಟು ಹೆಚ್ಚಿಸಿದರು. ಅಂತಿಮ ಓವರ್‌ನಲ್ಲಿ ಆಸಿಸ್ ಗೆಲುವಿಗೆ 11 ರನ್ ಅವಶ್ಯಕತೆ ಇತ್ತು. ಮೊದಲ ಎಸೆತದಲ್ಲಿ ಸ್ಟೊಯ್ನಿಸ್ ವಿಕೆಟ್ ಪತನಗೊಂಡಿತು. ಇನ್ನು ಆಡ್ಯಮ್ ಜಂಪಾ ಕ್ಲೀನ್ ಬೋಲ್ಡ್ ಆಗೋ ಮೂಲಕ ಆಸ್ಟ್ರೇಲಿಯಾ 49.3 ಓವರ್‌ಗಳಲ್ಲಿ 242 ರನ್‌ಗೆ ಆಲೌಟ್ ಆಯಿತು. ಈ ಮೂಲಕ ಭಾರತ 8 ರನ್‍‌ಗಳ ರೋಚಕ ಗೆಲುವು ಸಾಧಿಸಿತು. 

ಇದನ್ನೂ ಓದಿ:ವಿರಾಟ್ ಕೊಹ್ಲಿ ಶತಕ ಕೊಂಡಾಡಿದ ಟ್ವಿಟರಿಗರು..!

ಮೊದಲು ಬ್ಯಾಟಿಂಗ್ ಮಾಡಿದ ಭಾರತ 48.2 ಓವರ್‌ಗಳಲ್ಲಿ 250 ರನ್‌ಗೆ ಆಲೌಟ್ ಆಯಿತು. ನಾಯಕ ವಿರಾಟ್ ಕೊಹ್ಲಿ ಏಕದಿನದಲ್ಲಿ 40ನೇ ಶತಕ ಸಿಡಿಸಿ ಮಿಂಚಿದರು. ಕೊಹ್ಲಿ 116 ರನ್ ಸಿಡಿಸಿದರೆ, ವಿಜಯ್ ಶಂಕರ್ 46 ರನ್ ಕಾಣಿಕೆ ನೀಡಿದರು.