ಇಂದು ನಡೆದ ಪಂದ್ಯದಲ್ಲಿ ಮನ್'ಪ್ರೀತ್ ಸಿಂಗ್ ನೇತೃತ್ವದ ಹಾಕಿ ಟೀಂ ಇಂಡಿಯಾ ಆರಂಭದಿಂದಲೇ ಆಕ್ರಮಣಕಾರಿ ಆಟಕ್ಕೆ ಮುಂದಾಯಿತು.

ಭುವನೇಶ್ವರ(ಡಿ.01): ಯುವ ಆಟಗಾರ ಮನ್‌'ದೀಪ್ ಸಿಂಗ್ ಅವರ ಆಕರ್ಷಕ ಗೋಲಿನ ನೆರವಿನಿಂದ ಭಾರತ ತಂಡ, ಹಾಕಿ ವಿಶ್ವ ಲೀಗ್ ಫೈನಲ್ ಪಂದ್ಯಾವಳಿಯಲ್ಲಿ ಆಸ್ಟ್ರೇಲಿಯಾ ವಿರುದ್ಧ 1-1 ಗೋಲುಗಳೊಂದಿಗೆ ಡ್ರಾ ಸಾಧಿಸಿದೆ.

ಇಂದು ನಡೆದ ಪಂದ್ಯದಲ್ಲಿ ಮನ್'ಪ್ರೀತ್ ಸಿಂಗ್ ನೇತೃತ್ವದ ಹಾಕಿ ಟೀಂ ಇಂಡಿಯಾ ಆರಂಭದಿಂದಲೇ ಆಕ್ರಮಣಕಾರಿ ಆಟಕ್ಕೆ ಮುಂದಾಯಿತು. ಪಂದ್ಯದ 20ನೇ ನಿಮಿಷದಲ್ಲಿ ಮನ್‌'ದೀಪ್ ಸಿಂಗ್ ಬಾರಿಸಿದ ಭರ್ಜರಿ ಗೋಲಿನ ನೆರವಿನಿಂದ 1-0 ಮುನ್ನಡೆ ಕಾಯ್ದುಕೊಂಡಿತ್ತು. ಆದರೆ ಇದಾದ ಕೇವಲ ಒಂದು ನಿಮಿಷದಲ್ಲಿ ಆಸ್ಟ್ರೇಲಿಯಾದ ಜೆರ್ಮಿ ಹೇವಾರ್ಡ್ ಮಿಂಚಿನ ಗೋಲು ದಾಖಲಿಸುವ ಮೂಲಕ 1-1 ಗೋಲುಗಳ ಸಮಬಲ ಸಾಧಿಸುವಂತೆ ಮಾಡಿದರು.

ಆ ಬಳಿಕ ಉಭಯ ತಂಡಗಳು ಗೋಲುಗಳಿಸಲು ಹರಸಾಹಸಪಟ್ಟರೂ ಗೋಲುಗಳಿಸಲು ಸಾಧ್ಯವಾಗಲಿಲ್ಲ. ಹೀಗಾಗಿ ಪಂದ್ಯ ಡ್ರಾನಲ್ಲಿ ಅಂತ್ಯವಾಯಿತು.

ಈ ಪಂದ್ಯವು ಭಾರತ ಹಾಕಿ ತಂಡದ ನಾಯಕ ಮನ್'ಪ್ರೀತ್ ಸಿಂಗ್ ಪಾಲಿಗೆ 200ನೇ ಅಂತರಾಷ್ಟ್ರೀಯ ಪಂದ್ಯವಾಡಿದ ಸಾಧನೆ ಮಾಡಿದರು.