ಕೊಹ್ಲಿ ಶತಕ, ಧೋನಿ ಅರ್ಧಶತಕ-ಭಾರತಕ್ಕೆ ಗೆಲುವಿನ ಪುಳಕ!

ಭಾರಿ ಕುತೂಹಲ ಕೆರಳಿಸಿದ ಭಾರತ ಹಾಗೂ ಆಸ್ಟ್ರೇಲಿಯಾ ನಡುವಿನ ದ್ವಿತೀಯ ಏಕದಿನ ಪಂದ್ಯ ಮುಕ್ತಾಯಗೊಂಡಿದೆ. ಆಸ್ಟ್ರೇಲಿಯಾ ನೀಡಿದ 299 ರನ್ ಗುರಿ ಬೆನ್ನಟ್ಟಿದ ಟೀಂ ಇಂಡಿಯಾ ಅಂತಿಮ ಓವರ್‌ನಲ್ಲಿ ಗೆಲುವು ಸಾಧಿಸಿದೆ. ಭಾರತದ ಗೆಲುವಿನ ಪ್ರದರ್ಶನದ ಹೈಲೈಟ್ಸ್.

India vs Australia ODI cricket Team India beat Australia by 6 wickets and level the series

ಆಡಿಲೆಡ್(ಜ.15): ಆಸ್ಟ್ರೇಲಿಯಾ ವಿರುದ್ದದ ದ್ವಿತೀಯ ಏಕದಿನ ಪಂದ್ಯದಲ್ಲಿ ಟೀಂ ಇಂಡಿಯಾ 6 ವಿಕೆಟ್‌ಗಳ ರೋಚಕ ಗೆಲುವು ಸಾಧಿಸಿದೆ. ಆಸ್ಟ್ರೇಲಿಯಾ ನೀಡಿದ 299 ರನ್ ಗುರಿ ಬೆನ್ನಟ್ಟಿದ  ಟೀಂ ಇಂಡಿಯಾ ವಿರಾಟ್ ಕೊಹ್ಲಿ ಶತಕ ಹಾಗೂ ಎಂ.ಎಸ್ ಧೋನಿ ಅರ್ಧಶತಕ ನೆರವಿನಿಂದ ಗೆಲುವಿನ ಕೇಕೆ ಹಾಕಿತು. ಈ ಮೂಲಕ ಸರಣಿಯನ್ನ ಜೀವಂತವಾಗಿರಿಸಿದೆ. 

ಗೆಲುವಿಗೆ ಬೃಹತ್ ಟಾರ್ಗೆಟ್ ಪಡೆದ ಟೀಂ ಇಂಡಿಯಾ ಉತ್ತಮ ಆರಂಭ ಪಡೆಯಿತು. ರೋಹಿತ್ ಶರ್ಮಾ ಹಾಗೂ ಶಿಖರ್ ಧವನ್ ಮೊದಲ ವಿಕೆಟ್‌ಗೆ 47 ರನ್ ಜೊತೆಯಾಟ ನೀಡಿದರು. ಧವನ್ 32 ರನ್ ಸಿಡಿಸಿ ಔಟಾದರು. ರೋಹಿತ್ ಶರ್ಮಾ 43 ರನ್ ಕಾಣಿಕೆ ನೀಡಿದರು. ಇನ್ನು ಅಂಬಾಟಿ ರಾಯುಡು 24 ರನ್ ಸಿಡಿಸಿ ಔಟಾದರು.

 

 

ಜವಾಬ್ದಾರಿ ಹೊತ್ತ ನಾಯಕ ವಿರಾಟ್ ಕೊಹ್ಲಿ ಆಸಿಸ್ ಬೌಲರ್‌ಗಳ ಬೆವರಿಳಿಸಿದರು. ಅದ್ಬುತ ಬ್ಯಾಟಿಂಗ್ ಪದರ್ಶನ ನೀಡಿದ ಕೊಹ್ಲಿ ಏಕದಿನದಲ್ಲಿ 39ನೇ ಶತಕ ಪೂರೈಸಿದರು. ಚೇಸಿಂಗ್‌ನಲ್ಲಿ ವಿರಾಟ್ ಕೊಹ್ಲಿ 24ನೇ ಶತಕ ಸಿಡಿಸಿದ ಹೆಗ್ಗಳಿಕೆಗೆ ಪಾತ್ರರಾದರೆ, ಆಡಿಲೆಡ್ ಕ್ರೀಡಾಂಗಣದಲ್ಲಿ 2ನೇ ಏಕದಿನ ಶತಕ ಪೂರೈಸಿದರು.

ಇದನ್ನೂ ಓದಿ: ಕೊಹ್ಲಿ 39ನೇ ಏಕದಿನ ಶತಕ - ಸಚಿನ್ ದಾಖಲೆ ಬ್ರೇಕ್

ಸೆಂಚುರಿ ಸಿಡಿಸಿದ ಕೊಹ್ಲಿ 103 ರನ್ ಸಿಡಿಸಿ ಔಟಾದರು. ಕೊಹ್ಲಿ ವಿಕೆಟ್ ಪತನವಾಗುತ್ತಿದಂತೆ ಟೀಂ ಇಂಡಿಯಾ ಅಭಿಮಾನಿಗಳ ಆತಂಕ ಹೆಚ್ಚಾಯಿತು. ಎಂ.ಎಸ್.ಧೋನಿ ಹಾಗೂ ದಿನೇಶ್ ಕಾರ್ತಿಕ್ ಅದ್ಬುತ ಜೊತೆಯಾಟ ಟೀಂ ಇಂಡಿಯಾ ಗೆಲುವಿನ ಆಸೆ ಚಿಗುರಿಸಿತು. 

ಅಂತಿಮ 6 ಎಸೆತದಲ್ಲಿ ಭಾರತಕ್ಕೆ 7 ರನ್‌ಗಳ ಅವಶ್ಯಕತೆ ಇತ್ತು. ಈ ವೇಳೆ ಧೋನಿ ಭರ್ಜರಿ ಸಿಕ್ಸರ್ ಸಿಡಿಸಿ ಆತಂಕ ದೂರ ಮಾಡಿದರು. ಇಷ್ಟೇ ಅಲ್ಲ ಅರ್ಧಶತಕ ಸಿಡಿಸಿ ಮಿಂಚಿದರು. ಇನ್ನು ನಾಲ್ಕು ಎಸೆತ ಬಾಕಿ ಇರುವಂತೆಯೇ ಧೋನಿ ಪಂದ್ಯ  ಫಿನೀಶ್ ಮಾಡಿದರು.  49.2 ಓವರ್‌ಗಳಲ್ಲಿ 4 ವಿಕೆಟ್ ಕಳೆದುಕೊಂಡು ಗೆಲುವು ಸಾಧಿಸಿತು. ಈ ಮೂಲಕ ಸರಣಿ 1-1 ಅಂತರದಲ್ಲಿ ಸಮಬಲ ಮಾಡಿಕೊಂಡಿತು. ಇದೀಗ ಎಲ್ಲರ ಚಿತ್ತ ಅಂತಿಮ ಏಕದಿನ ಪಂದ್ಯದತ್ತ ನೆಟ್ಟಿದೆ.

ಇದನ್ನೂ ಓದಿ: ಟೀಂ ಇಂಡಿಯಾ ಕ್ರಿಕೆಟಿಗರ ಕಪ್ ಆಫ್ ಟಿ - ಟ್ರೋಲ್ ಆದ ಹಾರ್ದಿಕ್ ಪಾಂಡ್ಯ!

ಮೊದಲು ಬ್ಯಾಟಿಂಗ್ ಮಾಡಿದ ಆಸ್ಟ್ರೇಲಿಯಾ 9 ವಿಕೆಟ್ ನಷ್ಟಕ್ಕೆ 298 ರನ್ ಸಿಡಿಸಿತು. ಶಾನ್ ಮಾರ್ಶ್ 131 ರನ್ ಸಿಡಿಸಿ ತಂಡಕ್ಕೆ ನೆರವಾದರು. ಇನ್ನು ಸ್ಫೋಟಕ ಬ್ಯಾಟಿಂಗ್ ಪ್ರದರ್ಶನ ನೀಡಿದ ಗ್ಲೆನ್ ಮ್ಯಾಕ್ಸ್‌ವಲ್ 48 ರನ್ ಚಚ್ಚಿದರು. ಈ ಮೂಲಕ ಆಸಿಸ್ ಭಾರತಕ್ಕೆ 299 ರನ್ ಸಿಡಿಸಿತು. ಭಾರತದ ಪರ ಭುವನೇಶ್ವರ್ ಕುಮಾರ್ 4 ಹಾಗೂ ಮೊಹಮ್ಮದ್ ಶಮಿ 3 ವಿಕೆಟ್ ಕಬಳಿಸಿದರು.
 

Latest Videos
Follow Us:
Download App:
  • android
  • ios