ಇಂಡೋ-ಅಫ್ಘಾನ್ ಟೆಸ್ಟ್: 200 ರನ್ ಗಡಿ ದಾಟಿದ ಟೀಂಇಂಡಿಯಾ

India vs Afghanistan test Vijay carries hosts past 200 after Dhawan's dismissal
Highlights

ಭಾರತ ಹಾಗೂ ಅಫ್ಘಾನಿಸ್ತಾನ ಟೆಸ್ಟ್ ಪಂದ್ಯದಲ್ಲಿ ಟೀಂಇಂಡಿಯಾ ಬೃಹತ್ ಮೊತ್ತದತ್ತ ದಾಪುಗಾಲಿಟ್ಟಿದೆ. ಭಾರತದ ಸ್ಕೋರ್ ಹಾಗೂ ಕ್ಷಣ ಕ್ಷಣದ ಮಾಹಿತಿ ಇಲ್ಲಿದೆ.

ಬೆಂಗಳೂರು(ಜೂನ್.14): ಅಫ್ಘಾನಿಸ್ತಾನ ವಿರುದ್ದ ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಆರಂಭಗೊಂಡಿರುವ ಐತಿಹಾಸಿಕ ಟೆಸ್ಟ್ ಪಂದ್ಯದಲ್ಲಿ ಭಾರತ ಬೃಹತ್ ಮೊತ್ತದತ್ತ ದಾಪುಗಾಲಿಟ್ಟಿದೆ. ಟಾಸ್ ಗೆದ್ದು ಬ್ಯಾಟಿಂಗ್ ಇಳಿದಿರುವ ಭಾರತ 200 ರನ್ ಗಡಿ ದಾಟಿದೆ.

ಆರಂಭಿಕ ಶಿಖರ್ ಧವನ್ ಸಿಡಿಸಿದ ಭರ್ಜರಿ ಶತಕ ಹಾಗೂ ಮುರಳಿ ವಿಜಯ್ ಸಿಡಿಸಿದ ಅರ್ಧಶತಕದ ನೆರವಿನಿಂದ ಭಾರತ ದಿಟ್ಟ ಹೋರಾಟ ನೀಡುತ್ತಿದೆ. ಶಿಖರ್ ಧವನ್ 107  ರನ್ ಸಿಡಿಸಿ ಔಟಾದರು. ಆದರೆ ಮುರಳಿ ವಿಜಯ್  ಹಾಗೂ ಕೆಎಲ್ ರಾಹುಲ್ ಜೊತೆಯಾಟದಿಂದ ಭಾರತ ಭೋಜನ ವಿರಾಮಕ್ಕೂ ಮೊದಲೇ 200 ರನ್ ಗಡಿ ದಾಟಿದೆ.

ಶತಕ ಸಿಡಿಸಿ ಶಿಖರ್ ಧವನ್ ಔಟ್: ಮುರಳಿ ವಿಜಯ್ ಅರ್ಧಶತಕ

ಮುರಳಿ ವಿಜಯ್ ಅಜೇಯ 75 ರನ್ ಸಿಡಿಸಿ ಕ್ರೀಸ್‌ನಲ್ಲಿದ್ದರೆ, ಕೆಎಲ್ ರಾಹುಲ್ ಅಜೇಯ 19 ರನ್ ಸಿಡಿಸಿ ಆಡುತ್ತಿದ್ದಾರೆ. ಸದ್ಯ ಭಾರತ 1 ವಿಕೆಟ್ ನಷ್ಟಕ್ಕೆ 215 ರನ್ ಸಿಡಿಸಿದೆ.
ಇಂಡೋ-ಆಫ್ಘಾನ್ ಟೆಸ್ಟ್: ಬೌಂಡರಿಗಳ ಸುರಿಮಳೆಯೊಂದಿಗೆ ಧವನ್ ಶತಕ

loader