ಏಕದಿನ ಸರಣಿಗೆ ಬಲಿಷ್ಠ ಆಸಿಸ್ ತಂಡ ಪ್ರಕಟ
ಸ್ಫೋಟಕ ಬ್ಯಾಟ್ಸ್’ಮನ್’ಗಳಾದ ಕ್ರಿಸ್ ಲಿನ್, ಟ್ರಾವಿಸ್ ಹೆಡ್, ಡಾರ್ಶಿ ಶಾರ್ಟ್, ಬೆನ್ ಮೆಕ್’ಡರ್ಮಾಟ್ ಅವರನ್ನು ಕೈಬಿಡಲಾಗಿದ್ದು, ಸ್ಪಿನ್ನರ್ ಆಸ್ಟನ್ ಅಗರ್ ಹಾಗೂ ನಾಥನ್ ಕೌಲ್ಟರ್’ನಿಲ್ ಅವರಿಗೆ ವಿಶ್ರಾಂತಿ ನೀಡಲಾಗಿದೆ.
ಸಿಡ್ನಿ[ಜ.04]: ಇದೇ ತಿಂಗಳ 12ರಿಂದ ಭಾರತ ವಿರುದ್ಧ ಆರಂಭವಾಗಲಿರುವ ಮೂರು ಪಂದ್ಯಗಳ ಏಕದಿನ ಸರಣಿಗೆ 14 ಆಟಗಾರರನ್ನೊಳಗೊಂಡ ಆಸ್ಟ್ರೇಲಿಯಾ ತಂಡವನ್ನು ಪ್ರಕಟಿಸಲಾಗಿದ್ದು, ಬರೋಬ್ಬರಿ 8 ವರ್ಷಗಳ ಬಳಿಕ ಏಕದಿನ ತಂಡದಲ್ಲಿ ವೇಗಿ ಪೀಟರ್ ಸಿಡಲ್ ಸ್ಥಾನ ಪಡೆದಿದ್ದಾರೆ. ಆ್ಯರೋನ್ ಫಿಂಚ್ ತಂಡವನ್ನು ಮುನ್ನಡೆಸಲಿದ್ದಾರೆ.
ವೇಗಿ ಪೀಟರ್ ಸಿಡಲ್, ಅನುಭವಿ ಸ್ಪಿನ್ನರ್ ನೇಥನ್ ಲಯನ್ ಹಾಗೂ ಉಸ್ಮಾನ್ ಖ್ವಾಜಾ ತಂಡವನ್ನು ಕೂಡಿಕೊಂಡಿದ್ದಾರೆ. ಆದರೆ ಸ್ಫೋಟಕ ಬ್ಯಾಟ್ಸ್’ಮನ್’ಗಳಾದ ಕ್ರಿಸ್ ಲಿನ್, ಟ್ರಾವಿಸ್ ಹೆಡ್, ಡಾರ್ಶಿ ಶಾರ್ಟ್, ಬೆನ್ ಮೆಕ್’ಡರ್ಮಾಟ್ ಅವರನ್ನು ಕೈಬಿಡಲಾಗಿದ್ದು, ಸ್ಪಿನ್ನರ್ ಆಸ್ಟನ್ ಅಗರ್ ಹಾಗೂ ನಾಥನ್ ಕೌಲ್ಟರ್’ನಿಲ್ ಅವರಿಗೆ ವಿಶ್ರಾಂತಿ ನೀಡಲಾಗಿದೆ. ಅಲ್ಲದೇ ಬಾರ್ಡರ್-ಗವಾಸ್ಕರ್ ಟೆಸ್ಟ್ ಸರಣಿಯಲ್ಲಿ ಪಾಲ್ಗೊಂಡ ತ್ರಿವಳಿ ವೇಗಿಗಳಾದ ಮಿಚೆಲ್ ಸ್ಟಾರ್ಕ್, ಪ್ಯಾಟ್ ಕಮ್ಮಿನ್ಸ್ ಹಾಗೂ ಜೋಸ್ ಹ್ಯಾಜಲ್’ವುಡ್ ಅವರಿಗೂ ಆಯ್ಕೆ ಸಮಿತಿ ವಿಶ್ರಾಂತಿ ನೀಡಿದೆ. ಹೀಗಾಗಿ ಜೆ ರಿಚರ್ಡ್’ಸನ್, ಜೇಸನ್ ಬೆಹ್ರನ್’ಡ್ರಾಪ್, ಪೀಟರ್ ಸಿಡಲ್ ಹಾಗೂ ಬಿಲ್ಲಿ ಸ್ಟ್ಯಾನ್’ಲೇಕ್ ವೇಗದ ಸಾರಥ್ಯ ವಹಿಸಲಿದ್ದಾರೆ.
ಸಿಡ್ನಿ ಟೆಸ್ಟ್: ಎರಡನೇ ದಿನ ಭಾರತದ್ದೇ ದರ್ಬಾರ್
ತ್ರಿವಳಿ ವೇಗಿಗಳನ್ನು ಶ್ರೀಲಂಕಾ ವಿರುದ್ಧದ ಸರಣಿಗೆ ಆಯ್ಕೆ ಮಾಡಲು ನಿರ್ಧರಿಸಿರುವುದಾಗಿ ಆಯ್ಕೆ ಸಮಿತಿ ಮುಖ್ಯಸ್ಥ ಟ್ರೆವರ್ ಹೋನ್ಸ್ ತಿಳಿಸಿದ್ದಾರೆ.
ಸಿಡ್ನಿ ಟೆಸ್ಟ್‌ನಲ್ಲಿ ಶತಕದ ಅಬ್ಬರ - ಪಂತ್ ಈಗ ದಾಖಲೆಗಳ ಸರದಾರ!
ಮೂರು ಪಂದ್ಯಗಳ ಏಕದಿನ ಸರಣಿಯ ಮೊದಲ ಪಂದ್ಯ ಜನವರಿ 12 ರಂದು ಸಿಡ್ನಿ ಮೈದಾನದಲ್ಲಿ ನಡೆಯಲಿದ್ದು, ಆ ಬಳಿಕ ಜನವರಿ 15 ಹಾಗೂ 18ರಂದು ಕ್ರಮವಾಗಿ ಅಡಿಲೇಡ್ ಮತ್ತು ಮೆಲ್ಬರ್ನ್ ಮೈದಾನದಲ್ಲಿ ನಡೆಯಲಿದೆ.
ಹೀಗಿದೆ ಆಸ್ಟ್ರೇಲಿಯಾ ತಂಡ:
ಆ್ಯರೋನ್ ಫಿಂಚ್[ನಾಯಕ], ಉಸ್ಮಾನ್ ಖ್ವಾಜಾ, ಶಾನ್ ಮಾರ್ಷ್, ಪೀಟರ್ ಸಿಡಲ್, ಪೀಡರ್ ಹ್ಯಾಂಡ್ಸ್’ಕಂಬ್, ಗ್ಲೇನ್ ಮ್ಯಾಕ್ಸ್’ವೆಲ್, ಮಾರ್ಕಸ್ ಸ್ಟೋನಿಸ್, ಮಿಚೆಲ್ ಮಾರ್ಷ್, ಅಲೆಕ್ಸ್ ಕ್ಯಾರಿ, ಜೆ ರಿಚರ್ಡ್’ಸನ್, ಬಿಲ್ಲಿ ಸ್ಟ್ಯಾನ್’ಲೇಕ್, ಜೇಸನ್ ಬೆಹ್ರನ್’ಡ್ರಾಪ್, ನೇಥನ್ ಲಯನ್, ಆ್ಯಡಂ ಜಂಪಾ.