ಭಾರತ ಹಾಗೂ ಆಸ್ಟ್ರೇಲಿಯಾ ಮುಖಾಮುಖಿ ಕ್ರಿಕೆಟ್ ಅಭಿಮಾನಿಗಳ ಕುತೂಹಲವನ್ನ ಇಮ್ಮಡಿಗೊಳಿಸುವುದರಲ್ಲಿ ಯಾವುದೇ ಅನುಮಾನವಿಲ್ಲ. ಉಭಯ ತಂಡಗಳಿಗೂ ಇದು ಪ್ರತಿಷ್ಠೆಯ ಕದನ. ಹೀಗಾಗಿ ಇಲ್ಲಿ ಯಾರು ಕೂಡ  ಸೋಲನ್ನ ಸಹಿಸಲ್ಲ. ಭಾರತ ಹಾಗೂ ಆಸ್ಟ್ರೇಲಿಯಾ ನಡುವಿನ ಸರಣಿಯ ಸಂಪೂರ್ಣ ವೇಳಾಪಟ್ಟಿ ಇಲ್ಲಿದೆ.

ಬ್ರಿಸ್ಬೇನ್(ನ.19): ಭಾರತ ಹಾಗೂ ಆಸ್ಟ್ರೇಲಿಯಾ ಸರಣಿಗೆ ಕೌಂಟ್‌ಡೌನ್ ಶುರುವಾಗಿದೆ. ಬರೋಬ್ಬರಿ 2 ತಿಂಗಳು ನಡೆಯಲಿರುವ ಈ ಪ್ರತಿಷ್ಠಿತ ಸರಣಿ ನ.21 ರಿಂದ ಆರಂಭವಾಗಲಿದೆ. ವಿರಾಟ್ ಕೊಹ್ಲಿ ನೇತೃತ್ವದ ಟೀಂ ಇಂಡಿಯಾ ಈಗಾಗಲೇ ಆಸಿಸ್ ನಾಡಿನಲ್ಲಿ ಬೀಡುಬಿಟ್ಟಿದೆ. 

 ಇದನ್ನೂ ಓದಿ: ಆಸ್ಟ್ರೇಲಿಯಾ ಸರಣಿಗೆ ಆಯ್ಕೆಯಾದ ಟೀಂ ಇಂಡಿಯಾ ಕ್ರಿಕೆಟಿಗರು ಯಾರು?

ಬಾಲ್ ಟ್ಯಾಂಪರಿಂಗ್ ಪ್ರಕರಣದಿಂದ ನಿಷೇಧಕ್ಕೊಳಗಾಗಿರುವ ಸ್ಟೀವ್ ಸ್ಮಿತ್ ಹಾಗೂ ಡೇವಿಡ್ ವಾರ್ನರ್ ಅನುಪಸ್ಥಿತಿಯಿಂದ ಆಸ್ಟ್ರೇಲಿಯಾ ಕಂಗಾಲಾಗಿದೆ. ಇದೇ ಅವಕಾಶವನ್ನ ಸರಿಯಾಗಿ ಉಪಯೋಗಿಸಿಕೊಳ್ಳಲು ಟೀಂ ಇಂಡಿಯಾ ರೆಡಿಯಾಗಿದೆ. 3 ಟಿ20, 4 ಟೆಸ್ಟ್ ಹಾಗೂ 3 ಏಕದಿನ ಪಂದ್ಯಗಳ ಸರಣಿ ನವೆಂಬರ್ 21 ರಿಂದ ಜನವರಿ 18ರವರೆಗೆ ನಡೆಯಲಿದೆ. ಟಿ20 ಸರಣಿ ಮುಗಿದ ಬಳಿಕ ನ.29 ರಿಂದ ಡಿ.01ರ ವರೆಗೆ ಅಭ್ಯಾಸ ಪಂದ್ಯ ಕೂಡ ನಡೆಯಲಿದೆ.

ಭಾರತ-ಆಸ್ಟ್ರೇಲಿಯಾ ಟಿ20 ಸರಣಿ:

ದಿನಾಂಕಪಂದ್ಯ-ಕ್ರೀಡಾಂಗಣಸಮಯ
ನ.211ನೇ ಟಿ20- ಬ್ರಿಸ್ಬೇನ್1.20 PM
ನ.232ನೇ ಟಿ20 -ಮೆಲ್ಬೋರ್ನ್1.20 PM
ನ.253ನೇ ಟಿ20- ಸಿಡ್ನಿ 1.20 PM

ಭಾರತ-ಆಸ್ಟ್ರೇಲಿಯಾ ಟೆಸ್ಟ್ ಸರಣಿ:

ದಿನಾಂಕಪಂದ್ಯ-ಕ್ರೀಡಾಂಗಣಸಮಯ
ಡಿ.6 ರಿಂದ ಡಿ.10 (2018)1ನೇ ಟೆಸ್ಟ್ - ಆಡಿಲೇಡ್5.30AM
ಡಿ.14 ರಿಂದ ಡಿ.18 (2018)2ನೇ ಟೆಸ್ಟ್ - ಪರ್ತ್7.50 AM
ಡಿ.26 ರಿಂದ ಡಿ.30 (2018)3ನೇ ಟೆಸ್ಟ್ -ಮೆಲ್ಬೋರ್ನ್5.00 AM
ಜ.03 ರಿಂದ ಜ.07 (2019)4ನೇ ಟೆಸ್ಟ್- ಸಿಡ್ನಿ5.00 AM

ಭಾರತ-ಆಸ್ಟ್ರೇಲಿಯಾ ಏಕದಿನ ಸರಣಿ:

ದಿನಾಂಕಪಂದ್ಯ-ಕ್ರೀಡಾಂಗಣಸಮಯ
ಜ.12, 20181ನೇ ಏಕದಿನ, ಸಿಡ್ನಿ8.50 AM
ಜ.15, 20182ನೇ ಏಕದಿನ, ಆಡಿಲೇಡ್8.50 AM
ಜ.18, 20183ನೇ ಏಕದಿನ, ಮೆಲ್ಬೋರ್ನ್8.50 AM

ಇದನ್ನೂ ಓದಿ: ಇಂಡೋ-ಆಸಿಸ್ ಕ್ರಿಕೆಟ್: ಕಾಂಗರೂಗಳಿಗೆ ಶುರುವಾಯ್ತು ಹಿಟ್‌ಮ್ಯಾನ್ ಭಯ!