ಸದ್ಯ ಕಾಂಗರೂಗಳು ಸೇಡು ತೀರಿಸಿಕೊಳ್ಳಲು ಹೊಂಚು ಹಾಕುತ್ತಿವೆ. ಏಕದಿನ ಸರಣಿಯಲ್ಲಿ ಹೋದ ಅವಮಾನವನ್ನ ಇಂದಿನಿಂದ ಶುರುವಾಗೋ ಟಿ20 ಸರಣಿಯನ್ನ ಜಯಿಸಿ ಬಡ್ಡಿ ಸಮೇತವಾಗಿ ತೀರಿಸಲು ಸ್ಮಿತ್​ ಪಡೆ ಫುಲ್​​ ಸಜ್ಜಾಗಿ ನಿಂತಿದೆ. ಆದ್ರೆ ಹಾಗಾಗಬಾರದು, ಟೀಂ ಇಂಡಿಯಾ ಇಂದು ಗೆಲ್ಲಲೇಬೇಕು. ಈ ಬಾರಿಯ ವೀಕೆಂಡ್​​ ಸಖತ್ತಾಗಿ ಇರಬೇಕಂದ್ರೆ ಹುಲಿಗಳ ರಾಜ, ಟೀಂ ಇಂಡಿಯಾ ನಾಯಕ ವಿರಾಟ್​​ ಕೊಹ್ಲಿ ಅಬ್ಬರಿಸಲೇಬೇಕು. ಇಂದು ಆತನ ಬ್ಯಾಟ್​​ ಘರ್ಜಿಸಿದ್ರೆ ಮಾತ್ರ ಇಂದು ಟೀಂ ಇಂಡಿಯಾಗೆ ಗೆಲ್ಲಲು ಸಾಧ್ಯ.

ಟಿ20 ಫಾರ್ಮಾಟ್'​​ನಲ್ಲಿ ಕೊಹ್ಲಿಯೇ ರಾಜ

ಸದ್ಯ ಟೀಂ ಇಂಡಿಯಾ ಮತ್ತು ಆಸ್ಟ್ರೇಲಿಯಾ ಪಡೆಯನ್ನ ನೋಡಿದ್ರೆ ಕೊಂಚ ಆಸೀಸ್​​ ಬಲಿಷ್ಠವಾಗಿ ಕಾಣ್ತಿದೆ. ಅಷ್ಟೇ ಅಲ್ಲ ಇಂದು ಟೀಂ ಇಂಡಿಯಾ ಸಂಪೂರ್ಣವಾಗಿ ನಂಬಿಕೊಂಡಿರೋದು ನಾಯಕನನ್ನ. ಕಾರಣ ಸದ್ಯ ಟಿ20 ಫಾರ್ಮೆಟ್​ನಲ್ಲಿ ಕೊಹ್ಲಿಯೇ ಕಿಂಗ್​​. ಟಿ20 ಕ್ರಿಕೆಟ್​​'ನ ಆಳುತ್ತಿರುವುದೇ ವಿರಾಟ್​​ ಕೊಹ್ಲಿ. ಈತನ ಟಿ20 ರೆಕಾರ್ಡ್​ ನೋಡಿದರೆ ಎಂತಹ ಬಲಿಷ್ಠ ತಂಡವಾದರೂ ಒಮ್ಮೆ ಬೆಚ್ಚಿಬೀಳುತ್ತೆ.

ವಿರಾಟ್​​ ಕೊಹ್ಲಿ ಟಿ20 ಪರ್ಫಾಮೆನ್ಸ್​​ ಹೀಗಿದೆ. ಒಟ್ಟು 50 ಟಿ20 ಪಂದ್ಯಗಳನ್ನಾಡಿರುವ ಕೊಹ್ಲಿ 1830 ರನ್​ ಕಲೆಹಾಕಿದ್ದಾರೆ. 53.82ರ ಸರಾಸರಿಯಲ್ಲಿ ಬ್ಯಾಟ್​​​ ಮಾಡಿದ್ದು ಬರೊಬ್ಬರಿ 136.16ರ ಸ್ಟ್ರೈಕ್​ ರೇಟ್​​ ಅನ್ನ ಹೊಂದಿದ್ದಾರೆ. ಇದರಲ್ಲಿ 17 ಅರ್ಧಶತಕ ಕೂಡ ದಾಖಲಿಸಿದ್ದಾರೆ.

ಈ ರೆಕಾರ್ಡ್​ ನೋಡ್ತಿದ್ರೇನೆ ಗೊತ್ತಾಗುತ್ತೆ ಕೊಹ್ಲಿ ಟಿ20ಯಲ್ಲೂ ಹೇಗೆಲ್ಲಾ ಅಬ್ಬರಿಸಿದ್ದಾರೆ ಅಂತ. ಆದ್ರೆ ಅವರ ಈ ರೆರ್ಕಾಡ್​​ ಈ ಪರಿ ಹೆಚ್ಚಾಗಲು ಕಾರಣ ಒನ್ಸ್​​ ಅಗೈನ್​ ಕಾಂಗರೂಗಳೇ. ಹೌದು, ಕೊಹ್ಲಿ ಆಸ್ಟ್ರೇಲಿಯಾ ವಿರುದ್ಧ ಟಿ20 ಫಾರ್ಮೆಟ್​ನಲ್ಲಿ ಅಬ್ಬರಿಸಿರುವಷ್ಟು ಇನ್ಯಾವ ತಂಡದ ವಿರುದ್ಧವೂ ಅಬ್ಬರಿಸಿಲ್ಲ.

ಆಸ್ಟ್ರೇಲಿಯಾ ವಿರುದ್ಧ 9 ಟಿ20 ಪಂದ್ಯಗಳನ್ನಾಡಿರುವ ಕೊಹ್ಲಿ 401 ರನ್​ಗಳನ್ನ ಕಲೆಹಾಕಿದ್ದಾರೆ. 66.83ರ ಸರಾಸರಿ ಹೊಂದಿದ್ದರು 144.76ರ ಸ್ಟ್ರೈಕ್​ ರೇಟ್​​​ ಕಾಪಾಡಿಕೊಂಡಿದ್ದಾರೆ.​ ಇದರಲ್ಲಿ 4 ಅರ್ಧಶತಕ ಕೂಡ ದಾಖಲಿಸಿದ್ದಾರೆ.

ಈ ಅಂಕಿ ಅಂಶಗಳನ್ನ ನೋಡ್ತಿದ್ರೆ ಇಂದು ಸೇಡು ತೀರಿಸಿಕೊಳ್ಳೋ ಆಸೀಸ್'​​​ಗಳ ಆಸೆಗೆ ಕೊಹ್ಲಿಯೇ ತಣ್ಣೀರು ಎರಚುವಂತೆ ಕಾಣ್ತಿದೆ. ಅಷ್ಟೇ ಅಲ್ಲ ಇಂದಿನ ಪಂದ್ಯದ ಟ್ರಂಪ್​ ಕಾರ್ಡ್​ ಕೂಡ ವಿರಾಟ್​​ ಕೊಹ್ಲಿಯೇ. ಸದ್ಯ ಟೀಂ ಇಂಡಿಯಾ ನಾಯಕ ರನ್​​ ಬರ ಎದುರಿಸುತ್ತಿದ್ದಾರೆ. ಟಿ20 ಕ್ರಿಕೆಟ್​ನಲ್ಲಿ ಚೊಚ್ಚಲ ಶತಕ ಬೇರೆ ದಾಖಲಿಸಬೇಕಿದೆ. ಹೀಗಾಗಿ ಇಂದು ತಮ್ಮ ನೆಚ್ಚಿನ ಎದುರಾಳಿಗಳ ವಿರುದ್ಧ ಆರ್ಭಟಿಸೋದು ಖಚಿತ.