ವಿರಾಟ್ ಕೊಹ್ಲಿ 39ನೇ ಏಕದಿನ ಶತಕ- ಗೆಲುವಿನತ್ತ ಭಾರತ!
ಆಸ್ಟ್ರೇಲಿಯಾ ವಿರುದ್ಧ ಗೆಲ್ಲಲೇಬೇಕಾದ 2ನೇ ಏಕದಿನ ಪಂದ್ಯದಲ್ಲಿ ನಾಯಕ ವಿರಾಟ್ ಕೊಹ್ಲಿ ಸೆಂಚುರಿ ಸಿಡಿಸಿದ್ದಾರೆ. ಆಸ್ಟ್ರೇಲಿಯಾ ನೀಡಿದ ಬೃಹತ್ ಟಾರ್ಗೆಟ್ ಬೆನ್ನಟ್ಟುತ್ತಿರುವ ಕೊಹ್ಲಿ ಗೆಲುವಿನತ್ತ ಹೆಜ್ಜೆ ಇಟ್ಟಿದ್ದಾರೆ. ಕೊಹ್ಲಿ ಸೆಂಚುರಿ ಪರ್ಫಾಮೆನ್ಸ್ ಹೈಲೈಟ್ಸ್ ಇಲ್ಲಿದೆ.
ಆಡಿಲೆಡ್(ಜ.15): ಆಸ್ಟ್ರೇಲಿಯಾ ವಿರುದ್ಧದ 2ನೇ ಏಕದಿನ ಪಂದ್ಯದಲ್ಲಿ ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಆಕರ್ಷಕ ಶತಕ ಸಿಡಿಸಿ ಮಿಂಚಿದ್ದಾರೆ. ಈ ಮೂಲಕ ಏಕದಿನ ಕ್ರಿಕೆಟ್‌ನಲ್ಲಿ 39 ನೇ ಶತಕ ದಾಖಲಿಸಿದ ಹೆಗ್ಗಳಿಕೆಗೆ ಕೊಹ್ಲಿ ಪಾತ್ರರಾದರು.
💯😎#KingKohli brings up his 39th ODI century 👏👏#AUSvIND pic.twitter.com/pDPx1vXMtH
— BCCI (@BCCI) January 15, 2019
ಆಡಿಲೆಡ್ ಏಕದಿನ ಪಂದ್ಯದಲ್ಲಿ 299 ರನ್ ಬೃಹತ್ ಟಾರ್ಗೆಟ್ ಪಡೆದ ಟೀಂ ಇಂಡಿಯಾ ಉತ್ತರಂ ಆರಂಭ ಪಡೆಯಿತು. ಶಿಖರ್ ಧವನ್ 32 ಹಾಗೂ ರೋಹಿತ್ ಶರ್ಮಾ 43 ರನ್ ಸಿಡಿಸಿ ಔಟಾದರು. ಆದರೆ ವಿರಾಟ್ ಕೊಹ್ಲಿ ಅದ್ಬುತ ಪ್ರದರ್ಶನದ ಮೂಲಕ ಆಸಿಸ್ ಬೌಲರ್‌ಗಳ ಬೆವರಿಳಿಸಿದರು.108 ಎಸೆತಗಳಲ್ಲಿ 5 ಬೌಂಡರಿ ಹಾಗೂ 2 ಸಿಕ್ಸರ್ ನೆರವಿನಿಂದ ವಿರಾಟ್ ಕೊಹ್ಲಿ ಸೆಂಚುರಿ ಪೂರೈಸಿದರು. ಚೇಸಿಂಗ್‌ನಲ್ಲಿ ವಿರಾಟ್ ಕೊಹ್ಲಿ 24ನೇ ಶತಕ ಸಿಡಿಸಿದ ಹೆಗ್ಗಳಿಕೆಗೆ ಪಾತ್ರರಾದರು. ಇಷ್ಟೇ ಅಲ್ಲ ಆಡಿಲೆಡ್ ಕ್ರೀಡಾಂಗಣದಲ್ಲಿ 2ನೇ ಏಕದಿನ ಶತಕ ಪೂರೈಸಿದರು.