ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಬ್ಯಾಟಿಂಗ್‌ಗೆ ಮಾರುಹೋಗದವರಿಲ್ಲ. ಇದೀಗ ಆಸ್ಟ್ರೇಲಿಯಾ ದಿಗ್ಗಜ ವಿಕೆಟ್ ಕೀಪರ್ ಆ್ಯಡಂ ಗಿಲ್‌ಕ್ರಿಸ್ಟ್ ಕೊಹ್ಲಿಯನ್ನ ದಿಗ್ಗಜ ಎಂದಿದ್ದಾರೆ. ಕೊಹ್ಲಿ ಜೊತೆಗಿನ ಮಾತುಕತೆಯನ್ನ ಇನ್‌ಸ್ಟಾಗ್ರಾಂನಲ್ಲಿ ಪೋಸ್ಟ್ ಮಾಡಿದ್ದಾರೆ.
ಗಾಬಾ(ನ.20): ಆಸ್ಪ್ರೇಲಿಯಾದ ದಿಗ್ಗಜ ಕ್ರಿಕೆಟಿಗ ಆ್ಯಡಂ ಗಿಲ್‌ಕ್ರಿಸ್ಟ್, ಭಾರತ ತಂಡದ ನಾಯಕ ವಿರಾಟ್ ಕೊಹ್ಲಿಯನ್ನು ಕೊಂಡಾಡಿದ್ದಾರೆ. ಕೊಹ್ಲಿ ಜತೆ ಆಸ್ಪ್ರೇಲಿಯಾದ ಸುದ್ದಿ ವಾಹಿನಿಯೊಂದಕ್ಕೆ ಸಂದರ್ಶನ ನಡೆಸಿದ ಬಳಿಕ, ತಮ್ಮ ಇನ್‌ಸ್ಟಾಗ್ರಾಂ ಖಾತೆಯಲ್ಲಿ ವಿರಾಟ್ ಜತೆಗಿನ ಫೋಟೋಗಳನ್ನು ಹಾಕಿದ್ದು, ‘ಈ ದಿಗ್ಗಜನ ಜತೆ ಕೂತು ಮಾತನಾಡುವ ಅವಕಾಶ ಸಿಕ್ಕಿತು. ಕೊಹ್ಲಿಯ ಕ್ರಿಕೆಟ್ ಜ್ಞಾನ ನನ್ನಲ್ಲಿ ಅಚ್ಚರಿ ಮೂಡಿಸಿದೆ’ ಎಂದು ಬರೆದಿದ್ದಾರೆ. ಕೊಹ್ಲಿ ಹಾಗೂ ಗಿಲ್‌ಕ್ರಿಸ್ಟ್ ಫೋಟೋಗಳು ಸಾಮಾಜಿಕ ತಾಣಗಳಲ್ಲಿ ವೈರಲ್ ಆಗಿವೆ.
ಟೀಂ ಇಂಡಿಯಾದ ಅಭ್ಯಾಸದ ವೇಳೆ ಆ್ಯಡಂ ಗಿಲ್‌ಕ್ರಿಸ್ಟ್ ಆಗಮಿಸಿದ್ದರು. ಬಳಿಕ ವಿರಾಟ್ ಕೊಹ್ಲಿ ಜೊತೆ ಮಾತುಕತೆ ನಡೆಸಿದರು. ಭಾರತ ಹಾಗೂ ಆಸ್ಟ್ರೇಲಿಯಾ ನಡುವಿನ ಟಿ20 ಸರಣಿ ನವೆಂಬರ್ 21ರಿಂದ ಆರಂಭಗೊಳ್ಳಲಿದೆ. 3 ಪಂದ್ಯದ ಟಿ20 ಸರಣಿಯಲ್ಲಿ ಭಾರತ ಗೆಲುವಿನ ವಿಶ್ವಾಸದಲ್ಲಿದೆ.
ಟಿ20 ಸರಣಿ ಬಳಿಕ ಭಾರತ ಹಾಗೂ ಆಸ್ಟ್ರೇಲಿಯಾ 4 ಟೆಸ್ಟ್ ಹಾಗೂ 3 ಏಕದಿನ ಪಂದ್ಯದ ಸರಣಿ ಆಡಲಿದೆ. ಈ ಬಾರಿ ಗೆಲುವಿನ ವಿಶ್ವಾಸದಲ್ಲಿರುವ ಟೀಂ ಇಂಡಿಯಾ ಶುಭಾರಂಭ ಮಾಡಲು ಕಾದುಕುಳಿತಿದೆ.
